ETV Bharat / sports

Cricket World Cup 2023: ಮತ್ತೆ ಬದಲಾಗುತ್ತಾ ವಿಶ್ವಕಪ್​ ಶೆಡ್ಯೂಲ್​? - ಈಟಿವಿ ಭಾರತ್​ ಕನ್ನಡ ನ್ಯೂಸ್

Cricket World Cup 2023 Schedule: ನಗರ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯಗಳ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡುವಂತೆ ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್, ಬಿಸಿಸಿಐಗೆ ಪತ್ರ ಬರೆದಿದೆ.

Cricket World Cup 2023
ಕ್ರಿಕೆಟ್ ವಿಶ್ವಕಪ್ 2023
author img

By

Published : Aug 20, 2023, 6:07 PM IST

ನವದೆಹಲಿ: ಕ್ರಿಕೆಟ್ ವಿಶ್ವಕಪ್​ ಟೂರ್ನಿಯ ವೇಳಾಪಟ್ಟಿಯಲ್ಲಿ ಮತ್ತೊಮ್ಮೆ ಬದಲಾವಣೆ ಆಗುವ ಸಾಧ್ಯತೆ ಇದೆ. ಹೈದಾರಬಾದ್​ ಮೈದಾನದಲ್ಲಿ ಅಕ್ಟೋಬರ್​ 9 ಹಾಗೂ 10 ರಂದು ವಿಶ್ವಕಪ್ ಪಂದ್ಯಗಳು ಸತತವಾಗಿ ನಡೆಯಲಿದ್ದು, ಇದನ್ನು ಬದಲಿಸಿ ಒಂದು ದಿನದ ಬ್ರೇಕ್​ ನೀಡಬೇಕೆಂದು ಬಿಸಿಸಿಐಗೆ ಹೈದರಾಬಾದ್​ ಕ್ರಿಕೆಟ್​ ಅಸೋಸಿಯೇಷನ್​ ಪತ್ರ ಬರೆದಿದೆ. ಈ ಮೂಲಕ ವಿಶ್ವಕಪ್​ ವೇಳಾಪಟ್ಟಿಯಲ್ಲಿ ಮತ್ತೊಂದು ಬದಲಾವಣೆ ಆಗುವ ಸೂಚನೆ ಸಿಕ್ಕಿದೆ.

ವಿಶ್ವಕಪ್ ವೇಳಾಪಟ್ಟಿ ಜೂನ್‌ನಲ್ಲಿ ತಡವಾಗಿ ಪ್ರಕಟವಾಗಿತ್ತು. ನಂತರ, ಬಿಸಿಸಿಐ ಮತ್ತು ಐಸಿಸಿ ಈ ತಿಂಗಳ ಆರಂಭದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಪಂದ್ಯ ಸೇರಿದಂತೆ ಒಟ್ಟು 9 ಪಂದ್ಯಗಳನ್ನು ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿತ್ತು. ಇದರಿಂದಾಗಿ ಅಕ್ಟೋಬರ್ 15 ರಂದು ಅಹಮದಾಬಾದ್‌ನಲ್ಲಿ ನಡೆಯಬೇಕಿದ್ದ ಇಂಡೋ-ಪಾಕ್ ಪಂದ್ಯವು ಒಂದು ದಿನ ಮೊದಲು ಅಂದರೆ ಅ.14ಕ್ಕೆ ನಿಗದಿಪಡಿಸಲಾಗಿತ್ತು. ಪರಿಣಾಮವಾಗಿ ಹೈದರಾಬಾದ್‌ನಲ್ಲಿ ಶ್ರೀಲಂಕಾ ವಿರುದ್ಧದ ಪಾಕಿಸ್ತಾನದ ಪಂದ್ಯವನ್ನು ಅಕ್ಟೋಬರ್ 12 ರಿಂದ ಅಕ್ಟೋಬರ್ 10 ಕ್ಕೆ ಸ್ಥಳಾಂತರಿಸಲಾಯಿತು. ಅಲ್ಲದೆ ಅಕ್ಟೋಬರ್ 9 ರಂದು ನ್ಯೂಜಿಲೆಂಡ್ ಮತ್ತು ನೆದರ್ಲ್ಯಾಂಡ್ಸ್ ನಡುವೆ ನಡೆಯುವ ಪಂದ್ಯಕ್ಕೂ ಹೈದಾರಬಾದ್​ ಮೈದಾನ ಆತಿಥ್ಯ ವಹಿಸುತ್ತಿದೆ.

ಈಗ, ಹೈದರಾಬಾದ್ ಪೊಲೀಸರು ಬ್ಯಾಕ್ ಟು ಬ್ಯಾಕ್ ಪಂದ್ಯಗಳಿಗೆ ಭದ್ರತೆಯನ್ನು ಒದಗಿಸಬೇಕಿರುವುದರಿಂದ ಮತ್ತೊಮ್ಮೆ ವೇಳಾಪಟ್ಟಿ ಬದಲಾವಣೆಗೆ ಮನವಿ ಮಾಡಲಾಗಿದೆ. ಇದು ಖಚಿತವಾಗಿ ಬದಲಾಗಲಿದೆ ಎಂದು ನಾನು ಹೇಳಲಾರೆ ಆದರೆ ಬ್ಯಾಕ್ ಟು ಬ್ಯಾಕ್ ಪಂದ್ಯಗಳು ಸೂಕ್ತವಲ್ಲ. ನನ್ನ ಪ್ರಕಾರ ಬಿಸಿಸಿಐ ಮರುಪರಿಶೀಲನೆ ಮಾಡಿದರೆ ಉತ್ತಮ. ನಾವು ಭದ್ರತಾ ಏಜೆನ್ಸಿಗಳೊಂದಿಗೆ ಕೆಲಸ ಮಾಡಬೇಕಾಗುತ್ತದೆ. ಎರಡು ವಿಶ್ವಕಪ್ ಪಂದ್ಯಗಳ ನಡುವೆ ಯಾರಾದರೂ ಒಂದು ದಿನ ಅಂತರವನ್ನು ಬಯಸುತ್ತಾರೆ. ಅದು ಸಾಧ್ಯವೋ ಇಲ್ಲವೋ ಎಂದು ನೋಡಲು ನಾವು ಇನ್ನೂ ಭದ್ರತಾ ಏಜೆನ್ಸಿಗಳೊಂದಿಗೆ ತೊಡಗಿಸಿಕೊಂಡಿದ್ದೇವೆ ಎಂದು ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ ಅಧಿಕಾರಿಗಳು ತಿಳಿಸಿದ್ದಾರೆ.

ಅಂತರರಾಷ್ಟ್ರೀಯ ಪಂದ್ಯಾವಳಿಗಳಿಗಾಗಿ ಹೈದರಾಬಾದ್​ನಲ್ಲಿ 2000 ರಿಂದ 2500 ಪೊಲೀಸರು ಸಿಬ್ಬಂದಿಯನ್ನು ನಿಯೋಜಿಸುತ್ತಾರೆ. ಈ ನಿಯೋಜನೆಯು ಆಟದ ಸ್ವರೂಪವನ್ನು ಹಾಗೂ ಭದ್ರತೆಯನ್ನು ಅವಲಂಬಿಸಿರುತ್ತದೆ. ಮುಖ್ಯವಾಗಿ ಪಾಕಿಸ್ತಾನ ಪಂದ್ಯದ ವೇಳೆ ಭದ್ರತೆಯನ್ನು ಹೆಚ್ಚಿಸುವ ನಿರೀಕ್ಷೆಯಿದೆ ಎಂದು ಪತ್ರದಲ್ಲಿ ಅಧಿಕಾರಿಗಳು ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ : Jasprit Bumrah: ನಾಯಕರಾಗಿ ದಾಖಲೆ ಬರೆದ ಜಸ್ಪ್ರೀತ್​ ಬುಮ್ರಾ.. ಐರ್ಲೆಂಡ್​ ವಿರುದ್ಧ ಭರ್ಜರಿ ಕಮ್​ಬ್ಯಾಕ್​

ಇನ್ನು 2016ರ T20 ವಿಶ್ವಕಪ್ ಬಳಿಕ ಮೊದಲ ಬಾರಿಗೆ ಭಾರತದಲ್ಲಿ ಆಡಲಿರುವ ಪಾಕಿಸ್ತಾನ ತಂಡವು ಹೈದರಾಬಾದ್‌ನಲ್ಲಿ ಹೆಚ್ಚು ದಿನ ಉಳಿದುಕೊಳ್ಳಲಿದೆ. ಏಕೆಂದರೆ ಹೈದರಾಬಾದ್​ನಲ್ಲಿ ಪಾಕ್ ಹಲವು ಪಂದ್ಯಗಳನ್ನು ಆಡಲಿದೆ. ಮೊದಲು ಎರಡು ಅಭ್ಯಾಸ ಪಂದ್ಯಗಳು ಸೇರಿದಂತೆ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ತಮ್ಮ ಮೊದಲ ಪಂದ್ಯವನ್ನು ಅಕ್ಟೋಬರ್ 6 ರಂದು ನೆದರ್ಲ್ಯಾಂಡ್ಸ್ ವಿರುದ್ಧ ಕಣಕ್ಕಿಳಿಯಲಿದೆ. ಹೀಗಾಗಿ ಭದ್ರತಾ ದೃಷ್ಟಿಯಿಂದ ಪಂದ್ಯಗಳಿಗೆ ಬ್ರೇಕ್​ ನೀಡಿ ಆಡಿಸಬೇಕು ಎಂದು ಬಿಸಿಸಿಐಗೆ ಮನವಿ ಮಾಡಲಾಗಿದೆ.

ಇದನ್ನೂ ಓದಿ : Cricket World Cup 2023: ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023... ಲಿಂಗ ಸಮಾನತೆ ಸಾರುವ ಮ್ಯಾಸ್ಕಾಟ್ ಬಿಡುಗಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.