ETV Bharat / sports

ವಿಶ್ವಕಪ್​ 2023: ವರ್ಲ್ಡ್​​ಕಪ್​​ ಇತಿಹಾಸದ ಟಾಪ್​ 5 ಅತ್ಯುತ್ತಮ ಫೀಲ್ಡರ್​ಗಳು ಇವರೇ ನೋಡಿ... - ಏಕದಿನ ವಿಶ್ವಕಪ್​ 2023

Cricket World Cup 2023: ವಿಶ್ವಕಪ್​ ಇತಿಹಾಸದಲ್ಲಿ ಟಾಪ್​ ಐವರು ಫೀಲ್ಡರ್​ಗಳ ಕುರಿತ ಈಟಿವಿ ಭಾರತ ವಿಶೇಷ ವರದಿ ಇಲ್ಲಿದೆ. ​

ಸನತ್​ ಜಯಸೂರ್ಯ
ಸನತ್​ ಜಯಸೂರ್ಯ
author img

By ETV Bharat Karnataka Team

Published : Oct 5, 2023, 1:19 PM IST

Updated : Oct 5, 2023, 1:59 PM IST

ಹೈದರಾಬಾದ್​: ಇಂದಿನಿಂದ ಕ್ರಿಕೆಟ್​ ವಿಶ್ವಕಪ್​ ಹಬ್ಬ ಪ್ರಾರಂಭಗೊಳ್ಳಲ್ಲಿದೆ. ಮೊದಲ ಪಂದ್ಯ ಇಂಗ್ಲೆಂಡ್​ ಮತ್ತು ನ್ಯೂಜಿಲ್ಯಾಂಡ್​​​ ನಡುವೆ ನಡೆಯಲಿದೆ. ಅಕ್ಟೋಬರ್ 8 ರಂದು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ಮತ್ತು ಭಾರತದ ನಡುವೆ ಪಂದ್ಯ ನಡೆಯಲಿದೆ. ಈ ಮೂಲಕ ಭಾರತ ವಿಶ್ವಕಪ್​ ಅಭಿಯಾನವನ್ನು ಪ್ರಾರಂಭಿಸಲಿದೆ.

ಎಲ್ಲಾ ತಂಡಗಳು ಟ್ರೋಫಿ ಎತ್ತಿಹಿಡಿಯುವ ಉದ್ದೇಶದಿಂದಲೇ ವಿಶ್ವಕಪ್​​ನಲ್ಲಿ ಪಾಲ್ಗೊಳ್ಳಲಿವೆ. ಪಂದ್ಯದಲ್ಲಿ ಬ್ಯಾಟರ್‌ಗಳು ಮತ್ತು ಬೌಲರ್‌ಗಳ ಜೊತೆಗೆ ಫೀಲ್ಡರ್‌ಗಳು ಕೂಡ ಪ್ರಮುಖ ಪಾತ್ರ ವಹಿಸುತ್ತಾರೆ. ಇಂದು ನಾವು ಪ್ರತಿಷ್ಠಿತ ಟೂರ್ನಿಯ ಇತಿಹಾಸದಲ್ಲಿ ಅಗ್ರ ಐದು ಫೀಲ್ಡರ್‌ಗಳ ಬಗ್ಗೆ ಹೇಳುತ್ತಿದ್ದೇವೆ. ಆ ಐದು ಫೀಲ್ಡರ್​​ಗಳ ವಿವರ ಇಂತಿದೆ.

ರಿಕಿ ಪಾಂಟಿಂಗ್​: ಕ್ರಿಕೆಟ್​ ವಿಶ್ವಕಪ್‌ ಇತಿಹಾಸದಲ್ಲಿ ಅಗ್ರ ಐದು ಫೀಲ್ಡರ್‌ಗಳ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರ ಹೆಸರು ಮುಂಚೂಣಿಯಲ್ಲಿದೆ. ಪಾಂಟಿಂಗ್ ಅವರು 1996 ಮತ್ತು 2011ರ ನಡುವಿನ ವಿಶ್ವಕಪ್‌ನಲ್ಲಿ ಒಟ್ಟು 46 ಪಂದ್ಯಗಳನ್ನು ಆಡಿದ್ದಾರೆ. ಅದರಲ್ಲಿ ಒಟ್ಟು 28 ಕ್ಯಾಚ್‌ಗಳನ್ನು ಪಡೆದಿದ್ದಾರೆ. ಒಂದೇ ಪಂದ್ಯದಲ್ಲಿ ಮೂರು ಕ್ಯಾಚ್​​ಗಳನ್ನು ಪಡೆದಿರುವುದು ಗರಿಷ್ಠವಾಗಿದೆ. ಕ್ಯಾಚ್‌ಗಳ ಸರಾಸರಿ 0.608 ಆಗಿದೆ.

ಜೋ ರೂಟ್: ವಿಶ್ವಕಪ್‌ನ ಟಾಪ್​ 5 ಫೀಲ್ಡರ್‌ಗಳ ಪಟ್ಟಿಯಲ್ಲಿ ಇಂಗ್ಲೆಂಡ್ ಆಟಗಾರ ಜೋ ರೂಟ್ ಹೆಸರು ಎರಡನೇ ಸ್ಥಾನದಲ್ಲಿದೆ. ರೂಟ್ 2015 ಮತ್ತು 2019ರ ಎರಡು ಏಕದಿನ ವಿಶ್ವಕಪ್‌ಗಳನ್ನು ಆಡಿದ್ದಾರೆ. ಇದರಲ್ಲಿ ಒಟ್ಟು 17 ಪಂದ್ಯಗಳನ್ನು ಆಡಿರುವ ಅವರು 20 ಕ್ಯಾಚ್‌ ಪಡೆದುಕೊಂಡಿದ್ದಾರೆ. ರೂಟ್ ಪಂದ್ಯವೊಂದರಲ್ಲಿ ಗರಿಷ್ಠ ಮೂರು ಕ್ಯಾಚ್‌ಗಳನ್ನು ಪಡೆದಿದ್ದಾರೆ. ಕ್ಯಾಚ್‌ಗಳ ಸರಾಸರಿ 1.176 ಆಗಿದೆ

ಸನತ್​ ಜಯಸೂರ್ಯ: ಶ್ರೀಲಂಕಾದ ಮಾಜಿ ಆರಂಭಿಕ ಬ್ಯಾಟರ್​ ಸನತ್ ಜಯಸೂರ್ಯ ವಿಶ್ವಕಪ್​ ಇತಿಹಾಸದಲ್ಲಿ ಮೂರನೇ ಅತ್ಯುತ್ತಮ ಫೀಲ್ಡರ್​ ಆಗಿದ್ದಾರೆ. ಅವರು 1992 ರಿಂದ 2007 ರವರೆಗಿನ ವಿಶ್ವಕಪ್ ಪಂದ್ಯಗಳಲ್ಲಿ ಭಾಗವಹಿಸಿದ್ದಾರೆ. ಇದರಲ್ಲಿ ಒಟ್ಟು 38 ಪಂದ್ಯಗಳಲ್ಲಿ 18 ಕ್ಯಾಚ್‌ಗಳನ್ನು ಪಡೆದಿದ್ದಾರೆ. ಪಂದ್ಯವೊಂದರಲ್ಲಿ ಪಡೆದ ಗರಿಷ್ಠ ಕ್ಯಾಚ್‌ಗಳು ಎರಡು ಆಗಿದೆ. ಅವರ ಸರಾಸರಿ ಕ್ಯಾಚ್‌ಗಳು 0.473 ಆಗಿದೆ.

ಕ್ರಿಸ್ ಗೇಲ್: ವಿಶ್ವಕಪ್‌ನ ಅಗ್ರ ಐದು ಫೀಲ್ಡರ್‌ಗಳ ಪಟ್ಟಿಯಲ್ಲಿ ವೆಸ್ಟ್ ಇಂಡೀಸ್‌ನ ಮಾಜಿ ಸ್ಪೋಟಕ ಬ್ಯಾಟರ್​ ಕ್ರಿಸ್​ಗೇಲ್ ಅವರ ಹೆಸರು ನಾಲ್ಕನೇ ಸ್ಥಾನದಲ್ಲಿದೆ. ಗೇಲ್ 2003 ರಿಂದ 2019 ರವರೆಗಿನ ವಿಶ್ವಕಪ್​ಗಳಲ್ಲಿ 35 ಪಂದ್ಯಗಳನ್ನು ಆಡಿದ್ದು ಇದರಲ್ಲಿ 17 ಕ್ಯಾಚ್‌ಗಳನ್ನು ಪಡೆದಿದ್ದಾರೆ. ವಿಶ್ವಕಪ್‌ನಲ್ಲಿ ಅವರ ಸರಾಸರಿ ಕ್ಯಾಚ್‌ಗಳು 0.485 ಆಗಿದೆ.

ಫಾಫ್ ಡು ಪ್ಲೆಸಿಸ್: ದಕ್ಷಿಣ ಆಫ್ರಿಕಾದ ಫಾಫ್ ಡು ಪ್ಲೆಸಿಸ್ ಈ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ. 2011ರಿಂದ 2019ರವರೆಗೆ 23 ವಿಶ್ವಕಪ್​ ಪಂದ್ಯಗಳನ್ನು ಆಡಿರುವ ಅವರು ಒಟ್ಟು 16 ಕ್ಯಾಚ್‌ಗಳನ್ನು ಪಡೆದಿದ್ದಾರೆ. ಪಂದ್ಯವೊಂದರಲ್ಲಿ ಗರಿಷ್ಠ ಎರಡು ಕ್ಯಾಚ್‌ಗಳನ್ನು ಪಡೆದಿದ್ದಾರೆ. ಅವರ ಕ್ಯಾಚ್‌ಗಳ ಸರಾಸರಿ 0.727 ಆಗಿದೆ.

ಇದನ್ನೂ ಓದಿ: ಏಕದಿನ ವಿಶ್ವಕಪ್​ 2023 : ಇಂದಿನಿಂದ ಕ್ರಿಕೆಟ್​ ವಿಶ್ವಕಪ್​ ಹಬ್ಬ ಶುರು.. ಇಂಗ್ಲೆಂಡ್​, ನ್ಯೂಜಿಲೆಂಡ್​ ನಡುವೆ ಮೊದಲ ಫೈಟ್ ​ ​

Last Updated : Oct 5, 2023, 1:59 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.