ETV Bharat / sports

ಇಂಡೋ-ಲಂಕಾ ಫೈಟ್​ ವೇಳೆ 'ಜಸ್ಟಿಸ್​ ಫಾರ್​ ಕಾಶ್ಮೀರ' ಬ್ಯಾನರ್​ ಹೊತ್ತು ಸಾಗಿದ ವಿಮಾನ! - ಬಿಸಿಸಿಐ

ಭಾರತ ಮತ್ತು ಶ್ರೀಲಂಕಾ ವಿರುದ್ಧದ ಪಂದ್ಯದ ವೇಳೆ ವಿಮಾನವೊಂದು ಭಾರತ ವಿರೋಧಿ ಬ್ಯಾನರ್ ಪ್ರದರ್ಶಿಸಿದ್ದು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಐಸಿಸಿಗೆ, ಬಿಸಿಸಿಐ ಪತ್ರ ಬರೆದಿದೆ.

ಬ್ಯಾನರ್​ ಹೊತ್ತು ಸಾಗಿದ ವಿಮಾನ
author img

By

Published : Jul 7, 2019, 2:14 PM IST

ಲಂಡನ್: ನಿನ್ನೆ ಲೀಡ್ಸ್​​ ಮೈದಾನದಲ್ಲಿ ಭಾರತ ಮತ್ತು ಶ್ರೀಲಂಕಾ ನಡುವಿನ ಪಂದ್ಯದ ವೇಳೆ ವಿಮಾನಗಳು ಭಾರತ ವಿರೋಧಿ ಬ್ಯಾನರ್​ಗಳನ್ನ ಪ್ರದರ್ಶಿಸಿ ಆತಂಕ ಮೂಡಿಸಿವೆ.

World Cup Cricket
'ಜಸ್ಟಿಸ್​ ಫಾರ್​ ಕಾಶ್ಮೀರ' ಬ್ಯಾನರ್​ ಹೊತ್ತು ಸಾಗಿದ ವಿಮಾನ

ಭಾರತ ಶ್ರೀಲಂಕಾ ನಡುವಿನ ಪಂದ್ಯ ಆರಂಭವಾದ ಕೆಲವೇ ನಿಮಿಷಗಳಲ್ಲಿ ವಿಮಾನವೊಂದು 'ಜಸ್ಟಿಸ್​ ಫಾರ್​ ಕಾಶ್ಮೀರ' ಎಂಬ ಬ್ಯಾನರ್​ ಪ್ರದರ್ಶಿಸುತ್ತಾ ಮೈದಾನದ ಮೇಲೆ ಹಾರಾಟ ನಡೆಸಿತು. ಅದಾದ ಅರ್ಧಗಂಟೆಯಲ್ಲೆ ಅಂತದ್ದೇ ವಿಮಾನ 'ನರಮೇಧ ನಿಲ್ಲಿಸಿ, ಕಾಶ್ಮೀರ ಸ್ವತಂತ್ರಗೊಳಿಸಿ' ಎಂಬ ಮತ್ತೊಂದು ಬ್ಯಾನರ್​ ಹೊತ್ತು ಸಾಗಿತು.

ಇನ್ನು ಟೀಂ ಇಂಡಿಯಾ ಬ್ಯಾಟಿಂಗ್​ ಆರಂಭಿಸಿದ ವೇಳೆ 'ಜನರನ್ನ ಕಾನೂನು ಬಾಹಿರವಾಗಿ ಗಲ್ಲಿಗೇರಿಸುವುದನ್ನ ನಿಲ್ಲಿಸಿ' ಎಂಬ ಮತ್ತೊಂದು ಬ್ಯಾನರ್​ ಪ್ರದರ್ಶಿಸುತ್ತ ಮೈದಾನದ ಮೇಲೆ ವಿಮಾನವೊಂದು ಹಾರಾಟ ನಡೆಸಿದೆ.

ಘಟನೆಯನ್ನ ಗಂಭೀರವಾಗಿ ಪರಿಗಣಿಸಿರುವ ಬಿಸಿಸಿಐ, ಐಸಿಸಿಗೆ ಪತ್ರ ಬರೆದಿದೆ. ನಮಗೆ ನಮ್ಮ ಆಟಗಾರ ರಕ್ಷಣೆ ಮುಖ್ಯ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಪತ್ರದಲ್ಲಿ ತಿಳಿಸಿದೆ.

ಇದೇ ಮೈದಾನದಲ್ಲಿ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಪಂದ್ಯದ ವೇಳೆ ವಿಮಾನವೊಂದು 'ಜಸ್ಟಿಸ್​ ಫಾರ್ ಬಲೂಚಿಸ್ತಾನ್' ಎಂಬ ಬ್ಯಾನರ್​ ಪ್ರದರ್ಶಿಸಿ ಆತಂಕ ಮೂಡಿಸಿತ್ತು.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.