ETV Bharat / sports

27 ವರ್ಷಗಳ ಬಳಿಕ ಪುಣೆ ಮೈದಾನದಲ್ಲಿ ವಿಶ್ವಕಪ್ ಕ್ರಿಕೆಟ್​ ಕಲರವ; 5 ಪಂದ್ಯಗಳಿಗೆ ಆತಿಥ್ಯ - Maharashtra Cricket Association

ಇಂದಿನಿಂದ ಏಕದಿನ ವಿಶ್ವಕಪ್​ ಆರಂಭವಾಗಿದೆ. ಐದು ಪಂದ್ಯಗಳಿಗೆ ಮಹಾರಾಷ್ಟ್ರದ ಪುಣೆ ಮೈದಾನ ಆತಿಥ್ಯ ವಹಿಸಿಕೊಂಡಿದೆ. ಭಾರತ-ಬಾಂಗ್ಲಾದೇಶ ನಡುವಿನ ಪಂದ್ಯ ಇಲ್ಲಿನ ಹೈಲೈಟ್.

ಪುಣೆ ಮೈದಾನದಲ್ಲಿ ವಿಶ್ವಕಪ್​ ಕಲರವ
ಪುಣೆ ಮೈದಾನದಲ್ಲಿ ವಿಶ್ವಕಪ್​ ಕಲರವ
author img

By ETV Bharat Karnataka Team

Published : Oct 5, 2023, 3:44 PM IST

ಪುಣೆ (ಮಹಾರಾಷ್ಟ್ರ): 13 ನೇ ಆವೃತ್ತಿಯ ವಿಶ್ವಕಪ್​ನ 5 ಪಂದ್ಯಗಳಿಗೆ ಮಹಾರಾಷ್ಟ್ರದ ಪುಣೆಯ ಪಂಡಿತ್ ಜವಾಹರಲಾಲ್ ನೆಹರು ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ವಿಶೇಷವೆಂದರೆ, 27 ವರ್ಷಗಳ ಬಳಿಕ ಈ ಮೈದಾನದಲ್ಲಿ ವಿಶ್ವಕಪ್​ ಪಂದ್ಯಗಳು ಆಯೋಜನೆಯಾಗುತ್ತಿವೆ. ಇಲ್ಲಿ ಕೊನೆಯ ಬಾರಿಗೆ 1996 ರ ವಿಶ್ವಕಪ್​ನ ವೆಸ್ಟ್​ ಇಂಡೀಸ್​ ಮತ್ತು ಕೀನ್ಯಾ ನಡುವಿನ ಪಂದ್ಯ ನಡೆದಿತ್ತು.

2011 ರಲ್ಲಿ ಭಾರತ ಬಾಂಗ್ಲಾದೇಶ ಮತ್ತು ಶ್ರೀಲಂಕಾ ಜಂಟಿ ಸಹಭಾಗಿತ್ವದಲ್ಲಿ ವಿಶ್ವಕಪ್​ನ ಆತಿಥ್ಯ ವಹಿಸಿದ್ದಾಗ, ಪುಣೆ ಮೈದಾನದಲ್ಲಿ ಒಂದೇ ಒಂದು ಪಂದ್ಯವೂ ನಡೆದಿರಲಿಲ್ಲ. ಕಳೆದ ಸಲ ಕೈತಪ್ಪಿದ್ದ ಅವಕಾಶವನ್ನು ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ (ಎಂಸಿಎ) ಈ ಬಾರಿ ಬಾಚಿಕೊಂಡಿದೆ.

ಅದರಲ್ಲೂ ಅಕ್ಟೋಬರ್ 19 ರಂದು ನಡೆಯಲಿರುವ ಭಾರತ ಮತ್ತು ಬಾಂಗ್ಲಾದೇಶ ಪಂದ್ಯವು ಪ್ರಮುಖ ಆಕರ್ಷಣೆಯಾಗಿದೆ. ಭಾರತದ ಯಾವುದೇ ಪಂದ್ಯವೂ ಕ್ರಿಕೆಟ್​ ಸಂಸ್ಥೆಗಳಿಗೆ ಹಣದ ಹೊಳೆ ಹರಿಸಲಿದೆ. ಹೀಗಾಗಿ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಪಂದ್ಯಗಳನ್ನು ಅಚ್ಚುಕಟ್ಟಾಗಿ ಆಯೋಜಿಸಲು ಸಿದ್ಧತೆ ನಡೆಸಿದೆ ಎಂದು ಅದರ ಅಧ್ಯಕ್ಷ ರೋಹಿತ್ ಪವಾರ್ ಮಾಹಿತಿ ನೀಡಿದರು.

ಮಹಾರಾಷ್ಟ್ರದಲ್ಲಿ 10 ಪಂದ್ಯಗಳು: ಈಟಿವಿ ಭಾರತ್‌ ಜೊತೆ ಮಾತನಾಡಿರುವ ಅವರು, "ಐದು ಪಂದ್ಯಗಳು ಸುಗಮವಾಗಿ ನಡೆಸಲು ಅಗತ್ಯ ತಯಾರಿ ಪೂರ್ಣಗೊಂಡಿದೆ. ಪಂದ್ಯಗಳು ಹಗಲಿನಲ್ಲೇ ನಡೆಯುವುದರಿಂದ ಕ್ರಿಕೆಟ್‌ಪ್ರಿಯರು ಕುಳಿತುಕೊಳ್ಳುವ ಆಸನಗಳು ಮತ್ತು ಅವರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಶೌಚಾಲಯಗಳು ಮತ್ತು ಪಾರ್ಕಿಂಗ್ ವ್ಯವಸ್ಥೆಯಾಗಿದೆ. ಕ್ರಿಕೆಟ್​ ಸಂಭ್ರಮ ಅನುಭವಿಸಲು ಮೈದಾನಕ್ಕೆ ಬರುವ ಅಭಿಮಾನಿಗಳಿಗೆ ಯಾವುದೇ ತೊಂದರೆ ಉಂಟಾಗದಿರಲು ನಮ್ಮ ಸಿಬ್ಬಂದಿ ಅವಿರತವಾಗಿ ಶ್ರಮಿಸಿದ್ದಾರೆ" ಎಂದು ತಿಳಿಸಿದರು.

"ಮಹಾರಾಷ್ಟ್ರದಲ್ಲಿನ ಕ್ರಿಕೆಟ್​ ಮೈದಾನಗಳು ಆಟಕ್ಕೆ ಹೇಳಿ ಮಾಡಿಸಿದಂತಿದ್ದು, ಹೆಚ್ಚಿನ ಸೌಲಭ್ಯಗಳನ್ನು ಹೊಂದಿರುವ ಕಾರಣ ದೇಶದ ಯಾವುದೇ ರಾಜ್ಯಗಳಿಗೆ ಹೋಲಿಸಿದರೆ, ಇಲ್ಲಿ ವಿಶ್ವಕಪ್​ನ ಹೆಚ್ಚಿನ ಪಂದ್ಯಗಳು ನಡೆಯಲಿವೆ. ರಾಜ್ಯದಲ್ಲಿ ಒಟ್ಟು 10 ಲೀಗ್ ಪಂದ್ಯಗಳು ಏರ್ಪಾಡಾಗಿವೆ. ಅವುಗಳಲ್ಲಿ 5 ಪುಣೆ ಮೈದಾನದಲ್ಲಿ ನಡೆದರೆ, ಉಳಿದ 5 ಮುಂಬೈನ ಖ್ಯಾತ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿವೆ" ಎಂದು ಮಾಹಿತಿ ನೀಡಿದರು.

ಐಸಿಸಿಗೆ ಎಂಸಿಎ ಧನ್ಯವಾದ: "ಇದು ಮಹಾರಾಷ್ಟ್ರ ಕ್ರಿಕೆಟ್​ ಸಂಸ್ಥೆಗೆ ಹೆಮ್ಮೆಯ ಸಂಗತಿಯಾಗಿದೆ. ಐಸಿಸಿಯೊಂದಿಗಿನ ನಮ್ಮ ಸಂಬಂಧ ತುಂಬಾ ಚೆನ್ನಾಗಿದೆ. ಅಂತರರಾಷ್ಟ್ರೀಯ ಕ್ರಿಕೆಟ್​ ಸಂಸ್ಥೆ ನಮ್ಮನ್ನು ಗೌರವದಿಂದ ಕಂಡಿದೆ. 5 ಪಂದ್ಯಗಳ ಆಯೋಜನೆ ಅವಕಾಶ ನೀಡಿದ್ದಾರೆ" ಎಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಮೊಮ್ಮಗ ರೋಹಿತ್ ಪವಾರ್ ಹೇಳಿದರು.

"ಕಳೆದ ಕೆಲ ತಿಂಗಳಿನಿಂದ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯು ಪುರುಷ ಮತ್ತು ಮಹಿಳಾ ಆಟಗಾರರಿಗೆ ಗರಿಷ್ಠ ಅವಕಾಶಗಳನ್ನು ಒದಗಿಸಿದೆ. ಆಟಗಾರರ ಪ್ರತಿಭಾನ್ವೇಷಣೆಗೆ ಪಂದ್ಯಗಳ ಸಂಖ್ಯೆಯನ್ನೂ ಹೆಚ್ಚಿಸಲಾಗಿದೆ. ಮುಂಬರುವ ದಿನಗಳಲ್ಲಿ ಮಹಾರಾಷ್ಟ್ರದಿಂದ ಐಪಿಎಲ್‌ನಲ್ಲಿ ಹಲವು ಕ್ರಿಕೆಟಿಗರು ಕಣಕ್ಕಿಳಿಯಲಿದ್ದಾರೆ, ಅವರು ಮುಂದೆ ರಾಷ್ಟ್ರೀಯ ತಂಡದಲ್ಲಿಯೂ ಸ್ಥಾನ ಪಡೆಯಲಿದ್ದಾರೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಕ್ರಿಕೆಟ್ ವಿಶ್ವಕಪ್ 2023: 'ನರೇಂದ್ರ ಮೋದಿ ಸ್ಟೇಡಿಯಂ' ಹಲವಾರು ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.