ಚೆನ್ನೈ (ತಮಿಳುನಾಡು): ಭಾರತ ಆಸ್ಟ್ರೇಲಿಯಾ ತಂಡವನ್ನು ಆರು ವಿಕೆಟ್‌ಗಳಿಂದ ಪರಾಜಯಗೊಳಿಸಿದೆ. ಪಂದ್ಯದ ಬಳಿಕ ಮಾತನಾಡಿದ ಭಾರತ ತಂಡದ ನಾಯಕ ರೋಹಿತ್ ಶರ್ಮಾ, ತಂಡದ ಗೆಲುವಿಗೆ ಹರ್ಷ ವ್ಯಕ್ತಪಡಿಸಿದರು. ವಿಭಿನ್ನ ಪರಿಸ್ಥಿತಿಗಳಲ್ಲಿ ಉತ್ತಮವಾಗಿ ಆಡುವುದು ತಮ್ಮ ತಂಡದ ಮುಂದೆ ಇರುವ ದೊಡ್ಡ ಸವಾಲು ಎಂದರು. ಯಾವ ಅಂಗಳದಲ್ಲಿ ಆಟ ನಡೆಯುತ್ತೆ ಎನ್ನುವುದರ ಮೇಲೆ ತಂಡದ ಸಂಯೋಜನೆಯಲ್ಲಿ ಬದಲಾವಣೆಗಳಾಗಬಹುದು ಎಂಬ ಸುಳಿವನ್ನೂ ಇದೇ ವೇಳೆ ಅವರು ನೀಡಿದರು.
"ನಾವು ವಿಭಿನ್ನ ಪರಿಸ್ಥಿತಿಗಳಲ್ಲಿ ಆಡುವ ಕಾರಣ ಅದು ಮುಂದೆ ಸಾಗುವ ಹಾದಿ ದೊಡ್ಡ ಸವಾಲಿನಿಂದ ಕೂಡಿರಲಿದೆ . ಕೆಲವು ಸಂದರ್ಭಗಳಲ್ಲಿ ಸಂಯೋಜನೆಗಳನ್ನು ಬದಲಾಯಿಸಬೇಕಾಗಬಹುದು ಮತ್ತು ತಂಡವಾಗಿ ನಾವು ಆ ಕೆಲಸ ಮಾಡಲು ನಾವು ಸಿದ್ಧರಿದ್ದೇವೆ" ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
ಶೂನ್ಯಕ್ಕೆ ಔಟ್ ಆದ ರೋಹಿತ್ ಶರ್ಮಾ ತಂಡದ ಫೀಲ್ಡಿಂಗ್ ಬಗ್ಗೆ ವಿಶೇಷವಾಗಿ ಸಂತಸ ವ್ಯಕ್ತಪಡಿಸಿದರು. ವಿಶೇಷವಾಗಿ ಫೀಲ್ಡಿಂಗ್ ಬಗ್ಗೆ ಅವರು ಗುಣಗಾನ ಮಾಡಿದರು. ’’ ಫೀಲ್ಡಿಂಗ್ನಲ್ಲಿ ನಾವು ನಿಜವಾಗಿಯೂ ಉತ್ತಮ ಪ್ರಯತ್ನವನ್ನು ಮಾಡಿದ್ದೇವೆ‘‘ ಎಂದರು.
ಭಾರತ ತಂಡ ಅಗ್ರ ಕ್ರಮಾಂಕದ ಮೂವರು ಆಟಗಾರರನ್ನು ಶೂನ್ಯಕ್ಕೆ ಕಳೆದುಕೊಂಡಿತ್ತು. ಕೇವಲ 2 ರನ್ಗೆ ಮೂರು ಮಹತ್ವದ ವಿಕೆಟ್ಗಳನ್ನು ಆಸೀಸ್ ಆಟಗಾರರು ಪಡೆದುಕೊಂಡಿದ್ದರು. ಈ ಸಮಯದಲ್ಲಿ ನಾವು ಆತಂಕಕ್ಕೆ ಒಳಗಾಗಿದ್ದೆವು. ಇಂತಹ ಸಂಕಷ್ಟದ ಸಮಯದಲ್ಲಿ ನೆರವಾಗಿದ್ದು ವಿರಾಟ್ ಹಾಗೂ ರಾಹುಲ್ ಎಂದು ರೋಹಿತ್ ನೆನಪಿಸಿಕೊಂಡರು. ವಿರಾಟ್ ಮತ್ತು ಕೆಎಲ್ ಗೆ ಹ್ಯಾಟ್ಸ್ ಆಫ್ ಎಂದ ಮುಂಬೈಕರ್, ಅವರು ಮ್ಯಾಚ್ ವಿನ್ನಿಂಗ್ ಜೊತೆಯಾಟ ನೀಡಿದ್ದು, ಅದಕ್ಕಾಗಿ ಅವರು ಕ್ರೀಸ್ಗೆ ಅಂಟಿಕೊಂಡು ನಿಂತ ಬಗೆಯನ್ನು ಹೊಗಳಿದರು.
ಇನ್ನು ಆಸ್ಟ್ರೇಲಿಯದ ನಾಯಕ ಪ್ಯಾಟ್ ಕಮ್ಮಿನ್ಸ್ ಮಾತನಾಡಿ, ನಾವು ಸ್ಪರ್ಧಾತ್ಮಕ ಮೊತ್ತಕ್ಕಿಂತ ಸುಮಾರು 50 ರನ್ಗಳ ಕೊರತೆ ಎದುರಿಸಿದೆವು. ಇನ್ನು ಕನಿಷ್ಠ 50 ರನ್ಗಳ ಅಗತ್ಯ ಇತ್ತು. ಭಾರತ ನಿಜವಾಗಿಯೂ ಉತ್ತಮ ಬೌಲಿಂಗ್ ದಾಳಿ ನಡೆಸಿತ್ತು ಎಂದರು. ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಕೊಹ್ಲಿ, ಮಿಚೆಲ್ ಮಾರ್ಷ್ ಅವರು ನೀಡಿದ ಜೀವದಾನದಿಂದ ದೊಡ್ಡ ಮೊತ್ತ ಕಲೆ ಹಾಕಿದರು. "ನಾನು ಈಗಾಗಲೇ ಅದನ್ನು ಮರೆತಿದ್ದೇನೆ ಎಂದೂ ಸೇರಿಸಿದರು.
ಇನ್ನು ಅಜೇಯರಾಗಿ ಪಂದ್ಯ ಮುಗಿಸಿದ ಕೆಎಲ್ ರಾಹುಲ್ ಮಾತನಾಡಿ, ಟೆಸ್ಟ್ ಕ್ರಿಕೆಟ್‌ನಂತೆ ಕಷ್ಟದ ಅವಧಿಯಲ್ಲಿ ಸಂಯಮದಿಂದ ಆಡಲು ನನಗೆ ವಿರಾಟ್ ಕೊಹ್ಲಿ ಸಲಹೆ ನೀಡಿದರು ಎಂದರು. "ಪ್ರಾಮಾಣಿಕವಾಗಿ ಹೇಳಬೇಕೆಂದರೆ, (ಕೋಹ್ಲಿ ಜೊತೆ) ಹೆಚ್ಚು ಮಾತುಕತೆ ಇರಲಿಲ್ಲ. ನಾನು ನನ್ನ ಉಸಿರನ್ನು ಮರಳಿ ಪಡೆಯಲು ಪ್ರಯತ್ನಿಸುತ್ತಿದ್ದೆ. ಸ್ವಲ್ಪ ಸಮಯದವರೆಗೆ ಟೆಸ್ಟ್ ಕ್ರಿಕೆಟ್‌ನಂತೆ ಆಟವಾಡಿದೆ ಎಂದು ರಾಹುಲ್ ಹೇಳಿದರು‘‘ ಎಂದರು.
ಭಾರತವು ಮುಂದಿನ ಪಂದ್ಯವನ್ನು ಅಕ್ಟೋಬರ್ 11 ರಂದು ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಅಫ್ಘಾನಿಸ್ತಾನ ತಂಡದ ವಿರುದ್ಧ ಆಡಲಿದೆ. ಇನ್ನು ಆಸ್ಟ್ರೇಲಿಯಾ ತಂಡ ಅಕ್ಟೋಬರ್ 12 ರಂದು ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ.
ಇದನ್ನು ಓದಿ: ನಾನು ಸಿಎಸ್ಕೆ ಪರ ಆಡುತ್ತೇನೆ, ಇಲ್ಲಿನ ಪರಿಸ್ಥಿತಿಗಳು ನನಗೆ ತಿಳಿದಿವೆ, ಇದೊಂದು ತುಂಬಿದ ಮನೆ: ರವೀಂದ್ರ ಜಡೇಜಾ