ETV Bharat / sports

ಚೊಚ್ಚಲ ವಿಶ್ವಕಪ್​ನಲ್ಲಿ ರವೀಂದ್ರ, ಕಾನ್ವೆ ಅಬ್ಬರದ ಶತಕ: ಹಾಲಿ ಚಾಂಪಿಯನ್​ ಇಂಗ್ಲೆಂಡ್​ ಮಣಿಸಿದ ನ್ಯೂಜಿಲೆಂಡ್ ಶುಭಾರಂಭ

ಐಸಿಸಿ ಏಕದಿನ ವಿಶ್ವಕಪ್​ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಇಂಗ್ಲೆಂಡ್​ ಮಣಿಸಿದ ನ್ಯೂಜಿಲೆಂಡ್ ಶುಭಾರಂಭ ಮಾಡಿದೆ.

cricket-world-cup-2023-new-zealand-thrash-england-by-nine-wickets-in-opener
Cricket World Cup 2023: ರವೀಂದ್ರ, ಕಾನ್ವೆ ಅಬ್ಬರದ ಶತಕ: ಇಂಗ್ಲೆಂಡ್​ ಮಣಿಸಿದ ನ್ಯೂಜಿಲೆಂಡ್ ಶುಭಾರಂಭ
author img

By ETV Bharat Karnataka Team

Published : Oct 5, 2023, 9:09 PM IST

Updated : Oct 5, 2023, 10:39 PM IST

ಅಹಮದಾಬಾದ್​: ಇಂಗ್ಲೆಂಡ್​ ಮತ್ತು ನ್ಯೂಜಿಲೆಂಡ್​ ನಡುವಿನ ಏಕದಿನ ವಿಶ್ವಕಪ್​ ಉದ್ಘಾಟನಾ ಪಂದ್ಯ ತುಸು ಸಪ್ಪೆಯಾಗಿ ಆರಂಭ ಕಂಡರೂ, ಕ್ಲೈಮ್ಯಾಕ್ಸ್​ ಮಾತ್ರ ಭರ್ಜರಿಯಾಗಿಯೇ ಮುಗಿದಿದೆ. ಬ್ಯಾಟಿಂಗ್​, ಬೌಲಿಂಗ್​ನಲ್ಲಿ ಪ್ರಾಬಲ್ಯ ಮೆರೆದ ಕಿವೀಸ್​ ಪಡೆ ಹಾಲಿ ಚಾಂಪಿಯನ್​ ಇಂಗ್ಲೆಂಡ್​ ಅನ್ನು ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಚೆಂಡಾಡಿತು.

ಟೂರ್ನಿಯ ಬಲಿಷ್ಠ ತಂಡಗಳಲ್ಲಿ ಒಂದಾಗಿರುವ ಇಂಗ್ಲೆಂಡ್​ ಮೊದಲು ಬ್ಯಾಟ್​ ಮಾಡಿ 9 ವಿಕೆಟ್​ಗೆ 282 ರನ್​ ಗಳಿಸಿತು. ಹಾಲಿ ರನ್ನರ್ ಅಪ್​ ಆಗಿರುವ ನ್ಯೂಜಿಲೆಂಡ್ ಭಾರತ ಮೂಲದ ಯುವ ಆಟಗಾರ ರಚಿನ್ ರವೀಂದ್ರ ಹಾಗೂ ಎಡಗೈ ಆರಂಭಿಕ ಬ್ಯಾಟರ್​ ಡೆವೋನ್​ ಕಾನ್ವೆ ಅವರ ಸಿಡಿಲಬ್ಬರದ ಶತಕಗಳ ಬಲದಿಂದ ಬರೀ 1 ವಿಕೆಟ್​ ಕಳೆದುಕೊಂಡು 36.2 ಓವರ್​ಗಳಲ್ಲಿ 283 ರನ್​ ಚಚ್ಚಿ 9 ವಿಕೆಟ್​ಗಳ ಗೆಲುವು ಸಾಧಿಸಿತು. ಇದರೊಂದಿಗೆ ಬ್ಲ್ಯಾಕ್​​ಕ್ಯಾಪ್ಸ್​ ತಂಡ ವಿಶ್ವಕಪ್​ನಲ್ಲಿ ಕನಸಿನ ಆರಂಭ ಪಡೆಯಿತು.

Cricket World Cup 2023: New Zealand thrash England by nine wickets in opener
ನ್ಯೂಜಿಲೆಂಡ್ ಗೆಲುವಿನ ಸಂಭ್ರಮ

ಮುಯ್ಯಿ ತೀರಿಸಿಕೊಂಡ ಕಿವೀಸ್​: 2019 ರ ಏಕದಿನ ವಿಶ್ವಕಪ್​ನ ಫೈನಲ್​ನಲ್ಲಿ ಪಂದ್ಯ ಟೈ ಆಗಿದ್ದರೂ 'ಬೌಂಡರಿ ಕಟ್​' ನಿಯಮದಿಂದ ಇದೇ ಇಂಗ್ಲೆಂಡ್​ ವಿರುದ್ಧ ವಿಶ್ವಕಪ್​ ಕೈತಪ್ಪಿದ್ದರ ಸೇಡನ್ನು ನ್ಯೂಜಿಲೆಂಡ್​ ಇಲ್ಲಿ ತೀರಿಸಿಕೊಂಡಿತು. ಕರಾರುವಾಕ್​ ಬೌಲಿಂಗ್​ ದಾಳಿ ನಡೆಸಿದ್ದ ತಂಡ 282 ಮೊತ್ತವನ್ನು ಸವಾಲೇ ಅಲ್ಲ ಎಂಬಂತೆ ಬ್ಯಾಟ್​ ಬೀಸಿತು. ಅದರಲ್ಲೂ ತಂಡದ ಕಿರಿಯ ಆಟಗಾರ ರಚಿನ್​ ರವೀಂದ್ರ ಚೊಚ್ಚಲ ಶತಕ ಸಾಧನೆ ಮಾಡಿದರೆ, ಆರಂಭಿಕ ಡೇವಿಡ್​ ಕಾನ್ವೆ ಅಬ್ಬರದ ಶತಕ ಸಿಡಿಸಿ ತಂಡಕ್ಕೆ ನಿರಾಯಾಸ ಗೆಲುವು ತಂದುಕೊಟ್ಟರು.

ಹಿರಿ-ಕಿರಿಯ ಆಟಗಾರರ ಜುಗಲ್​ಬಂಧಿ: 283 ರನ್​ಗಳ ಗುರಿ ಬೆನ್ನಟ್ಟಿದ ಕಿವೀಸ್​ ಆರಂಭದಲ್ಲೇ ವಿಲ್​ ಯಂಗ್​ (0) ವಿಕೆಟ್​ ಕಳೆದುಕೊಂಡಿತು. ಆಗ ತಂಡದ ಮೊತ್ತ 10 ರನ್​ ಆಗಿತ್ತು. ಬಳಿಕ ಕ್ರೀಸ್​ಗೆ ಇಳಿದ ಕಿರಿಯ ಪ್ಲೇಯರ್​ ರಚಿನ್ ರವೀಂದ್ರ, ಹಿರಿಯ ಆಟಗಾರ ಡೆವೋನ್​ ಕಾನ್ವೆ ಜೊತೆಗೆ ಇನಿಂಗ್ಸ್​ ಕಟ್ಟಿದರು. ಆಂಗ್ಲರ ಬೌಲಿಂಗ್​ ಪಡೆಯನ್ನು ಛಿದ್ರ ಮಾಡಿದ ಇಬ್ಬರೂ ಅಜೇಯ ಶತಕ ದಾಖಲಿಸಿದರು. ಕಾನ್ವೆ 121 ಎಸೆತಗಳಲ್ಲಿ 19 ಬೌಂಡರಿ 3 ಸಿಕ್ಸರ್​ ಸಮೇತ 152 ರನ್​ ಗಳಿಸಿದರು. ಇನ್ನೊಂದೆಡೆ ರಚಿನ್​ ರವೀಂದ್ರ 96 ಎಸೆತಗಳಲ್ಲಿ 11 ಬೌಂಡರಿ 5 ಭರ್ಕರಿ ಸಿಕ್ಸರ್​ಗಳಿಂದ 123 ರನ್​ ದಾಖಲಿಸಿದರು. ತಂಡ 36.2 ಓವರ್​ಗಳಲ್ಲೇ ಗೆಲುವಿನ ನಗೆ ಬೀರಿತು.

ವಿಶೇಷ ದಾಖಲೆಗಳು: ಇಂಗ್ಲೆಂಡ್​ ತಂಡವನ್ನು ಚೆಂಡಾಡಿದ ರವೀಂದ್ರ ಮತ್ತು ಕಾನ್ವೆ ಜೋಡಿ ವಿಶೇಷ ದಾಖಲೆಗಳನ್ನು ಬರೆದರು. ಈರ್ವರಿಗೆ ಇದು ಮೊದಲ ವಿಶ್ವಕಪ್​ ಆಗಿದೆ. 23 ವರ್ಷದ ರಚಿನ್​ ವಿಶ್ವಕಪ್‌ನಲ್ಲಿ ಶತಕ ಸಾಧನೆ ಮಾಡಿದ ಮೂರನೇ ಅತಿ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 32 ವರ್ಷದ ಡೇವಿಡ್​ ಕಾನ್ವೆ ಶತಕ ಬಾರಿಸಿದ ಎರಡನೇ ಅತಿ ಹಿರಿಯ ಆಟಗಾರ ಎಂಬ ವಿಶೇಷ ಮನ್ನಣೆಗೆ ಒಳಗಾದರು. ಜೊತೆಗೆ 273 ರನ್​ ದಾಖಲಿಸಿದ್ದು, ಇದು ಯಾವುದೇ ವಿಕೆಟ್​ಗೆ ದಾಖಲಾದ ನಾಲ್ಕನೇ ಅತಿ ದೊಡ್ಡ ಜೊತೆಯಾಟ ಎಂಬ ದಾಖಲೆಯಾಯಿತು.

ಮುಗ್ಗರಿಸಿದ ಹಾಲಿ ಚಾಂಪಿಯನ್ನರು: ಟಾಸ್​ ಸೋತು ಮೊದಲು ಬ್ಯಾಟ್​ ಮಾಡಿದ ಹಾಲಿ ಚಾಂಪಿಯನ್​ ಇಂಗ್ಲೆಂಡ್​ ಬ್ಯಾಟರ್​ಗಳ ವೈಫಲ್ಯದಿಂದಾಗಿ ಕಡಿಮೆ ಮೊತ್ತ ಪೇರಿಸಿತು. ಆಂಗ್ಲರ ಪರ ಫ್ಯಾಬ್​ ಫೋರ್​ ಖ್ಯಾತಿಯ ಜೋ ರೂಟ್​ ಅರ್ಧಶತಕದ(77) ಕಾಣಿಕೆ ನೀಡಿದರೆ, ನಾಯಕ ಜೋಶ್​ ಬಟ್ಲರ್​ 43, ಜಾನಿ ಬೈರ್​ಸ್ಟೋವ್​ 33 ರನ್​ ಗಳಿಸಿದರು. ವಿವಿಧ ತಂಡಗಳ ಎದುರು ಸತತ ದ್ವಿಪಕ್ಷೀಯ ಸರಣಿಗಳನ್ನು ಗೆಲ್ಲುತ್ತಾ ಬಂದಿರುವ ಇಂಗ್ಲೆಂಡ್​ ವಿಶ್ವಕಪ್​ನ ಮೊದಲ ಪಂದ್ಯದಲ್ಲೇ ಸೋಲಿನ ಕಹಿ ಅನುಭವಿಸಿತು.

ಇದನ್ನೂ ಓದಿ: ವಿಶ್ವಕಪ್ ಕ್ರಿಕೆಟ್‌: ರೂಟ್‌, ಬಟ್ಲರ್‌ ಜವಾಬ್ದಾರಿಯುತ ಬ್ಯಾಟಿಂಗ್; ನ್ಯೂಜಿಲೆಂಡ್‌ಗೆ 283 ರನ್​ ಟಾರ್ಗೆಟ್‌

Last Updated : Oct 5, 2023, 10:39 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.