ಇಂಗ್ಲೆಂಡ್: ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಔಟ್ ಆಗಿದ್ದರೂ ಹೊರನಡೆಯದೇ ಕ್ರೀಸ್‌ನಲ್ಲೇ ಇದ್ದ ಕಾರಣ ದಕ್ಷಿಣ ಆಫ್ರಿಕಾ ಮಾಜಿ ಸ್ಪಿನ್ನರ್ ಪಾಲ್ ಆ್ಯಡಮ್ಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
-
Why didn’t Kane Williamson walk 👀 #CWC19 #SAvsNZ pic.twitter.com/H3Cj6M4pGy
— Paul Adams (@PaulAdams39) June 19, 2019 " class="align-text-top noRightClick twitterSection" data="
">Why didn’t Kane Williamson walk 👀 #CWC19 #SAvsNZ pic.twitter.com/H3Cj6M4pGy
— Paul Adams (@PaulAdams39) June 19, 2019Why didn’t Kane Williamson walk 👀 #CWC19 #SAvsNZ pic.twitter.com/H3Cj6M4pGy
— Paul Adams (@PaulAdams39) June 19, 2019
ದಕ್ಷಿಣ ಆಫ್ರಿಕಾ ಬೌಲರ್ಗಳ ದಾಳಿಗೆ ಕಿವೀಸ್ ಆಟಗಾರರು ತತ್ತರಿಸಿ ಪೆವಿಲಿಯನ್ ಪರೇಡ್ ನಡೆಸಿದ್ರೆ, ನಾಯಕ ವಿಲಿಯಮ್ಸನ್ ಮಾತ್ರ ಕ್ರೀಸ್‌ಗೆ ಕಚ್ಚಿ ನಿಂತು ಇನ್ನಿಂಗ್ಸ್ ಕಟ್ಟಿದ್ರು. 80 ರನ್ಗಳಿಗೆ ಪ್ರಮುಖ ನಾಲ್ಕು ವಿಕೆಟ್ ಕಳೆದುಕೊಂಡು ಕಿವೀಸ್ ಸಂಕಷ್ಟದಲ್ಲಿತ್ತು. ಈ ವೇಳೆ ನಾಯಕ ವಿಲಿಯಮ್ಸನ್ ಉತ್ತಮ ಆಟವಾಡುತ್ತಿದ್ದರು. 138 ಎಸೆತಗಳಲ್ಲಿ 9 ಬೌಂಡರಿ ಹಾಗು 1 ಸಿಕ್ಸರ್ ನೆರವಿನಿಂದ 106 ರನ್ಗಳಿಸಿದ ಕೇನ್ ತಂಡದ ಗೆಲುವಿಗೆ ಕಾರಣರಾದ್ರು. ಆದ್ರೆ, ಜಂಟಲ್ಮನ್ಸ್ ಗೇಮ್ನಲ್ಲಿ ಕ್ರೀಡಾ ಸ್ಫೂರ್ತಿ ಮರೆತರು ಎಂದು ಆರೋಪಿಸಿ ವಿಲಿಯಮ್ಸನ್ ವಿರುದ್ಧ ಟ್ವಿಟ್ಟರ್‌ನಲ್ಲಿ ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ.
ಇಮ್ರಾನ್ ತಾಹಿರ್ ಎಸೆದ 38ನೇ ಓವರ್ನ ಕೊನೆಯ ಎಸೆತದಲ್ಲಿ ಚೆಂಡು ವಿಲಿಯಮ್ಸನ್ ಬ್ಯಾಟ್‌ಗೆ ತಾಗಿ ನೇರವಾಗಿ ವಿಕೆಟ್ ಕೀಪರ್ ಕೈ ಸೇರಿತ್ತು. ಈ ವೇಳೆ ತಾಹಿರ್ ವಿಕೆಟ್‌ಗೋಸ್ಕರ ಮನವಿ ಮಾಡಿದರೂ ಅಂಪೇರ್ ಪುರಸ್ಕರಿಸಲಿಲ್ಲ.
ನಾಯಕ ಡೂಪ್ಲೆಸಿ ಕೂಡ ಡಿಆರ್ಎಸ್ ತೀರ್ಪಿಗೆ ಮನವಿ ಮಾಡಲಿಲ್ಲ. ಹೀಗಾಗಿ ವಿಲಿಯಮ್ಸನ್ ಸೇಫ್ ಆದ್ರು. ಇದೇ ಫೋಟೊವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಪಾಲ್ ಆ್ಯಡಮ್ಸ್, ವಿಲಿಯಮ್ಸನ್ ನಿಯತ್ತಿನ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಚೆಂಡು ಬ್ಯಾಟ್‌ಗೆ ತಾಗಿದ್ರೂ ವಿಲಿಯಮ್ಸನ್ ಏಕೆ ಕ್ರೀಸ್ ಬಿಟ್ಟು ಹೊರ ನಡೆಯಲಿಲ್ಲ ಎಂದು ಪ್ರಶ್ನಿಸಿದ್ದಾರೆ.
-
If Kane Williamson was Mankad after he didn’t walk. Would he be upset 👀
— Paul Adams (@PaulAdams39) June 19, 2019 " class="align-text-top noRightClick twitterSection" data="
">If Kane Williamson was Mankad after he didn’t walk. Would he be upset 👀
— Paul Adams (@PaulAdams39) June 19, 2019If Kane Williamson was Mankad after he didn’t walk. Would he be upset 👀
— Paul Adams (@PaulAdams39) June 19, 2019
ಈ ಬಗ್ಗೆ ಪಂದ್ಯ ಮುಗಿದ ಬಳಿಕ ಮಾತನಾಡಿದ ದಕ್ಷಿಣ ಆಫ್ರಿಕಾ ತಂಡದ ನಾಯಕ ಡುಪ್ಲೆಸಿಸ್, ಚೆಂಡು ಬ್ಯಾಟ್‌ಗೆ ತಾಗಿದೆ ಎಂದು ಗೊತ್ತಾಗಲಿಲ್ಲ. ವಿಲಿಯಮ್ಸನ್ ಕೂಡ ಅದನ್ನೇ ಹೇಳಿದ್ರು ಎಂದಿದ್ದಾರೆ.
ನಿನ್ನೆ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಂಲೆಂಡ್ ನಡುವೆ ಪಂದ್ಯ ನಡೆದಿತ್ತು.