ಇಸ್ಲಾಮಾಬಾದ್(ಪಾಕಿಸ್ತಾನ): ಅಕ್ಟೋಬರ್ 17ರಿಂದ ಬಹುನಿರೀಕ್ಷಿತ ಐಸಿಸಿ ಟಿ - 20 ವಿಶ್ವಕಪ್ ಟೂರ್ನಾಮೆಂಟ್ ಆರಂಭಗೊಳ್ಳುತ್ತಿದ್ದು, ಅದಕ್ಕಾಗಿ ಎಲ್ಲ ಕ್ರಿಕೆಟ್ ತಂಡಗಳು ಸಜ್ಜಾಗಿವೆ. ಇದರ ಬೆನ್ನಲ್ಲೇ ಪಾಕ್ ಜೆರ್ಸಿ ವಿಚಾರವಾಗಿ ಅನೇಕ ಆಕ್ರೋಶ, ಟ್ರೋಲ್ ಕೇಳಿ ಬಂದಿದ್ದವು. ಆದರೆ, ಇದೀಗ ಈ ವಿವಾದ ಸುಖ್ಯಾಂತ ಕಂಡಿದೆ.
-
THE BIG REVEAL IS HERE!
— Pakistan Cricket (@TheRealPCB) October 15, 2021 " class="align-text-top noRightClick twitterSection" data="
PRESENTING TEAM PAKISTAN’S OFFICIAL JERSEY FOR THE #T20WorldCup !
GET YOURS NOW FROM https://t.co/12NS1mHqqi#WearYourPassion x #WhyNotMeriJaan pic.twitter.com/6St08OGVbJ
">THE BIG REVEAL IS HERE!
— Pakistan Cricket (@TheRealPCB) October 15, 2021
PRESENTING TEAM PAKISTAN’S OFFICIAL JERSEY FOR THE #T20WorldCup !
GET YOURS NOW FROM https://t.co/12NS1mHqqi#WearYourPassion x #WhyNotMeriJaan pic.twitter.com/6St08OGVbJTHE BIG REVEAL IS HERE!
— Pakistan Cricket (@TheRealPCB) October 15, 2021
PRESENTING TEAM PAKISTAN’S OFFICIAL JERSEY FOR THE #T20WorldCup !
GET YOURS NOW FROM https://t.co/12NS1mHqqi#WearYourPassion x #WhyNotMeriJaan pic.twitter.com/6St08OGVbJ
ಐಸಿಸಿ ಟಿ-20 ವಿಶ್ವಕಪ್ ಭಾರತದಲ್ಲಿ ಆಯೋಜನೆಗೊಳ್ಳಬೇಕಾಗಿತ್ತು. ಆದರೆ, ಕೋವಿಡ್ನಿಂದಾಗಿ ದುಬೈನಲ್ಲಿ ಆಯೋಜನೆಯಾಗಿದ್ದು, ಇದರ ಆತಿಥ್ಯ ಮಾತ್ರ ಭಾರತದ್ದಾಗಿದೆ. ಹೀಗಾಗಿ ಟೂರ್ನಿಯಲ್ಲಿ ಭಾಗಿಯಾಗುತ್ತಿರುವ ಎಲ್ಲ ತಂಡಗಳು ತಮ್ಮ ಜೆರ್ಸಿ ಮೇಲೆ 'ICC'Men's T20 World Cup India '2021' ಎಂದು ಬರೆದುಕೊಳ್ಳಬೇಕು.
ಆದರೆ, ಪಾಕಿಸ್ತಾನ ಮಾತ್ರ ತಮ್ಮ ಜರ್ಸಿ ಮೇಲೆ 'T20 World Cup UAE 2021' ಎಂದು ಬರೆಯಿಸಿಕೊಂಡಿದೆ ಎನ್ನಲಾಗಿತ್ತು. ಇದರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದರಿಂದ ಸಿಕ್ಕಾಪಟ್ಟೆ ಆಕ್ರೋಶ ಕೂಡಾ ವ್ಯಕ್ತವಾಗಿತ್ತು.
ಇದನ್ನೂ ಓದಿರಿ: ಜರ್ಸಿಯಲ್ಲಿ 'India 2021' ಬದಲು 'T20 World Cup UAE 2021'.. ಪಾಕ್ ನರಿಬುದ್ಧಿಗೆ ಆಕ್ರೋಶ!
ಪಾಕ್ನಿಂದ ಇಂದು ಅಧಿಕೃತವಾಗಿ ಜೆರ್ಸಿ ಅನಾವರಣ
ವಿಶ್ವಕಪ್ ಟೂರ್ನಿಗಾಗಿ ಪಾಕಿಸ್ತಾನದಿಂದ ಇಂದು ಜೆರ್ಸಿ ಅನಾವರಣಗೊಂಡಿದ್ದು, ಅದರ ಮೇಲೆ ಇಂಡಿಯಾ 2021 ಎಂದು ಉಲ್ಲೇಖ ಮಾಡಲಾಗಿದೆ. ಇದರ ವಿಡಿಯೋ ಕೂಡ ಇದೀಗ ಪಿಸಿಬಿ ಅಧಿಕೃತ ಟ್ವಿಟರ್ನಲ್ಲಿ ಅನಾವರಣಗೊಂಡಿದ್ದರಿಂದ ವಿವಾದ ಸುಖ್ಯಾಂತ ಕಂಡಿದೆ.
-
Set to go against @KNCBcricket at the @ICC Academy Grounds in Dubai. #T20WorldCup pic.twitter.com/mdQzCRb9yJ
— BLACKCAPS (@BLACKCAPS) October 16, 2021 " class="align-text-top noRightClick twitterSection" data="
">Set to go against @KNCBcricket at the @ICC Academy Grounds in Dubai. #T20WorldCup pic.twitter.com/mdQzCRb9yJ
— BLACKCAPS (@BLACKCAPS) October 16, 2021Set to go against @KNCBcricket at the @ICC Academy Grounds in Dubai. #T20WorldCup pic.twitter.com/mdQzCRb9yJ
— BLACKCAPS (@BLACKCAPS) October 16, 2021
ಟಿ-20 ವಿಶ್ವಕಪ್ನಲ್ಲಿ ಟೀಂ ಇಂಡಿಯಾ ಅಕ್ಟೋಬರ್ 24ರಂದು ಸಾಂಪ್ರದಾಯಿಕ ಎದುರಾಳಿ ಪಾಕ್ ವಿರುದ್ಧ ಮೊದಲ ಪಂದ್ಯವನ್ನಾಡುವ ಮೂಲಕ ತನ್ನ ಅಭಿಯಾನ ಆರಂಭ ಮಾಡಲಿದೆ. ಐಸಿಸಿ ಟಿ-20 ವಿಶ್ವಕಪ್ಗಾಗಿ ಭಾರತ ಸೇರಿದಂತೆ ಅನೇಕ ದೇಶಗಳು ಈಗಾಗಲೇ ಜೆರ್ಸಿ ಅನಾವರಣ ಮಾಡಿದ್ದು, ನ್ಯೂಜಿಲ್ಯಾಂಡ್ ಕೂಡ ಇಂದು ತಮ್ಮ ನೂತನ ಸಮವಸ್ತ್ರ ರಿಲೀಸ್ ಮಾಡಿದೆ.