ETV Bharat / sports

ರನ್​ ಮಷಿನ್​ ಫಿಟ್​ & ಫೈನ್​! ಕೊಹ್ಲಿ ಗಾಯದ ಬಗ್ಗೆ ಚಿಂತೆ ಬೇಡ: ಟೀಂ ಇಂಡಿಯಾ

author img

By

Published : Jun 2, 2019, 6:30 PM IST

ನೆಟ್​ನಲ್ಲಿ ಅಭ್ಯಾಸ ಮಾಡುವ ವೇಳೆ ಕೊಹ್ಲಿ ಹೆಬ್ಬೆರಳಿಗೆ ಗಾಯವಾಗಿದೆ ಎಂಬ ಸುದ್ದಿ ಕೋಟ್ಯಂತರ ಕ್ರಿಕೆಟ್‌ ಅಭಿಮಾನಿಗಳಲ್ಲಿ ಆತಂಕ ಮೂಡಿಸಿತ್ತು. ಇದಕ್ಕೆ ಸ್ಪಷ್ಟ ನೀಡಿರುವ ಟೀಂ ಇಂಡಿಯಾ, Nothing to worry ಎಂದು ಹೇಳಿದೆ.

ವಿರಾಟ್​ ಕೊಹ್ಲಿ

ಸೌತಂಪ್ಟನ್​: ವಿಶ್ವಕಪ್​-2019ಕ್ಕಾಗಿ ನೆಟ್​ನಲ್ಲಿ ಅಭ್ಯಾಸ ಮಾಡುವ ವೇಳೆ ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಕೈಬೆರಳಿಗೆ ಗಾಯವಾಗಿದೆ ಎಂಬ ಸುದ್ದಿ ಕೋಟ್ಯಂತರ ಕ್ರಿಕೆಟ್‌ ಅಭಿಮಾನಿಗಳಲ್ಲಿಆತಂಕ ಮೂಡಿಸಿತ್ತು. ಆದರೆ, ಇದಕ್ಕೆ ಸ್ಪಷ್ಟನೆ ನೀಡಿರುವ ಟೀಂ ಇಂಡಿಯಾ, Nothing to worry ಎಂದು ಹೇಳಿದೆ.

ಹೆಬ್ಬೆರಳಿಗೆ ಗಾಯವಾಗಿರುವುದರಿಂದ ಕೊಹ್ಲಿ ಅಂಗಳಕ್ಕಿಳಿಯುವರೇ? ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಉದ್ಭವಿಸಿತ್ತು.ಇದಕ್ಕೆ ಟೀಂ ಇಂಡಿಯಾ, ಆ ಬಗ್ಗೆ ಚಿಂತಿಸುವುದೇ ಬೇಡ ಎಂದಿದೆ ಎಂದು ಮೂಲಗಳು ತಿಳಿಸಿವೆ. ಈ ಮೂಲಕ ಇದೇ ಶನಿವಾರ ನಡೆಯುವ ವಿಶ್ವಕಪ್​ ಪಂದ್ಯದಲ್ಲಿ ಎಂದಿನಂತೆ ರನ್​ ಕಲೆ ಹಾಕಲು ಕೊಹ್ಲಿ ಫಿಟ್​ ಆಗಿದ್ದಾರೆ ಎಂಬ ಸಂದೇಶ ರವಾನಿಸಿದ್ದಾರೆ.

Virat Kohli
ವಿರಾಟ್​ ಕೊಹ್ಲಿ ಬೆರಳಿಗೆ ಸ್ಪ್ರೇ ಮಾಡುತ್ತಿರುವ ಪೋಟೋ

ಭಾರತದ ಫಿಸಿಯೋಥೆರಪಿಸ್ಟ್​ ಪ್ಯಾಟ್ರಿಕ್ ಫರ್ಹಾಟ್​, ಕೊಹ್ಲಿ ಹೆಬ್ಬೆರಳಿಗೆ ಮ್ಯಾಜಿಕ್​ ಸ್ಪ್ರೇ ಮಾಡುತ್ತಿರುವ ಸಾಕಷ್ಟು ಫೊಟೋಗಳು ಹರಿದಾಡಿದ್ದವು. ನಂತರ ಬೆರಳಿಗೆ ಬ್ಯಾಂಡೇಡ್​ ಸುತ್ತಿಕೊಂಡ ಕೊಹ್ಲಿ,ಅಭ್ಯಾಸ ಮಾಡದೆ ಐಸ್​ಪ್ಯಾಕ್​ನಿಂದ ಬೆರಳನ್ನು ಒತ್ತಿಹಿಡಿದು ಮೈದಾನದಿಂದ ಹೊರನಡೆದರು ಎಂದು ಹೇಳಲಾಗಿತ್ತು. ಈ ಸುದ್ದಿ ಕೊಹ್ಲಿ ಅಭಿಮಾನಿಗಳಲ್ಲಿ ಬೇಸರ ಉಂಟುಮಾಡಿತ್ತು.

Intro:Body:

 Virat Kohli

Conclusion:

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.