ETV Bharat / sports

2015, 2019ರಲ್ಲಿ ರನ್ನರ್ ಅಪ್‌; ಈ ಬಾರಿಯಾದರೂ ವಿಶ್ವಕಪ್‌ ಗೆಲ್ಲುತ್ತಾ ನ್ಯೂಜಿಲೆಂಡ್? - New Zealand Cricket team Strengths and Weaknesses

ಸತತ ಎರಡು ಬಾರಿ ರನ್ನರ್​ ಅಪ್​ ಆಗಿರುವ ಕಿವೀಸ್​ ತಂಡ ತಮ್ಮ ಚೊಚ್ಚಲ ವಿಶ್ವಕಪ್​ಗಾಗಿ ಪ್ರಯತ್ನಿಸುತ್ತಿದೆ. ವಿಲಿಯಮ್ಸನ್​ ಪಡೆಯ ಬಲಾಬಲ ಇಲ್ಲಿದೆ..

Etv Bharat
Etv Bharat
author img

By ETV Bharat Karnataka Team

Published : Oct 2, 2023, 10:12 PM IST

ಹೈದರಾಬಾದ್: ಜಗತ್ತಿನ ಬಹುನಿರೀಕ್ಷಿತ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023ಕ್ಕೆ ವೇದಿಕೆ ಸಜ್ಜಾಗಿದೆ. ಎಲ್ಲಾ ತಂಡಗಳು ಭರ್ಜರಿ ತಯಾರಿ ಮಾಡಿಕೊಂಡು ಗೆಲ್ಲುವ ಹುಮ್ಮಸ್ಸಿನಲ್ಲಿವೆ. ಪ್ರತಿ ತಂಡವೂ ಟ್ರೋಫಿ ಗೆಲ್ಲಲು ರಣತಂತ್ರಗಳನ್ನು ರೂಪಿಸುತ್ತಿವೆ. ಬಲಿಷ್ಠ ಕ್ರಿಕೆಟ್​ ತಂಡವಾಗಿರುವ ನ್ಯೂಜಿಲೆಂಡ್​ ಇದುವರೆಗೂ ಒಂದೂ ವಿಶ್ವಕಪ್​ ಗೆದ್ದಿಲ್ಲ. ಕಳೆದೆರಡು ಬಾರಿ ರನ್ನರ್​ ಅಪ್​ ಆಗಿರುವ ಕಿವೀಸ್​ ಈ ಬಾರಿ ಪ್ರಶಸ್ತಿ ಗೆಲ್ಲಲು ತವಕಿಸುತ್ತಿದೆ.

ಕಳೆದ ವಿಶ್ವಕಪ್ ಫೈನಲ್‌ನಲ್ಲಿ, ಪಂದ್ಯವು ಎರಡೂ ಇನಿಂಗ್ಸ್‌ಗಳ 50 ಓವರ್‌ಗಳ ನಂತರ ಮತ್ತು ಸೂಪರ್ ಓವರ್‌ನ ಬಳಿಕ ಟೈ ಆಯಿತು. ಇಂಗ್ಲೆಂಡ್ ತಮ್ಮ 50 ಓವರ್‌ಗಳ ಇನ್ನಿಂಗ್ಸ್‌ನಲ್ಲಿ ಹೆಚ್ಚು ಬೌಂಡರಿಗಳನ್ನು ಹೊಡೆದಿದ್ದರಿಂದ ಬೌಂಡರಿ ಆಧಾರದ ಮೇಲೆ ವಿಶ್ವಕಪ್ ಎತ್ತಿ ಹಿಡಿದರು. ಗಮನಾರ್ಹವಾಗಿ, 2019ರ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಭಾರತವನ್ನು ಮಣಿಸಿ ನ್ಯೂಜಿಲೆಂಡ್ ಫೈನಲ್​ಗೆ ಪ್ರವೇಶ ಪಡೆದಿತ್ತು. 2015ರ ವಿಶ್ವಕಪ್​ನಲ್ಲೂ ಉತ್ತಮ ಪ್ರದರ್ಶನ ನೀಡಿದ್ದ ಕಿವೀಸ್​ ಫೈನಲ್‌ನಲ್ಲಿ ಎಡವಿತು. 2023ರ ವಿಶ್ವಕಪ್‌ನಲ್ಲಿ​ ನ್ಯೂಜಿಲೆಂಡ್​ ತಂಡದ ಸಾಮರ್ಥ್ಯ ಮತ್ತು ವೀಕ್​ನೆಸ್​ ಬಗ್ಗೆ ಇಲ್ಲಿದೆ ಮಾಹಿತಿ..

ಸಾಮರ್ಥ್ಯವೇನು?

1. ಅನುಭವಿ ನಾಯಕತ್ವ ಮತ್ತು ಮಧ್ಯಮ ಕ್ರಮಾಂಕ: ನ್ಯೂಜಿಲೆಂಡ್‌ನ ನಾಯಕ ಕೇನ್ ವಿಲಿಯಮ್ಸನ್ ವಿಶ್ವದ ಅತ್ಯುತ್ತಮ ಬ್ಯಾಟರ್‌ಗಳಲ್ಲಿ ಒಬ್ಬರು. ಚಾಣಾಕ್ಷ ನಾಯಕ ಕೂಡಾ. ಕ್ರಿಕೆಟ್​ನ ಫ್ಯಾಬ್​ ಫೋರ್​ ಆಟಗಾರರಲ್ಲಿ ಒಬ್ಬರು. ಒತ್ತಡದ ಸಂದರ್ಭಗಳಲ್ಲಿ ಅನುಭವ ಮತ್ತು ಶಾಂತ ವರ್ತನೆ ತಂಡಕ್ಕೆ ಸಹಾಯ ಮಾಡುತ್ತದೆ. 2023ರ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್​) ಮೊದಲ ಪಂದ್ಯದಲ್ಲಿ ಗಾಯಗೊಂಡಿದ್ದರು. ಆದರೆ ವಿಶ್ವಕಪ್​ ವೇಳೆಗೆ ಹೆಚ್ಚಿನ ಶ್ರಮವಹಿಸಿ ತಂಡಕ್ಕೆ ಕಮ್​ಬ್ಯಾಕ್​ ಮಾಡಿದ್ದಾರೆ. ಪಾಕಿಸ್ತಾನ ವಿರುದ್ಧ ನಡೆದ ವಿಶ್ವಕಪ್​ ಅಭ್ಯಾಸ ಪಂದ್ಯದಲ್ಲಿ ಮೈದಾನಕ್ಕಿಳಿದ ಅವರು 8 ಬೌಂಡರಿಯ ಸಹಾಯದಿಂದ ಅರ್ಧಶತಕ ಗಳಿಸಿದ್ದಾರೆ.

ವಿಕೆಟ್ ಕೀಪರ್-ಬ್ಯಾಟರ್ ಟಾಮ್ ಲ್ಯಾಥಮ್ ಸ್ಪಿನ್ನರ್‌ಗಳ ವಿರುದ್ಧ ಉತ್ತಮ ಪ್ರದರ್ಶನ ನೀಡಿದ್ದಾರೆ. ಸ್ಟಂಪ್​ ಹಿಂದೆ ಕಾರ್ಯನಿರ್ವಹಿಸುವ ಇವರು ಸ್ಪಿನ್​ ಬೌಲರ್​ಗಳನ್ನು ಉತ್ತಮವಾಗಿ ರೀಡ್​ ಮಾಡುತ್ತಾರೆ. ಹೀಗಾಗಿ ಸ್ಪಿನ್ನರ್​ಗಳ ವಿರುದ್ಧ ಬೆಸ್ಟ್​ ಆಟ ಪ್ರದರ್ಶಿಸಿದ್ದಾರೆ. ಭಾರತದ ಮೈದಾನದಲ್ಲಿ ದಾಖಲೆಯನ್ನೂ ಹೊಂದಿದ್ದಾರೆ. ಲ್ಯಾಥಮ್ ಭಾರತದ ಫೀಲ್ಡ್​ಗಳಲ್ಲಿ ಆಡಿದ 11 ಇನ್ನಿಂಗ್ಸ್‌ಗಳಿಂದ 85.89 ಸ್ಟ್ರೈಕ್ ರೇಟ್‌ನೊಂದಿಗೆ 52.77ರ ಸರಾಸರಿಯಲ್ಲಿ 475 ರನ್ ಗಳಿಸಿದ್ದಾರೆ. ವಿಲಿಯಮ್ಸನ್ 161 ಏಕದಿನ ಪಂದ್ಯದಿಂದ 13 ಶತಕ ಮತ್ತು 42 ಅರ್ಧಶತಕಗಳನ್ನು ಗಳಿಸಿದ್ದು, 47.85 ರ ಅತ್ಯುತ್ತಮ ಸರಾಸರಿ ಮತ್ತು 80.99ರ ಸ್ಟ್ರೈಕ್ ರೇಟ್‌ನೊಂದಿಗೆ 6,555 ರನ್ ಗಳಿಸಿದ್ದಾರೆ.

2. ಪ್ರಬಲ ಬೌಲಿಂಗ್ ದಾಳಿ: ನ್ಯೂಜಿಲೆಂಡ್​ನಲ್ಲಿ ಟ್ರೆಂಟ್ ಬೌಲ್ಟ್, ಟಿಮ್ ಸೌಥಿ ಮತ್ತು ಲಾಕಿ ಫರ್ಗುಸನ್‌ ಮಾರಕ ವೇಗದ ಬೌಲರ್​ಗಳು. ವಿಭಿನ್ನ ಪರಿಸ್ಥಿತಿಗಳಲ್ಲಿ ಚೆಂಡನ್ನು ಸ್ವಿಂಗ್ ಮಾಡುವ ಮತ್ತು ಸೀಮ್ ಮಾಡುವ ಅವರ ಸಾಮರ್ಥ್ಯವು ಬ್ಯಾಟರ್​ಗಳನ್ನು ಕಾಡಲಿದೆ. ಗುಣಮಟ್ಟದ ಸ್ಪಿನ್ನರ್‌ಗಳನ್ನು ಹೊಂದಿದ್ದು, ಇಶ್ ಸೋಧಿ ಮತ್ತು ಮಿಚೆಲ್ ಸ್ಯಾಂಟ್ನರ್ ತಂಡ ಬೌಲಿಂಗ್​ ಬಲ ಹೆಚ್ಚಿಸಲಿದ್ದಾರೆ.

ಎಡಗೈ ವೇಗಿ ಟ್ರೆಂಟ್ ಬೌಲ್ಟ್ ವಿಶ್ವಕಪ್​ನಲ್ಲಿ ಮಾರಕ ಬೌಲಿಂಗ್​ ಮಾಡುವ ನಿರೀಕ್ಷೆ ಇದೆ. ಡೆತ್ ಓವರ್‌ಗಳಲ್ಲಿ ವೇಗದ ಯಾರ್ಕರ್‌ನಿಂದ ಎದುರಾಳಿಗಳನ್ನು ಕಟ್ಟಿ ಹಾಕಲಿದ್ದಾರೆ. ಬೌಲ್ಟ್ 104 ಏಕದಿನ ಪಂದ್ಯಗಳಲ್ಲಿ 4.94ರ ಎಕಾನಿಮಿಯಿಂದ 197 ವಿಕೆಟ್‌ಗಳನ್ನು ಪಡೆದಿದ್ದಾರೆ. ವಿಶ್ವಕಪ್​ ಪಂದ್ಯಗಳಲ್ಲಿ 200 ವಿಕೆಟ್​ಗಳ ಸಾಧನೆ ಮಾಡಲಿದ್ದಾರೆ. ಸೌಥಿ ಕೇವಲ 157 ಪಂದ್ಯಗಳಲ್ಲಿ 33.6 ರ ಸರಾಸರಿಯಲ್ಲಿ 5.47ರ ಎಕಾನಮಿಯೊಂದಿಗೆ 214 ವಿಕೆಟ್​ ಗಳಿಸಿದರೆ, ಫರ್ಗುಸನ್ ಕೇವಲ 58 ಪಂದ್ಯಗಳಿಂದ 89 ವಿಕೆಟ್​ ಕಿತ್ತಿದ್ದಾರೆ.

ಭಾರತೀಯ ಪಿಚ್​ಗಳು ಸ್ಪಿನ್​ ಬೌಲರ್​ಗಳಿಗೆ ಹೇಳಿ ಮಾಡಿಸಿದಂತಿರುತ್ತವೆ. ಇದು ಲೆಗ್ ಸ್ಪಿನ್ನರ್ ಇಶ್ ಸೋಧಿಗೆ ಸಹಕಾರಿ ಆಗಬಹುದು. ನ್ಯೂಜಿಲೆಂಡ್‌ಗಾಗಿ 49 ಏಕದಿನ ಪಂದ್ಯಗಳಲ್ಲಿ 46 ಇನ್ನಿಂಗ್ಸ್‌ ಮೂಲಕ 5.46 ಎಕಾನಮಿಯಲ್ಲಿ 61 ವಿಕೆಟ್‌ಗಳನ್ನು ಪಡೆದಿದ್ದಾರೆ. 39 ರನ್‌ಗಳಿಗೆ 6 ವಿಕೆಟ್‌ ಕಬಳಿಸಿರುವುದು ಅವರ ಅತ್ಯುತ್ತಮ ಪ್ರದರ್ಶನ.

ತಂಡದ ದೌರ್ಬಲ್ಯಗಳೇನು?:

1. ಮಧ್ಯಮ ಕ್ರಮಾಂಕದ ವೈಫಲ್ಯ: ನ್ಯೂಜಿಲೆಂಡ್ ಗಟ್ಟಿ ಅಗ್ರ ಕ್ರಮಾಂಕ ಹೊಂದಿದ್ದರೂ, ಮಧ್ಯಮ ಕ್ರಮಾಂಕದ ಬ್ಯಾಟಿಂಗ್​ನಲ್ಲಿ ಗಟ್ಟಿತನ ಇಲ್ಲ. ಐಪಿಎಲ್‌ನಲ್ಲಿ ಸನ್‌ರೈಸರ್ ಹೈದರಾಬಾದ್ ಪರ ಆಡುವ ಗ್ಲೆನ್ ಫಿಲಿಪ್ಸ್ ಹೊರತುಪಡಿಸಿ ಮಧ್ಯಮ ಕ್ರಮಾಂಕದಲ್ಲಿ ಭಾರತೀಯ ಪರಿಸ್ಥಿತಿಗಳಲ್ಲಿ ಆಡಿದ ಅನುಭವ ಯಾರಿಗೂ ಇಲ್ಲ. ಆರಂಭಿಕ ವಿಕೆಟ್​ ನಷ್ಟವಾದಾಗ ತಂಡಕ್ಕೆ ಮಾರ್ಕ್ ಚಾಪ್‌ಮನ್, ಗ್ಲೆನ್ ಫಿಲಿಪ್ಸ್ ಮತ್ತು ರಚಿನ್ ರವೀಂದ್ರ ರನ್​ ಗಳಿಸುವುದು ಅಗತ್ಯ.

ಗ್ಲೆನ್ ಫಿಲಿಪ್ಸ್ ಅವರ ಕೊನೆಯ ಐದು ಇನ್ನಿಂಗ್ಸ್ - 3, 25, 72, 2, ಬ್ಯಾಟಿಂಗ್​ ಅಚಕಾಶ ಸಿಕ್ಕಿಲ್ಲ

ಮಾರ್ಕ್ ಚಾಪ್ಮನ್ ಅವರ ಕೊನೆಯ ಐದು ಇನ್ನಿಂಗ್ಸ್- 65*, 40*, 8*, 15, 11

ರಚಿನ್ ರವೀಂದ್ರರ ಕೊನೆಯ ಐದು ಇನ್ನಿಂಗ್ಸ್ - 97(ಆರಂಭಿಕ), ಅವಕಾಶ ಸಿಕ್ಕಿಲ್ಲ, 10, 0, 61

2. ಸೀಮಿತ ಸ್ಪಿನ್ ಆಯ್ಕೆ: ಸ್ಯಾಂಟ್ನರ್ ಮತ್ತು ಸೋಧಿ ಮಾತ್ರ ತಂಡದಲ್ಲಿರುವ ಸ್ಪಿನ್ನರ್​ಗಳು. ಇವರಲ್ಲಿ ಒಬ್ಬರು ಗಾಯಕ್ಕೆ ತುತ್ತಾದರೂ ತಂಡಕ್ಕೆ ತಲೆನೋವಾಗಲಿದೆ. ಅಲ್ಲದೇ ಭಾರತದ ಮೈದಾನಗಳು ಸ್ಪಿನ್​ ಸ್ನೇಹಿ ಆಗಿರುವುದರಿಂದ ಹೆಚ್ಚಿನ ಸ್ಪಿನ್ನರ್‌ಗಳು ತಂಡದಲ್ಲಿಲ್ಲದೇ ಇರುವುದು ದೌರ್ಬಲ್ಯವಾಗಿದೆ.

3. ಗಾಯದ ಭೀತಿ: ನ್ಯೂಜಿಲೆಂಡ್​ ತಂಡದಲ್ಲಿ ಸ್ಟಾರ್​ ಆಟಗಾರರು ಗಾಯಕ್ಕೆ ತುತ್ತಾದಲ್ಲಿ ಪರ್ಯಾಯ ಆಟಗಾರರ ಕೊರತೆ ಇದೆ. ಅದರಲ್ಲೂ ಬೌಲಿಂಗ್​ನಲ್ಲಿ ದೊಡ್ಡ ವೈಫಲ್ಯ ಎದುರಿಸಲಿದೆ. ಐಪಿಎಲ್​ನಲ್ಲಿ ಗಾಯಕ್ಕೆ ತುತ್ತಾಗಿದ್ದ ವಿಲಿಯಮ್ಸ್​ ಇನ್ನೂ ಸಂಪೂರ್ಣ ಚೇತರಿಸಿಕೊಂಡಿಲ್ಲ. ಹೀಗಾಗಿ ಮತ್ತೆ ಅವರು ಗಾಯಕ್ಕೆ ತುತ್ತಾದಲ್ಲಿ ತಂಡ ದೊಡ್ಡ ನಷ್ಟವನ್ನು ಎದುರಿಸಬೇಕಾಗುತ್ತದೆ.

ಯುವ ಆಟಗಾರರಿಗೆ ಅವಕಾಶ: ಮಾರ್ಕ್ ಚಾಪ್‌ಮನ್, ರಚಿನ್ ರವೀಂದ್ರ ಮತ್ತು ವಿಲ್ ಯಂಗ್ ಅವರಂತಹ ಯುವ ಪ್ರತಿಭೆಗಳಿಗೆ ನ್ಯೂಜಿಲೆಂಡ್‌ ತಂಡದಲ್ಲಿ ಸ್ಥಾನ ಸಿಕ್ಕಿದೆ. ಪಾಕಿಸ್ತಾನ ವಿರುದ್ಧದ ಮೊದಲ ಅಭ್ಯಾಸ ಪಂದ್ಯದಲ್ಲಿ ಮಾರ್ಕ್ ಚಾಪ್‌ಮನ್ ಮತ್ತು ರಚಿನ್ ರವೀಂದ್ರ ತಮ್ಮ ಫಾರ್ಮ್‌ ತೋರಿಸಿದ್ದಾರೆ. ರಚಿನ್ ರವೀಂದ್ರ ಮೂರು ರನ್‌ಗಳಿಂದ ಶತಕ ಕಳೆದುಕೊಂಡು, 97 ರನ್‌ಗಳಲ್ಲಿ ಔಟಾದರು. ಮಾರ್ಕ್ ಚಾಪ್‌ಮನ್ ಅಜೇಯ 65 ರನ್ ಗಳಿಸಿ ಪಂದ್ಯ ಗೆಲ್ಲಿಸಿ ಕೊಟ್ಟರು. ರಾಚಿನ್ 12 ಏಕದಿನ ಆಡಿದ್ದು, 189 ರನ್ ಗಳಿಸಿದ್ದಾರೆ ಮತ್ತು ಬೌಲಿಂಗ್​ನಲ್ಲಿ 12 ವಿಕೆಟ್‌ ಪಡೆದಿದ್ದಾರೆ. ಮಾರ್ಕ್ ಚಾಪ್‌ಮನ್ 12 ಏಕದಿನದಲ್ಲಿ 380 ರನ್ ಗಳಿಸಿದ್ದಾರೆ.

ಇದನ್ನೂ ಓದಿ: ಏಷ್ಯನ್ ಗೇಮ್ಸ್‌, ಕ್ರಿಕೆಟ್‌: ನಾಳೆ ಭಾರತ vs​ ನೇಪಾಳ ಪಂದ್ಯ, ಚಿನ್ನ ಗೆಲ್ಲುವತ್ತ IPL​ ಸ್ಟಾರ್​ಗಳ ಚಿತ್ತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.