ಹೈದರಾಬಾದ್: ವಿಶ್ವಕಪ್ ಮಹಾ ಕ್ರಿಕೆಟ್ ಹಬ್ಬಕ್ಕೆ ಇನ್ನೆರಡು ದಿನಗಳಷ್ಟೇ ಬಾಕಿ. ಅಭಿಮಾನಿಗಳಲ್ಲಿ ದಿನ ದಿನಕ್ಕೂ ಕುತೂಹಲ ಹೆಚ್ಚುತ್ತಿದೆ. 10 ತಂಡಗಳು ರನ್ ಮತ್ತು ವಿಕೆಟ್ ಬೇಟೆಗೆ ಸಜ್ಜಾಗುತ್ತಿವೆ. ಹೀಗಿರುವಾಗ 1987, 1999, 2003, 2007 ಮತ್ತು 2015 ಸೇರಿದಂತೆ ಒಟ್ಟು ಐದು ಬಾರಿ ವಿಶ್ವಕಪ್ ಗೆದ್ದಿರುವ ಆಸ್ಟ್ರೇಲಿಯಾ ಕದನದಲ್ಲಿ ಬಲಿಷ್ಠ ಕ್ರಿಕೆಟ್ ರಾಷ್ಟ್ರ ಎನಿಸಿಕೊಂಡಿದೆ. ಕಾಂಗರೂ ಪಡೆ ಆರನೇ ಟ್ರೋಫಿ ಗೆಲ್ಲುವ ಗುರಿಯೊಂದಿಗೆ ಭಾರತಕ್ಕೆ ಆಗಮಿಸಿದೆ. ಈ ವರ್ಷ ನಡೆದ ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ ಗೆದ್ದ ಹುರುಪು ತಂಡದಲ್ಲಿದೆ. ಏಕದಿನ ವಿಶ್ವಕಪ್ ಅನ್ನೂ ಗೆದ್ದು ಒಂದೇ ವರ್ಷ ಎರಡು ಐಸಿಸಿ ಟ್ರೋಫಿ ಗೆಲ್ಲುವ ಲೆಕ್ಕಾಚಾರ ಕಮಿನ್ಸ್ ಪಡೆಯದ್ದು.
-
Ready to claim their sixth title at #CWC23 🏆 pic.twitter.com/VgX26hDGCH
— ICC Cricket World Cup (@cricketworldcup) October 2, 2023 " class="align-text-top noRightClick twitterSection" data="
">Ready to claim their sixth title at #CWC23 🏆 pic.twitter.com/VgX26hDGCH
— ICC Cricket World Cup (@cricketworldcup) October 2, 2023Ready to claim their sixth title at #CWC23 🏆 pic.twitter.com/VgX26hDGCH
— ICC Cricket World Cup (@cricketworldcup) October 2, 2023
ಅಸಾಧಾರಣ ಬೌಲಿಂಗ್ ದಾಳಿ: ಆಸ್ಟ್ರೇಲಿಯಾವು ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್ ಮತ್ತು ಜೋಶ್ ಹ್ಯಾಜಲ್‌ವುಡ್‌ರಂಥ ದಿಗ್ಗಜ ಬೌಲರ್‌ಗಳನ್ನು ಒಳಗೊಂಡಿದೆ. ಈ ತ್ರಿವಳಿ ವೇಗಿಗಳು ತಮ್ಮ ರೆಕಾರ್ಡ್ಗಳಿಂದ ಎಷ್ಟು ಮಾರಕ ಎಂಬುದನ್ನು ಸಾಬೀತು ಮಾಡಿದವರು. ಭಾರತದ ಮಧ್ಯಮ ವೇಗದ ಪಿಚ್‌ಗಳಲ್ಲೂ ಗಂಟೆಗೆ 140 ಕಿಲೋಮೀಟರ್ ವೇಗದಲ್ಲಿ ಬೌಲಿಂಗ್ ಮಡುವ ಸಾಮರ್ಥ್ಯವನ್ನು ಇವರು ಹೊಂದಿದ್ದಾರೆ. ಲೆಗ್ ಸ್ಪಿನ್ನರ್ ಆ್ಯಡಮ್ ಝಂಪಾ ಭಾರತೀಯ ಪಿಚ್‌ಗಳಲ್ಲಿ ಬೌಲಿಂಗ್ ಮಾಡಿದ ಅನುಭವಿ.
ಜನವರಿ 2023ರಿಂದ ಮಿಚೆಲ್ ಸ್ಟಾರ್ಕ್ ಭಾರತದ ನೆಲದಲ್ಲಿ ಕೇವಲ ನಾಲ್ಕು ಏಕದಿನ ಆಡಿದ್ದು, 24.66 ಸರಾಸರಿಯಲ್ಲಿ ಒಂಬತ್ತು ವಿಕೆಟ್ ಪಡೆದಿದ್ದಾರೆ. ಹ್ಯಾಜಲ್‌ವುಡ್ ಗಾಯದ ಕಾರಣದಿಂದ ತಂಡದಿಂದ ಹೊರಗುಳಿದಿದ್ದರು. ಆದರೆ ಭಾರತದ ಪಿಚ್ಗಳ ಅರಿವು ಅವರಿಗಿದೆ. ಇಲ್ಲಿಯವರೆಗೆ ಹ್ಯಾಜಲ್‌ವುಡ್ 74 ಏಕದಿನಗಳಲ್ಲಿ 26.4 ರ ಸರಾಸರಿಯಲ್ಲಿ 4.70ರ ಎಕಾನಮಿಯೊಂದಿಗೆ 116 ವಿಕೆಟ್ಗಳನ್ನು ಪಡೆದಿದ್ದಾರೆ. ಕಮಿನ್ಸ್ 77 ಒನ್ ಡೇ ಮ್ಯಾಚ್ಗಳಿಂದ 126 ವಿಕೆಟ್ ಪಡೆದಿದ್ದಾರೆ. ಭಾರತೀಯ ಸ್ಪಿನ್ ವಿಕೆಟ್ಗಳಲ್ಲಿ ಆ್ಯಡಮ್ ಝಂಪಾ ಪಾತ್ರ ತಂಡದಲ್ಲಿ ಪ್ರಮುಖವಾಗಿರುತ್ತದೆ. ಭಾರತದ ಪಿಚ್‌ಗಳಲ್ಲಿ 16 ಏಕದಿನ ಪಂದ್ಯದಲ್ಲಿ 30.77 ಸರಾಸರಿಯಲ್ಲಿ 27 ವಿಕೆಟ್ ಉರುಳಿಸಿದ್ದಾರೆ.
ಸ್ಫೋಟಕ ಬ್ಯಾಟಿಂಗ್ ಲೈನಪ್: ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಮಾರ್ಕಸ್ ಸ್ಟೊಯಿನಿಸ್ ಅವರಂತಹ ಪವರ್ ಹಿಟ್ಟರ್‌ಗಳು ತಂಡ ಬ್ಯಾಟಿಂಗ್ ಬಲ. ಸ್ಟೀವ್ ಸ್ಮಿತ್ ಅವರ ಅನುಭವ ಮತ್ತು ಉದಯೋನ್ಮುಖ ಪ್ರತಿಭೆ ಮಾರ್ನಸ್ ಲ್ಯಾಬುಶೇನ್ ತಂಡಕ್ಕೆ ಆಧಾರವಾಗಲಿದ್ದಾರೆ. ಅಗ್ರ ಕ್ರಮಾಂಕ ಕುಸಿದರೆ, ಮಧ್ಯಮ ಕ್ರಮಾಂಕದಲ್ಲಿ ಸ್ಥಿರತೆ ಒದಗಿಸುವ ಸಾಮರ್ಥ್ಯ ತಂಡಕ್ಕಿದೆ. ಈ ವರ್ಷ ಡೇವಿಡ್ ವಾರ್ನರ್ ಭಾರತದ ವಿರುದ್ಧ ಸತತ ಮೂರು ಅರ್ಧಶತಕಗಳು ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಶತಕಗಳೊಂದಿಗೆ 9 ಏಕದಿನದಲ್ಲಿ 390 ರನ್‌ಗಳನ್ನು ಗಳಿಸಿದ್ದಾರೆ. ಒನ್ಡೇ ಕ್ರಿಕೆಟ್ ಮಾದರಿಯಲ್ಲಿ ಆಸ್ಟ್ರೇಲಿಯಾ ಪರ ಅತಿ ಹೆಚ್ಚು ರನ್ ಗಳಿಸಿದ ಮೂರನೇ ಆಟಗಾರ ಇವರು.
-
An in-form batter makes a last-minute entry into the Australia #CWC23 squad ⚡
— ICC Cricket World Cup (@cricketworldcup) September 28, 2023 " class="align-text-top noRightClick twitterSection" data="
Details 👉 https://t.co/2VT9G4oTiS pic.twitter.com/5tYKB9QK8i
">An in-form batter makes a last-minute entry into the Australia #CWC23 squad ⚡
— ICC Cricket World Cup (@cricketworldcup) September 28, 2023
Details 👉 https://t.co/2VT9G4oTiS pic.twitter.com/5tYKB9QK8iAn in-form batter makes a last-minute entry into the Australia #CWC23 squad ⚡
— ICC Cricket World Cup (@cricketworldcup) September 28, 2023
Details 👉 https://t.co/2VT9G4oTiS pic.twitter.com/5tYKB9QK8i
ಆಲ್‌ರೌಂಡ್ ಪ್ರದರ್ಶನ: ಕ್ಯಾಮರೂನ್ ಗ್ರೀನ್, ಮಾರ್ಕಸ್ ಸ್ಟೊಯಿನಿಸ್ ಮತ್ತು ಮಿಚೆಲ್ ಮಾರ್ಷ್ ಅವರಂತಹ ಪ್ರತಿಭಾವಂತ ಆಲ್‌ರೌಂಡರ್‌ಗಳನ್ನು ತಂಡ ಒಳಗೊಂಡಿದೆ. ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ನಸ್ ಲ್ಯಾಬುಶೇನ್ ಮತ್ತು ಟ್ರಾವಿಸ್ ಹೆಡ್ ಸ್ಪಿನ್ ವಿಭಾಗದಲ್ಲಿ ಕಾರ್ಯನಿರ್ವಹಿಸಬಲ್ಲರು. ಮ್ಯಾಕ್ಸ್‌ವೆಲ್ 10 ಓವರ್ ಮಾಡುವ ಕ್ಷಮತೆ ಹೊಂದಿದ್ದಾರೆ. ವಿಶ್ವಕಪ್ಗೂ ಮುನ್ನ ಭಾರತದಲ್ಲಿ ನಡೆದ ಏಕದಿನ ಸರಣಿಯ ಮೂರನೇ ಪಂದ್ಯದಲ್ಲಿ 10 ಓವರ್ ಮಾಡಿದ ಅವರು ಪ್ರಮುಖ ಐದು ವಿಕೆಟ್ ಕಿತ್ತು ಆಸಿಸ್ ಗೆಲುವಿಗೆ ಕಾರಣರಾಗಿದ್ದರು. ಸ್ಟೊಯಿನಿಸ್ ಈ ವರ್ಷ 7 ಏಕದಿನ ಪಂದ್ಯಗಳಲ್ಲಿ 7 ಮತ್ತು ಗ್ರೀನ್ 7 ಪಂದ್ಯಗಳಲ್ಲಿ 5 ವಿಕೆಟ್ ಪಡೆದಿದ್ದಾರೆ.
ದೌರ್ಬಲ್ಯಗಳೇನು?:
ಗಾಯದ ಸಮಸ್ಯೆ: ಪ್ಯಾಟ್ ಕಮಿನ್ಸ್, ಗ್ಲೆನ್ ಮ್ಯಾಕ್ಸ್‌ವೆಲ್, ಸ್ಟೀವ್ ಸ್ಮಿತ್ ಮತ್ತು ಮಿಚೆಲ್ ಸ್ಟಾರ್ಕ್ ಸೇರಿದಂತೆ ಕೆಲವು ಪ್ರಮುಖ ಆಟಗಾರರು ಸತತ ಟೆಸ್ಟ್ ಪಂದ್ಯಗಳಲ್ಲಿ ಭಾಗವಗಹಿಸಿ ಗಾಯಕ್ಕೆ ತುತ್ತಾಗಿ ತಂಡದಿಂದ ಹೊರಗುಳಿದಿದ್ದರು. ಈ ಪ್ರಮುಖ ಆಟಗಾರರು ಸಂಪೂರ್ಣ ಫಿಟ್ ಆಗಿದ್ದಾರೆ ಎಂದು ಹೇಳುವುದು ಕಷ್ಟ. ಪಂದ್ಯಾವಳಿಯ ನಡುವೆ ಮತ್ತೆ ಫಿಟ್ನೆಸ್ ಸಮಸ್ಯೆ ಎದುರಿಸಿದರೆ ತಂಡ ದುರ್ಬಲವಾಗಲಿದೆ. ಈ ವರ್ಷ ವಿಶ್ವಕಪ್ ಇದ್ದರೂ ಏಕದಿನ ಪಂದ್ಯಗಳಿಂದ ಬುಹುತೇಕ ಆಸ್ಟ್ರೇಲಿಯನ್ ತಂಡದ ಆಟಗಾರರು ದೂರವೇ ಇದ್ದರು. ಇತ್ತೀಚೆಗೆ ಪ್ಯಾಟ್ ಕಮ್ಮಿನ್ಸ್ ಎರಡು, ಗ್ಲೆನ್ ಮ್ಯಾಕ್ಸ್‌ವೆಲ್ ಒಂದು, ಸ್ಟೀವ್ ಸ್ಮಿತ್ ಆರು ಮತ್ತು ಮಿಚೆಲ್ ಸ್ಟಾರ್ಕ್ ನಾಲ್ಕು ಪಂದ್ಯ ಆಡಿದ್ದಾರೆ ಅಷ್ಟೇ.
ಏಕಾಂಗಿ ಸ್ಪಿನ್ನರ್: ಆ್ಯಡಮ್ ಝಂಪಾ ಆಸ್ಟ್ರೇಲಿಯಾದ ಏಕೈಕ ಸ್ಪೆಷಲಿಸ್ಟ್ ಸ್ಪಿನ್ನರ್. ತಂಡ ಬ್ಯಾಕಪ್ ಸ್ಪೆಷಲಿಸ್ಟ್ ಸ್ಪಿನ್ನರ್ಗಳನ್ನು ಹೊಂದಿಲ್ಲ. ಭಾರತದಂತಹ ಸ್ಪಿನ್‌ಸ್ನೇಹಿ ಪಿಚ್‌ಗಳಲ್ಲಿ ಎರಡನೇ ಪ್ರಮುಖ ಸ್ಪಿನ್ನರ್ ಇರದಿರುವುದು ತಂಡದ ದೊಡ್ಡ ದೌರ್ಬಲ್ಯ.
ಅವಕಾಶಗಳೇನು?: ಯುವ ಪ್ರತಿಭೆಗಳಾದ ಜೋಶ್ ಇಂಗ್ಲಿಸ್, ಅಲೆಕ್ಸ್ ಕ್ಯಾರಿ, ಮಾರ್ನಸ್ ಲ್ಯಾಬುಶೇನ್ ಮತ್ತು ಕ್ಯಾಮರೂನ್ ಗ್ರೀನ್ ಆಸ್ಟ್ರೇಲಿಯಾ ತಂಡಕ್ಕೆ ಮುಂದಿನ ವರ್ಷಗಳ ಭರವಸೆಯ ಆಟಗಾರರು. ಈಗಾಗಲೇ ತಂಡದಲ್ಲಿ ಸಿಕ್ಕ ಅವಕಾಶಗಳಲ್ಲಿ ಪ್ರತಿಭೆಯನ್ನು ತೋರಿಸಿದ್ದಾರೆ. ವಿಶ್ವಕಪ್ನಲ್ಲಿ ಅನುಭವಿ ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್ ಮತ್ತು ಮಾರ್ಕಸ್ ಸ್ಟೊಯಿನಿಸ್ ಅವರೊಂದಿಗೆ ಸೇರಿ ಮಹತ್ವದ ಕೊಡುಗೆ ನಿರೀಕ್ಷಿಸಲಾಗುತ್ತಿದೆ.
ಇದನ್ನೂ ಓದಿ: ಏಕದಿನ ವಿಶ್ವಕಪ್ 2023: ಮಾಜಿ ಕ್ರಿಕೆಟರ್ ಕಿರಣ್ ಮೋರೆ ಜತೆ ಈಟಿವಿ ಭಾರತ ವಿಶೇಷ ಸಂದರ್ಶನ