ಲಂಡನ್: ವಿಶ್ವಕಪ್ ಟೂರ್ನಿಯಲ್ಲಿ ಭರ್ಜರಿ ಫಾರ್ಮ್ನಲ್ಲಿರುವ ಹಿಟ್ ಮ್ಯಾನ್ ರೋಹಿತ್ ಶರ್ಮಾ ಅಮೋಘ ಪ್ರದರ್ಶನ ತೋರುತ್ತಿದ್ದಾರೆ. ಈಗಾಗಲೇ ಏಕದಿನ ಕ್ರಿಕೆಟ್ನಲ್ಲಿ ಹಲವು ದಾಖಲೆ ಬರೆದಿರುವ ರೋಹಿತ್, ಇಂದಿನ ಪಂದ್ಯದಲ್ಲಿ ಹೊಸ ದಾಖಲೆಗಳ ಮೇಲೆ ಕಣ್ಣಿಟ್ಟಿದ್ದಾರೆ.
ಸಂಗಕ್ಕರ ದಾಖಲೆ ಬ್ರೇಕ್ ಮಾಡಲು ಬೇಕು 1 ಶತಕ:
ವರ್ಲ್ಡ್ಕಪ್ ಟೂರ್ನಿಯಲ್ಲಿ ನಾಲ್ಕು ಶತಕ ಸಿಡಿಸಿರುವ ರೋಹಿತ್ ಶರ್ಮಾ ಇನ್ನೊಂದು ಶತಕ ಸಿಡಿಸಿದ್ರೆ, ಶ್ರೀಲಂಕಾ ಆಟಗಾರ ಕುಮಾರ್ ಸಂಗಕ್ಕರ ದಾಖಲೆ ಬ್ರೇಕ್ ಮಾಡಲಿದ್ದಾರೆ. 2015ರ ವಿಶ್ವಕಪ್ ಟೂರ್ನಿಯಲ್ಲಿ ಸಂಗಕ್ಕರ 4 ಶತಕ ಸಿಡಿಸಿ ದಾಖಲೆ ಬರೆದಿದ್ದರು.
ಈಗಾಗಲೇ ರೋಹಿತ್ ಶರ್ಮಾ ಎಂಟು ಇನ್ನಿಂಗ್ಸ್ನಲ್ಲಿ 544 ರನ್ಗಳು ಕಲೆಹಾಕುವ ಮೂಲಕ 2011 ರಲ್ಲಿ 482 ಹಾಗೂ 1996ರಲ್ಲಿ 523 ರನ್ ಬಾರಿಸಿದ್ದ ಸಚಿನ್ ದಾಖಲೆಯನ್ನು ಮುರಿದಿದ್ದಾರೆ. 2003 ರ ವಿಶ್ವಕಪ್ನಲ್ಲಿ ತೆಂಡೂಲ್ಕರ್ 673 ರನ್ ಗಳಿಸಿ ದಾಖಲೆ ಬರೆದಿದ್ದರು. ಈ ದಾಖಲೆ ಮುರಿಯಲು ರೋಹಿತ್ ಶರ್ಮಾಗೆ ಕೇವಲ 129 ರನ್ಗಳು ಬೇಕಾಗಿವೆ.