ಪುಣೆ/ಧರ್ಮಶಾಲಾ: ಪುಣೆಯಲ್ಲಿ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಉಪ ನಾಯಕ ಹಾರ್ದಿಕ್ ಪಾಂಡ್ಯ ಬೌಲಿಂಗ್ ವೇಳೆ ಕ್ಷೇತ್ರ ರಕ್ಷಣೆಗೆ ಮುಂದಾದಾಗ ಎಡ ಹಿಮ್ಮಡಿ ಗಾಯಕ್ಕೆ ತುತ್ತಾಗಿದ್ದರು. ನಂತರ ಆ ಪಂದ್ಯದಿಂದ ಹೊರಗುಳಿದರು. ಬಿಸಿಸಿಐ ಮೂಲಗಳ ಪ್ರಕಾರ, ಹಾರ್ದಿಕ್ ಪಾಂಡ್ಯ ನ್ಯೂಜಿಲೆಂಡ್ ವಿರುದ್ಧ ಆಡುತ್ತಿಲ್ಲ.
-
🚨 NEWS 🚨
— BCCI (@BCCI) October 20, 2023 " class="align-text-top noRightClick twitterSection" data="
Medical Update: Hardik Pandya 🔽 #CWC23 | #TeamIndiahttps://t.co/yiCbi3ng8u
">🚨 NEWS 🚨
— BCCI (@BCCI) October 20, 2023
Medical Update: Hardik Pandya 🔽 #CWC23 | #TeamIndiahttps://t.co/yiCbi3ng8u🚨 NEWS 🚨
— BCCI (@BCCI) October 20, 2023
Medical Update: Hardik Pandya 🔽 #CWC23 | #TeamIndiahttps://t.co/yiCbi3ng8u
ಹೀಗಾಗಿ ಹಾರ್ದಿಕ್ ಅವರ 6ನೇ ಸ್ಥಾನ ಖಾಲಿ ಆಗುತ್ತಿದೆ. ಭಾರತಕ್ಕೆ ಒಬ್ಬ ಆಲ್ರೌಂಡ್ ಕೊರತೆ ಎದುರಾಗಿದೆ. ಸೂರ್ಯ ಕುಮಾರ್ ಯಾದವ್ ಮತ್ತು ಇಶಾನ್ ಕಿಶನ್ ತಂಡದ ಮುಂದಿರುವ ಬ್ಯಾಟಿಂಗ್ ಆಯ್ಕೆ. ಬೌಲಿಂಗ್ನಲ್ಲಿ ಮೊಹಮ್ಮದ್ ಶಮಿ ಇದ್ದಾರೆ. ಆದರೆ ಯಾರಿಗೆ ಅವಕಾಶ ಸಿಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಹಾರ್ದಿಕ್ ಪಾಂಡ್ಯ ತಂಡಕ್ಕೆ ಬ್ಯಾಟಿಂಗ್ ಹಾಗೂ ಬೌಲಿಂಗ್ನ ಬಲ ನೀಡುತ್ತಾ ಬಂದಿದ್ದಾರೆ. ಮೂರು ಪಂದ್ಯಗಳಲ್ಲಿ 16 ಓವರ್ ಮಾಡಿದ್ದು 7 ವಿಕೆಟ್ ಪಡೆದಿದ್ದಾರೆ. ನಾಲ್ಕರಲ್ಲಿ 1 ಪಂದ್ಯದಲ್ಲಿ ಮಾತ್ರ ಬ್ಯಾಟಿಂಗ್ ಅವಕಾಶ ಸಿಕ್ಕಿದ್ದು, 8 ಎಸೆತಗಳಲ್ಲಿ 1 ಸಿಕ್ಸರ್ ಸಹಾಯದಿಂದ 11 ರನ್ ಗಳಿಸಿದ್ದಾರೆ. 5ಕ್ಕೂ ಹೆಚ್ಚು ಓವರ್ ಮಾಡುವ ಸಾಮರ್ಥ್ಯ ಹೊಂದಿರುವ ಹಾರ್ದಿಕ್, ಮೊದಲ ಪವರ್ ಪ್ಲೇ ನಂತರ ತಂಡಕ್ಕೆ ವಿಕೆಟ್ ತಂದುಕೊಟ್ಟಿದ್ದಾರೆ.
ಶಾರ್ದೂಲ್ಗೆ ಕೊಕ್?: ಕಳೆದ ಮೂರು ಪಂದ್ಯದಲ್ಲಿ ಶಾರ್ದೂಲ್ ಠಾಕೂರ್ ಅತ್ಯುತ್ತಮ ಪ್ರದರ್ಶನ ನೀಡುವಲ್ಲಿ ಎಡವಿದ್ದಾರೆ. 17 ಓವರ್‌ಗಳನ್ನು ಮಾಡಿ 3 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಎಕಾನಮಿ ಉತ್ತಮವಾಗಿಲ್ಲ. ಹೀಗಾಗಿ ಮುಂದಿನ ಪಂದ್ಯದಲ್ಲಿ ಕೊಕ್ ಕೊಡುವ ಸಾಧ್ಯತೆ ಇದೆ. ಹೀಗಾಗಿ ಮೂವರು ಪ್ರಮುಖ ವೇಗಿಗಳ ಜತೆ ಮುಂದಿನ ಪಂದ್ಯಕ್ಕೆ ಬ್ಲೂಬಾಯ್ಸ್ ತಯಾರಿ ನಡೆಸುತ್ತಾರೆ ಎಂಬ ಚರ್ಚೆ ನಡೆಯುತ್ತಿದೆ.
ಮಧ್ಯಮ ಕ್ರಮಾಂಕದಲ್ಲಿ ಇಶಾನ್ ಕಿಶನ್ ತಮ್ಮ ಸಾಮರ್ಥ್ಯ ತೋರಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಸೂರ್ಯ ಕುಮಾರ್ ಯಾದವ್ ಅರ್ಧಶತಕಗಳ ಮೂಲಕ ಏಕದಿನದಲ್ಲಿ ಲಯಕ್ಕೆ ಮರಳಿದ್ದಾರೆ. ಹಾರ್ದಿಕ್ ಬದಲು ಈ ಇಬ್ಬರಲ್ಲಿ ಯಾರನ್ನು ಆಯ್ಕೆ ಮಾಡುತ್ತಾರೆ ಎಂಬುದು ಕುತೂಹಲ.
ಬ್ಯಾಟಿಂಗ್ ಸ್ನೇಹಿ ಧರ್ಮಶಾಲಾ: ಧರ್ಮಶಾಲಾ ಪಿಚ್ ಬ್ಯಾಟಿಂಗ್ ಸ್ನೇಹಿ ಆಗಿದೆ. ಇಂಗ್ಲೆಂಡ್ ಈ ಪಿಚ್‌ನಲ್ಲಿ 364 ರನ್‌ಗಳ ಬೃಹತ್ ಇನ್ನಿಂಗ್ಸ್ ಕಟ್ಟಿದ್ದಲ್ಲದೇ, ನೆದರ್ಲೆಂಡ್ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ 245 ರನ್ ಗಳಿಸಿತ್ತು. ಸ್ಪಿನ್‌ಸ್ನೇಹಿಯಾಗಿಯೂ ವರ್ತಿಸಿದೆ. ಅಫ್ಘಾನ್-ಬಾಂಗ್ಲಾ, ಇಂಗ್ಲೆಂಡ್ - ಬಾಂಗ್ಲಾ ಪಂದ್ಯದಲ್ಲಿ ಸ್ಪಿನ್ನರ್ಗಳು ಕಮಾಲ್ ಮಾಡಿದ್ದಾರೆ. ಕಿವೀಸ್ ವಿರುದ್ಧ ಅಶ್ವಿನ್ಗೆ ಅವಕಾಶ ಸಿಗುತ್ತಾ? ಕಾದುನೋಡಬೇಕಿದೆ.