ETV Bharat / sports

ಈ ಸಾಲಿನ ಐಪಿಎಲ್‌ ಬಳಿಕ ಆರ್‌ಸಿಬಿ ನಾಯಕ ಸ್ಥಾನದಿಂದಲೂ ಕೆಳಗಿಳಿಯಲಿರುವ ಕೊಹ್ಲಿ

ನಾಯಕತ್ವ ಸ್ಥಾನದಿಂದ ಕೆಳಗಿಳಿಯುವುದನ್ನು ಘೋಷಿಸಿ, ಆರ್​ಸಿಬಿ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ವಿರಾಟ್ ಕೊಹ್ಲಿ.

Virat Kohli
Virat Kohli
author img

By

Published : Sep 19, 2021, 10:59 PM IST

ಬೆಂಗಳೂರು: ಪ್ರಸಕ್ತ ಸಾಲಿನ ಐಪಿಎಲ್ 14ನೇ ಆವೃತ್ತಿಯ ಬಳಿಕ ಆರ್​ಸಿಬಿ ನಾಯಕತ್ವ ಸ್ಥಾನದಿಂದ ಕೆಳಗಿಳಿಯುವುದಾಗಿ ವಿರಾಟ್ ಕೊಹ್ಲಿ ಘೋಷಣೆ ಮಾಡಿದ್ದಾರೆ. ಆದ್ರೆ ಐಪಿಎಲ್ ಆಡುವವರೆಗೂ ನಾನು ಆರ್​ಸಿಬಿಯಲ್ಲೇ ಆಟಗಾರನಾಗಿ ಮುಂದುವರಿಯುವುದಾಗಿ ಅನೌನ್ಸ್ ಮಾಡಿದ್ದಾರೆ.

ಆರ್​ಸಿಬಿ ಟ್ವೀಟ್ ಮಾಡಿ ಇದನ್ನು ಅಧಿಕೃತಗೊಳಿಸಿದೆ. ನಾಯಕತ್ವ ಸ್ಥಾನದಿಂದ ಮಾತ್ರ ಕೆಳಗಿಳಿಯುವೆ, ಆದ್ರೆ ಆರ್​ಸಿಬಿ ಆಟಗಾರನಾಗಿ ಮುಂದುವರಿಯುವೆ ಎಂದು ಕೊಹ್ಲಿ ತಿಳಿಸಿದ್ದಾರೆ.

ದುಬೈನಲ್ಲಿ ಆಯೋಜನೆಗೊಂಡಿರುವ ಐಸಿಸಿ ಟಿ-20 ವಿಶ್ವಕಪ್ ನಂತರ ಟಿ-20 ತಂಡದ ನಾಯಕತ್ವ ಸ್ಥಾನದಿಂದ ಕೆಳಗಿಳಿಯುವುದಾಗಿ ಇತ್ತೀಚೆಗಷ್ಟೇ ಕೊಹ್ಲಿ ಘೋಷಣೆ ಮಾಡಿದ್ದರು. ಆ ಬೆನ್ನಲ್ಲೇ ಇದೀಗ ಮತ್ತೊಂದು ಅಚ್ಚರಿಯ ಘೋಷಣೆ ಮಾಡಿದ್ದಾರೆ.

ಅಕ್ಟೋಬರ್​-ನವೆಂಬರ್ ತಿಂಗಳಲ್ಲಿ ನಡೆಯಲಿರುವ ಟಿ-20 ವಿಶ್ವಕಪ್​ ಮುಕ್ತಾಯಗೊಳ್ತಿದ್ದಂತೆ ಕೊಹ್ಲಿ ಟೆಸ್ಟ್​ ತಂಡಕ್ಕೆ ಮಾತ್ರ ನಾಯಕನಾಗಿರಲಿದ್ದಾರೆ. ರೋಹಿತ್​ ಶರ್ಮಾ ಟಿ-20 ಹಾಗೂ ಏಕದಿನ ಕ್ರಿಕೆಟ್​ನ ಕ್ಯಾಪ್ಟನ್​​ ಆಗಲಿದ್ದಾರೆ ಎಂದು ಕೆಲವು ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.