ಧರ್ಮಶಾಲಾ (ಹಿಮಾಚಲ ಪ್ರದೇಶ): ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಬಾಂಗ್ಲಾದೇಶ ತಂಡ ಶುಭಾರಂಭ ಮಾಡಿದೆ. ಅದ್ಭುತ ಬೌಲಿಂಗ್ ಹಾಗೂ ಬ್ಯಾಟಿಂಗ್ ಪ್ರದರ್ಶನದಿಂದ ತನ್ನ ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಆರು ವಿಕೆಟ್ಗಳಿಂದ ಭರ್ಜರಿ ಜಯ ದಾಖಲಿಸಿದೆ. ಅಫ್ಘನ್ನರು ನೀಡಿದ್ದ 157 ರನ್ಗಳ ಗುರಿಯನ್ನು ಬಾಂಗ್ಲಾ 34.4 ಓವರ್ಗಳಲ್ಲಿ ಪೂರೈಸಿ ಗೆಲುವಿನ ನಗೆಬೀರಿದೆ.
ಹಿಮಾಚಲ ಪ್ರದೇಶದ ಧರ್ಮಶಾಲಾ ಕ್ರೀಡಾಂಗಣದಲ್ಲಿ ಇಂದು ನಡೆದ ಅಫ್ಘಾನಿಸ್ತಾನ ತಂಡ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿ ಕೇವಲ 156 ರನ್ಗಳಿಗೆ ಆಲೌಟ್ ಆಗಿತ್ತು. ಈ ಸುಲಭ ಗುರಿ ಬೆನ್ನಟ್ಟಿದ ಬಾಂಗ್ಲಾ ಬ್ಯಾಟರ್ಗಳು ನಿರಾಯಾಸವಾಗಿ ಗೆಲುವು ತಂದುಕೊಟ್ಟರು. ಬೌಲಿಂಗ್ನಲ್ಲಿ ಮಿಂಚಿದ್ದ ಮೆಹಿದಿ ಹಸನ್ ಮಿರಾಜ್ ಬ್ಯಾಟಿಂಗ್ನಲ್ಲೂ ಅರ್ಧಶತಕ ಬಾರಿಸಿ ತಂಡದ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು. ಮೂರು ವಿಕೆಟ್ ಹಾಗೂ 57 ರನ್ ಬಾರಿಸಿ ಮಿರಾಜ್ ಪ್ಲೇಯರ್ ಆಫ್ ದಿ ಮ್ಯಾಚ್ ಗೌರವಕ್ಕೂ ಪಾತ್ರರಾದರು.
-
Mehidy Hasan Miraz starred with bat and ball to take the @aramco #POTM against Afghanistan 🤩#CWC23 | #BANvAFG pic.twitter.com/jV0yDDZ0Tm
— ICC (@ICC) October 7, 2023 " class="align-text-top noRightClick twitterSection" data="
">Mehidy Hasan Miraz starred with bat and ball to take the @aramco #POTM against Afghanistan 🤩#CWC23 | #BANvAFG pic.twitter.com/jV0yDDZ0Tm
— ICC (@ICC) October 7, 2023Mehidy Hasan Miraz starred with bat and ball to take the @aramco #POTM against Afghanistan 🤩#CWC23 | #BANvAFG pic.twitter.com/jV0yDDZ0Tm
— ICC (@ICC) October 7, 2023
ಆರಂಭಿಕ ಹಿನ್ನಡೆ ಕಂಡ ಬಾಂಗ್ಲಾ: 157 ರನ್ಗಳ ಗುರಿ ಬೆನ್ನಟ್ಟಿದ್ದ ಬಾಂಗ್ಲಾದೇಶ ಉತ್ತಮ ಆರಂಭ ಪಡೆಯಲಿಲ್ಲ. ತಂಡದ ಪರ ಇನ್ನಿಂಗ್ಸ್ ಶುರು ಮಾಡಿದ ತಂಝೀದ್ ಹಸನ್ ಹಾಗೂ ಲಿಟ್ಟನ್ ದಾಸ್ ಬೇಗ ವಿಕೆಟ್ ಒಪ್ಪಿಸಿದರು. ಒಂದು ಬೌಂಡರಿ ಸಮೇತ ಕೇವಲ 5 ರನ್ ಬಾರಿಸಿ ತಂಝೀದ್ ರನೌಟ್ಗೆ ಸಿಲುಕಿದರು. ಇದಾದ ಸ್ವಲ್ಪ ಹೊತ್ತಿನಲ್ಲೇ ಲಿಟ್ಟನ್ ದಾಸ್ (13) ಕೂಡ ಫಜಲ್ಹುಕ್ ಫಾರೂಕಿ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದರು. ಇದರಿಂದ 6.4 ಓವರ್ಗಳಲ್ಲಿ 27 ರನ್ಗಳಿಗೆ ಆರಂಭಿಕರ ಎರಡು ವಿಕೆಟ್ ಕಳೆದುಕೊಂಡು ಬಾಂಗ್ಲಾ ಆರಂಭಿಕ ಹಿನ್ನಡೆ ಅನುಭವಿಸಿತು.
-
Bangladesh showed all-round dominance to take their opening #CWC23 clash against Afghanistan 👌#BANvAFG 📝: https://t.co/kPZZikaktX pic.twitter.com/6aIXF5KM1A
— ICC (@ICC) October 7, 2023 " class="align-text-top noRightClick twitterSection" data="
">Bangladesh showed all-round dominance to take their opening #CWC23 clash against Afghanistan 👌#BANvAFG 📝: https://t.co/kPZZikaktX pic.twitter.com/6aIXF5KM1A
— ICC (@ICC) October 7, 2023Bangladesh showed all-round dominance to take their opening #CWC23 clash against Afghanistan 👌#BANvAFG 📝: https://t.co/kPZZikaktX pic.twitter.com/6aIXF5KM1A
— ICC (@ICC) October 7, 2023
ಮಿರಾಜ್ - ಶಾಂತೋ ಜೊತೆಯಾಟ: ಮೂರನೇ ವಿಕೆಟ್ಗೆ ನಜ್ಮುಲ್ ಹೊಸೈನ್ ಶಾಂತೋ ಹಾಗೂ ಮೆಹಿದಿ ಹಸನ್ ಮಿರಾಜ್ ಅದ್ಭುತ ಇನ್ನಿಂಗ್ಸ್ ಕಟ್ಟಿದರು. ಇಬ್ಬರು ತಾಳ್ಮೆಯ ಬ್ಯಾಟಿಂಗ್ ಮೂಲಕ ರನ್ಗಳನ್ನು ಕಲೆ ಹಾಕಿದರು. ಅದರಲ್ಲೂ, ಮಿರಾಜ್ ಸಿಂಗಲ್ಸ್ ಹಾಗೂ ಡಬಲ್ಸ್ಗಳೊಂದಿಗೆ ಅವಕಾಶ ಸಿಕ್ಕಾಗ ಬೌಂಡರಿಗಳು ಬಾರಿಸುತ್ತ ರನ್ ಪೇರಿಸಿದರು. ಜೊತೆಗೆ 58 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಅವರು, ಐದು ಬೌಂಡರಿಗಳೊಂದಿಗೆ 57 ರನ್ ಗಳಿಸಿದ್ದಾಗ ವಿಕೆಟ್ ಒಪ್ಪಿಸಿದರು. ಈ ಜೋಡಿ 97 ರನ್ಗಳ ಜೊತೆಯಾಟ ನೀಡಿತು.
ಮತ್ತೊಂದೆಡೆ, ನಿಧಾನವಾಗಿ ಬ್ಯಾಟ್ ಬೀಸುತ್ತಿದ್ದ ಶಾಂತೋ 80 ಬಾಲ್ಗಳಲ್ಲಿ ಅರ್ಧಶತಕ ಬಾರಿಸಿದರು. ಮಿರಾಜ್ ನಂತರ ನಾಯಕ ಶಕೀಬ್ ಅಲ್ ಹಸನ್ 14 ರನ್ಗಳ ಕೊಡುಗೆ ನೀಡಿ ನಿರ್ಗಮಿಸಿದರು. ಅಂತಿಮವಾಗಿ ಶಾಂತೋ ಬಾಲ್ಅನ್ನು ಬೌಂಡರಿಗೆ ಸೇರಿಸುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು. ಈ ಮೂಲಕ 34.4 ಓವರ್ಗಳಲ್ಲಿ 158 ರನ್ ಕಲೆ ಹಾಕಿ 6 ವಿಕೆಟ್ಗಳಿಂದ ಗೆಲುವು ಸಾಧಿಸಿತು. ಶಾಂತೋ ಅಜೇಯ 59 ರನ್ ಹಾಗೂ ಮುಶ್ಫಿಕರ್ ರಹೀಮ್ ಅಜೇಯ 2 ರನ್ ಕಲೆ ಹಾಕಿದರು. ಅಫ್ಘಾನಿಸ್ತಾನ ಪರ ಫಜಲ್ಹಕ್ ಫಾರೂಕಿ, ನವೀನ್ ಉಲ್-ಹಕ್ ಹಾಗೂ ಅಜ್ಮತುಲ್ಲಾ ಒಮರ್ಝೈ ತಲಾ 1 ವಿಕೆಟ್ ಪಡೆದರು.
ಇದನ್ನೂ ಓದಿ: Cricket World Cup 2023: ಅಫ್ಘಾನಿಸ್ತಾನವನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಿದ ಬಾಂಗ್ಲಾದೇಶ