ETV Bharat / sports

ವಿಶ್ವಕಪ್​ ಟೂರ್ನಿ ಆರಂಭ: ಟಾಸ್​ ಗೆದ್ದ ಆಫ್ರಿಕಾ ಫೀಲ್ಡಿಂಗ್ ಆಯ್ಕೆ, ಇಂಗ್ಲೆಂಡ್​ಗೆ ಆರಂಭಿಕ ಆಘಾತ

ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್​ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಮೊದಲ ಪಂದ್ಯದಲ್ಲಿ ಟಾಸ್​ ಗೆದ್ದ ಹರಿಣಗಳ ತಂಡ ಬೌಲಿಂಗ್​ ಆಯ್ದುಕೊಂಡಿದೆ.

author img

By

Published : May 30, 2019, 3:15 PM IST

ಟಾಸ್​ ಗೆದ್ದ ದಕ್ಷಿಣ ಆಫ್ರಿಕಾ ಫೀಲ್ಡಿಂಗ್​ ಆಯ್ಕೆ

ಇಂಗ್ಲೆಂಡ್​: ಬಹುನಿರೀಕ್ಷಿತ ಐಸಿಸಿ ಏಕದಿನ ವಿಶ್ವಕಪ್​ ಟೂರ್ನಿ ಆರಂಭಗೊಂಡಿದ್ದು, ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್​ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಸೆಣಸಾಡುತ್ತಿವೆ.

ಟಾಸ್​ ಗೆದ್ದ ದಕ್ಷಿಣ ಆಫ್ರಿಕಾ ಫೀಲ್ಡಿಂಗ್​ ಆಯ್ದುಕೊಂಡಿದೆ. ಹರಿಣಗಳ ತಂಡದ ಸ್ಪಿನ್ನರ್​ ಇಮ್ರಾನ್​ ತಾಹೀರ್​ ಎಸೆದ ಮೊದಲ ಓವರ್​ನಲ್ಲೇ ವಿಕೆಟ್​ ಪಡೆದು ಮಿಂಚಿದ್ದು, ಆತಿಥೇಯರಿಗೆ ಆರಂಭಿಕ ಆಘಾತ ನೀಡಿದ್ದಾರೆ. ಜಾನಿ ಬೈರ್ಸ್ಟೋವ್ ಮೊದಲ ಎಸೆತದಲ್ಲೇ ಕ್ಯಾಚ್ ನೀಡಿ ನಿರ್ಗಮಿಸಿದ್ದಾರೆ.

ಕ್ರಿಕೆಟ್​ ಜನಕನೆಂದು ಕರೆಸಿಕೊಳ್ಳುವ ಇಂಗ್ಲೆಂಡ್​ 44 ವರ್ಷಗಳಿಂದ ವಿಶ್ವಕಪ್​ನಲ್ಲಿ ಪಾಲ್ಗೊಳ್ಳುತ್ತಿದ್ದು, ಮೂರು ಬಾರಿ ಫೈನಲ್​ ತಲುಪಿದರೂ ಒಮ್ಮೆಯೂ ಪ್ರಶಸ್ತಿ ಗೆಲ್ಲದೇ ನಿರಾಸೆಯನುಭವಿಸಿದೆ.

ಇತ್ತ ದಕ್ಷಣ ಆಫ್ರಿಕಾ ಕೂಡ ನಾಲ್ಕು ಬಾರಿ ಸೆಮಿಫೈನಲ್​ ತಲುಪಿದ್ದು ಒಮ್ಮೆಯೂ ಫೈನಲ್​ ತಲುಪಿಲ್ಲ. ಹೀಗಾಗಿ ದಿ ಓವಲ್​ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಪಂದ್ಯ ತೀವ್ರ ಕುತೂಹಲ ಮೂಡಿಸಿದೆ. ಉದ್ಘಾಟನಾ ಪಂದ್ಯದಲ್ಲಿ ಜಯ ಸಾಧಿಸಲು ಉಭಯ ತಂಡಗಳು ಕಾತರರಾಗಿದ್ದಾರೆ.

ತಂಡಗಳು:

ಇಂಗ್ಲೆಂಡ್​: ಇಯಾನ್​ ಮಾರ್ಗನ್​(ನಾಯಕ), ಜಾಸನ್​ ರಾಯ್​, ಜಾನಿ ಬೈರ್ಸ್ಟೋವ್, ಜೋ ರೂಟ್​, ಬೆನ್​ ಸ್ಟೋಕ್ಸ್​, ಜಾಸ್​ ಬಟ್ಲರ್​, ಮೊಯಿನ್​ ಅಲಿ, ಕ್ರಿಸ್​ ವೋಕ್ಸ್​, ಲೈಮ್ ಫ್ಲಂಕೇಟ್​, ಜೋಫ್ರಾ ಆರ್ಚರ್, ಆದಿಲ್​ ರಶೀದ್​,

ದಕ್ಷಿಣ ಆಫ್ರಿಕಾ: ಕ್ವಿಂಟನ್​ ಡಿಕಾಕ್​, ಹಾಸಿಂ ಆಮ್ಲ, ಅಡೆನ್​ ಮಾರ್ಕ್ರಮ್, ಫಾಫ್​ ಡು ಪ್ಲೆಸಿಸ್​ (ನಾಯಕ), ರಾಸ್ಸಿ ವ್ಯಾನ್​ ಡರ್​ ಡಾಸ್ಸೆನ್, ಜೀನ್​ ಪಾಲ್​ ಡುಮಿನಿ, ಆ್ಯಂಡಿಲೇ ಪೆಹ್ಲುಕ್ವಾಯೋ, ಡ್ವೈನ್​ ಪ್ರೆಟೋರಿಯಸ್​, ಕಗಿಸೋ ರಬಡಾ, ಲುಂಗಿ ಎಂಗಿಡಿ, ಇಮ್ರಾನ್​ ತಾಹೀರ್

Intro:Body:Conclusion:

For All Latest Updates

TAGGED:

south Africa
ETV Bharat Logo

Copyright © 2024 Ushodaya Enterprises Pvt. Ltd., All Rights Reserved.