ETV Bharat / sports

ವಿಶ್ವಕಪ್ ಕ್ರಿಕೆಟ್: ಭಾರತ ತಂಡ ಸಶಕ್ತಗೊಳಿಸಲು ಗಮನಹರಿಸಿದ ಮುಖ್ಯ ಕೋಚ್ ರಾಹುಲ್ ದ್ರಾವಿಡ್, ನಾಯಕ ರೋಹಿತ್ ಶರ್ಮಾ... - ಆಸ್ಟ್ರೇಲಿಯಾ ವಿರುದ್ಧದ ಪಂದ್ಯ

Cricket World Cup 2023: ರೋಹಿತ್ ಶರ್ಮಾ ನಾಯಕತ್ವದಲ್ಲಿ ಅಕ್ಟೋಬರ್ 8 ರಂದು ಆಸ್ಟ್ರೇಲಿಯಾ ವಿರುದ್ಧದ ಪಂದ್ಯದೊಂದಿಗೆ ಭಾರತ ಕ್ರಿಕೆಟ್ ತಂಡವು 2023 ರ ವಿಶ್ವಕಪ್ ಅಭಿಯಾನ ಪ್ರಾರಂಭಿಸಲಿದೆ. ಈ ತಂಡದಲ್ಲಿ ಒಂದಕ್ಕಿಂತ ಹೆಚ್ಚು ಶ್ರೇಷ್ಠ ಆಟಗಾರರಿದ್ದಾರೆ. ರಾಹುಲ್ ದ್ರಾವಿಡ್ ತಂಡದಲ್ಲಿ ಮುಖ್ಯ ಕೋಚ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಚೆನ್ನೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ರಾಹುಲ್ ದ್ರಾವಿಡ್ ವಿಶ್ವಕಪ್ ಯೋಜನೆಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

ಮುಖ್ಯ ಕೋಚ್ ರಾಹುಲ್ ದ್ರಾವಿಡ್
India head coach Rahul Dravid
author img

By ETV Bharat Karnataka Team

Published : Oct 7, 2023, 7:07 AM IST

ಚೆನ್ನೈ (ತಮಿಳುನಾಡು): ಭಾರತೀಯ ಕ್ರಿಕೆಟ್ ತಂಡವು ತನ್ನ ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ಅಭಿಯಾನವನ್ನು ಅಕ್ಟೋಬರ್ 8 ರಂದು ಆಸ್ಟ್ರೇಲಿಯಾ ವಿರುದ್ಧದ ಪಂದ್ಯದೊಂದಿಗೆ ಪ್ರಾರಂಭಿಸಲಿದೆ. ಈ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಶಾಂತ ಸ್ವಭಾವಕ್ಕೆ ಹೆಸರುವಾಸಿಯಾಗಿದ್ದಾರೆ. ಜೊತೆಗೆ ಪಂದ್ಯದ ಸಮಯದಲ್ಲಿ ಅತ್ಯುತ್ತಮ ತಂತ್ರಗಳನ್ನು ಹೆಣೆಯುತ್ತಾರೆ. ಈ ವಿಶ್ವಕಪ್ ಬಗ್ಗೆ ರಾಹುಲ್ ತುಂಬಾ ಸಕಾರಾತ್ಮಕವಾಗಿದ್ದಾರೆ. ನಾಯಕ ರೋಹಿತ್ ಶರ್ಮಾ ಅವರ ಈ ತಂಡವು ತುಂಬಾ ಬಲಿಷ್ಠವಾಗಿದೆ. ವಿಶ್ವಕಪ್ ಪ್ರಶಸ್ತಿಯನ್ನು ಗೆಲ್ಲುವ ಪ್ರಬಲ ಸ್ಪರ್ಧಿ ಎಂದು ಅವರು ಪರಿಗಣಿಸಿದ್ದಾರೆ. ರಾಹುಲ್​ ದ್ರಾವಿಡ್​ ಶುಕ್ರವಾರ ತಮ್ಮ ವಿಶ್ವಕಪ್ ಅಭಿಯಾನದ ಆರಂಭಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮುಕ್ತವಾಗಿ ಮಾತನಾಡಿದ್ದಾರೆ. ಇದರೊಂದಿಗೆ ಕೋಚ್ ಪಾತ್ರದ ಮೇಲೂ ಬೆಳಕು ಚೆಲ್ಲಿದ್ದಾರೆ.

ರಾಹುಲ್ ದ್ರಾವಿಡ್ ಮುಕ್ತ ಮಾತು:

  • ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಹುಲ್ ದ್ರಾವಿಡ್ ಅವರು, 'ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಒಮ್ಮೆ ಆಟ ಪ್ರಾರಂಭವಾದರೆ, ಆ ತಂಡವು ನಾಯಕನಿಗೆ ಸೇರಿರುತ್ತದೆ. ಮುಂದೆ ಸಾಗಬೇಕಾದ ತಂಡ ಇದಾಗಿದ್ದು, ತಂಡಕ್ಕೆ ತಿಳಿಸಿದ್ದನ್ನು ಮೈದಾನದಲ್ಲಿ ಅಳವಡಿಸಿಕೊಳ್ಳಬೇಕು. ಈ ತಂಡದ ಆಟಗಾರರು ತಮ್ಮ ಆಟದ ಮೇಲೆಯೇ ಗಮನ ಕೇಂದ್ರೀಕರಿಸಬೇಕಾಗುತ್ತದೆ. ತರಬೇತುದಾರನ ಕೆಲಸ ಎಂದರೆ ತಂಡವನ್ನು ಸಿದ್ಧಪಡಿಸುವುದು, ತಂಡವನ್ನು ನಿರ್ಮಿಸುವುದು ಮತ್ತು ಆಟಗಾರರಲ್ಲಿ ಸರಿಯಾದ ಮನಸ್ಥಿತಿಯನ್ನು ಕಾಪಾಡಿಕೊಳ್ಳುವುದು.
  • 'ತರಬೇತುದಾರರಾಗಿ ನಾವು, ಪಂದ್ಯಾವಳಿಯಲ್ಲಿ ಒಂದೇ ಒಂದು ರನ್ ಅಥವಾ ಒಂದೇ ಒಂದು ವಿಕೆಟ್ ಪಡೆಯದ ಕೆಲ ಸಂದರ್ಭದಲ್ಲಿ, ಆಟಗಾರರನ್ನು ಬೆಂಬಲಿಸಬೇಕಾಗುತ್ತದೆ. ಜೊತೆಗೆ ಮೈದಾನಕ್ಕೆ ಬಂದಾಗ ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡುತ್ತಾರೆ ಎಂಬ ನಂಬಿಕೆ ನಮಗಿದೆ.
  • ವಿಶ್ವಕಪ್‌ನಲ್ಲಿ ಸುರಕ್ಷಿತ ಸ್ಕೋರ್ ಯಾವುದು ಎಂದು ಕೇಳಿದ ಪ್ರಶ್ನೆಗೆ ನಗುತ್ತಲೇ ಪ್ರತಿಕ್ರಿಯಿಸಿದ ದ್ರಾವಿಡ್ ಅವರು, 'ಎದುರಾಳಿಗಿಂತ ಕೇವಲ ಒಂದು ರನ್ ಹೆಚ್ಚು. ಈ ಅಂಕವು ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಪ್ರತಿಯೊಂದು ಮೈದಾನವು ವಿಭಿನ್ನ ಆಗಿರುತ್ತದೆ ಮತ್ತು ವಿಭಿನ್ನ ಪರಿಸ್ಥಿತಿಗಳನ್ನು ಹೊಂದಿರುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಯಾವುದೇ ಪಿಚ್‌ನಲ್ಲಿ ಸುರಕ್ಷಿತ ಸ್ಕೋರ್ ಅನ್ನು ಊಹಿಸುವುದು ಸರಿಯಲ್ಲ.
  • ಭಾರತ ತಂಡವು ವಿವಿಧ ಸ್ಥಳಗಳು ಮತ್ತು ಪಿಚ್‌ಗಳಲ್ಲಿ ಪಂದ್ಯಗಳನ್ನು ಆಡಬೇಕಾಗಿದೆ. ಈ ಕುರಿತು ಮಾತನಾಡಿದ ದ್ರಾವಿಡ್, ಪ್ರತಿಯೊಂದು ಸ್ಥಳವೂ ವಿಭಿನ್ನವಾಗಿರುತ್ತದೆ. ಅದು ಹೇಗಿದೆ ಎಂಬುದನ್ನು ನಾವು ನಿರ್ಣಯಿಸಬೇಕು ಮತ್ತು ನೋಡಬೇಕಾಗುತ್ತದೆ. ವಿಶ್ವಕಪ್‌ನಲ್ಲಿ ನಾವು ವಿಭಿನ್ನ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಬೇಕಾಗುತ್ತದೆ.
  • ವಿಶ್ವಕಪ್‌ನ ಆರಂಭಿಕ ಪಂದ್ಯದಲ್ಲಿ ರಾಚಿನ್ ರವೀಂದ್ರ ಅವರ ಸ್ಫೋಟಕ ಶತಕವನ್ನು ನೀವು ನೋಡಿದ್ದೀರಾ ಎಂದು ರಾಹುಲ್ ದ್ರಾವಿಡ್ ಅವರನ್ನು ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ಹೌದು ನಾನು ಈ ಇನ್ನಿಂಗ್ಸ್ ಅನ್ನು ಬಿಟ್ ಆ್ಯಂಡ್ ಪೀಸ್ ನಲ್ಲಿ ನೋಡಿದ್ದೇನೆ. ಇಬ್ಬರೂ (ರಾಚಿನ್ ರವೀಂದ್ರ ಮತ್ತು ಡೆವೊನ್ ಕಾನ್ವೇ) ಚೆನ್ನಾಗಿ ಆಡಿದ್ದಾರೆ ಎಂದು ನಾನು ಭಾವಿಸಿದೆ. ಅವರು ಪಂದ್ಯಾವಳಿಯಲ್ಲಿ ನ್ಯೂಜಿಲೆಂಡ್‌ಗೆ ನಿಜವಾಗಿಯೂ ಉತ್ತಮ ಆರಂಭವನ್ನು ನೀಡಿದರು. ಪಂದ್ಯಾವಳಿ ಮುಂದುವರೆದಂತೆ ಕ್ರಿಕೆಟ್‌ನ ಉತ್ಸಾಹವು ಹೆಚ್ಚಾಗುತ್ತದೆ ಎಂದು ತೋರುತ್ತಿದೆ.
  • ಇದಾದ ನಂತರ ದ್ರಾವಿಡ್, 'ನಾನು ಇನ್ನು ಮುಂದೆ ನನ್ನನ್ನು ಆಟಗಾರ ಎಂದು ಭಾವಿಸುವುದಿಲ್ಲ. ನಾಯಕ ರೋಹಿತ್ ಶರ್ಮಾ ಅವರ ದೃಷ್ಟಿಕೋನವನ್ನು ನಾನು ಬೆಂಬಲಿಸುತ್ತೇನೆ ಎಂದಿದ್ದಾರೆ.

ರಾಹುಲ್ ದ್ರಾವಿಡ್, ರೋಹಿತ್ ಶರ್ಮಾಗೆ ಐಸಿಸಿ ಟ್ರೋಫಿ ಗೆಲ್ಲುವ ಅವಕಾಶ..: ರೋಹಿತ್ ಶರ್ಮಾ ಬಗ್ಗೆ ದ್ರಾವಿಡ್ ಅವರು ಪ್ರಬಲ ನಾಯಕ ಎಂದು ಹೇಳಿದ್ದಾರೆ. ಅತ್ಯುತ್ತಮ ಕ್ಷಣಗಳಲ್ಲಿ ತಂಡಕ್ಕಾಗಿ ಅತ್ಯುತ್ತಮ ಪ್ರದರ್ಶನ ತೋರಿದ್ದಾರೆ. ಇದಕ್ಕೂ ಮುನ್ನ ರೋಹಿತ್ ಶರ್ಮಾ 2022ರ ಟಿ20 ವಿಶ್ವಕಪ್‌ನಲ್ಲಿ ತಂಡವನ್ನು ಸೆಮಿಫೈನಲ್‌ಗೆ ಕೊಂಡೊಯ್ದಿದ್ದರು. ಆ ಸಮಯದಲ್ಲೂ ಟೀಂ ಇಂಡಿಯಾದ ಕೋಚ್ ರಾಹುಲ್ ದ್ರಾವಿಡ್. ಭಾರತ ತಂಡವು ಸಾಮಾನ್ಯವಾಗಿ ನಾಕೌಟ್ ಪಂದ್ಯಗಳಲ್ಲಿ ವಿಭಜನೆಯಾಗುತ್ತದೆ ಮತ್ತು ಫೈನಲ್‌ಗೆ ಓಟದ ಮುಂಚೆಯೇ ಹೊರಹಾಕಲ್ಪಡುತ್ತದೆ. ಭಾರತವು ತನ್ನ ಕೊನೆಯ ಐಸಿಸಿ ಪಂದ್ಯಾವಳಿಯನ್ನು ಚಾಂಪಿಯನ್ಸ್ ಟ್ರೋಫಿ ರೂಪದಲ್ಲಿ 2013 ರಲ್ಲಿ ಧೋನಿ ನಾಯಕತ್ವದಲ್ಲಿ ಗೆದ್ದುಕೊಂಡಿತ್ತು. ಈಗ ರೋಹಿತ್ ಶರ್ಮಾ ಅವರ ಈ ತಂಡವು ಕೋಚ್ ರಾಹುಲ್ ದ್ರಾವಿಡ್ ಜೊತೆಗೆ ಐಸಿಸಿ ವಿಶ್ವಕಪ್ 2023 ರ ಪ್ರಶಸ್ತಿಯನ್ನು ಗೆಲ್ಲುವ ಅವಕಾಶವನ್ನು ಹೊಂದಿದೆ.

ಇದನ್ನೂ ಓದಿ: ಶುಭ್‌ಮನ್ ಗಿಲ್ ಅನುಪಸ್ಥಿತಿಯಲ್ಲಿ ಆರಂಭಿಕರಾಗಿ ಕಿಶನ್ ಕಣಕ್ಕೆ; ಕೋಚ್​ ದ್ರಾವಿಡ್​ ಹೇಳಿದ್ದೇನು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.