ETV Bharat / sports

ಆಸೀಸ್ ಬಗ್ಗುಬಡಿದ ಹರಿಣಗಳು... ಸೆಮೀಸ್​ನಲ್ಲಿ ಭಾರತ-ನ್ಯೂಜಿಲೆಂಡ್ ಮುಖಾಮುಖಿ - undefined

ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ದಕ್ಷಿಣ ಆಫ್ರಿಕಾ ತಂಡ 10 ರನ್​ಗಳ ಜಯ ಗಳಿಸುವ ಮೂಲಕ ವಿಶ್ವಕಪ್​ಗೆ ವಿದಾಯ ಹೇಳಿದೆ. ಸೆಮಿಫೈನಲ್​ನಲ್ಲಿ ಭಾರತ-ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ-ಇಂಗ್ಲೆಂಡ್​ ಮುಖಾಮುಖಿಯಾಗಲಿವೆ.

ಕೊನೆ ಪಂದ್ಯದಲ್ಲಿ ಬೀಗಿದ ದಕ್ಷಿಣ ಆಫ್ರಿಕಾ ತಂಡ
author img

By

Published : Jul 7, 2019, 3:58 AM IST

Updated : Jul 7, 2019, 6:22 AM IST

ಲಂಡನ್: ವಿಶ್ವಕಪ್​ನ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡದ ವಿರುದ್ಧ 10 ರನ್​ಗಳಿಂದ ದಕ್ಷಿಣ ಆಫ್ರಿಕಾ ಜಯಿಸಿದೆ. ಈ ಮೂಲಕ ಗೆಲುವಿನೊಂದಿಗೆ ವಿಶ್ವಕಪ್​ ಟೂರ್ನಿಯಿಂದ ಹೊರ ನಡೆದಿದೆ.

lonf
ಕೊನೆ ಪಂದ್ಯದಲ್ಲಿ ಬೀಗಿದ ದಕ್ಷಿಣ ಆಫ್ರಿಕಾ ತಂಡ

ಇನ್ನು ಆಸ್ಟ್ರೇಲಿಯಾ ಸೋಲುವ ಮೂಲಕ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಇಳಿದಿದ್ದು, ಭಾರತ ಅಗ್ರ ಸ್ಥಾನಕ್ಕೇರಿದೆ. ಪರಿಣಾಮ ಸೆಮೀಫೈನಲ್​ನಲ್ಲಿ ಭಾರತ-ನ್ಯೂಜಿಲೆಂಡ್​ ಹಾಗೂ ಆಸ್ಟ್ರೇಲಿಯಾ-ಇಂಗ್ಲೆಂಡ್​ ಸೆಣಸಾಡಲಿವೆ.

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ದಕ್ಷಿಣ ಆಫ್ರಿಕಾ 50 ಒವರ್​ಗಳಲ್ಲಿ ಡು ಪ್ಲೆಸಿಸ್​ (100 ರನ್​, 94 ಎಸೆತ) ಶತಕದ ನೆರವಿನಿಂದ 325 ರನ್​ಗಳ ಬೃಹತ್ ಮೊತ್ತವನ್ನು ಪೇರಿಸಿತ್ತು.

ಡುಸೇನ್​ (95 ರನ್, 97 ಎಸೆತ), ಕ್ವಿಂಟನ್​ ಡೆ ಕಾಕ್ (52 ರನ್​, 51 ಎಸೆತ) ಅವರ ಅರ್ಧ ಶತಕದ ನೆರವಿನಿಂದ ಹರಿಣಗಳು ಸವಾಲಿನ ಮೊತ್ತ ಕಲೆ ಹಾಕಿದ್ದರು.

ಬಳಿಕ ಗರಿಷ್ಠ ರನ್​ಗಳ ಬೆನ್ನತ್ತಿದ ಆಸ್ಟ್ರೇಲಿಯಾ ಆರಂಭದಲ್ಲಿಯೇ ಆಘಾತ ಅನುಭವಿಸಬೇಕಾಯಿತು. ಸ್ಫೋಟಕ ಆಟಗಾರ ಅರೋನ್​ ಫಿಂಚ್​ 3 ರನ್​ ಗಳಿಸಿ ಪೆವಿಲಿಯನ್​ ಹಾದಿ ಹಿಡಿದರು. ಇದರ ಬೆನ್ನಲ್ಲೇ ಉಸ್ಮಾನ್ ಖಾವಾಜ್ (18) ರನ್ ಗಳಿಸಿದ್ದಾಗ ಗಾಯಗದಿಂದ ನಿವೃತ್ತರಾದರು. ಇನ್ನು ಸ್ಟೀವ್​ ಸ್ಮಿತ್​ 6 ರನ್​ ಗಳಿಸಿ ವಿಕೆಟ್ ಒಪ್ಪಿಸಿದರು.

ಇತ್ತ ಡೆವಿಡ್​ ವಾರ್ನರ್​ (122 ರನ್​, 117 ಎಸೆತ) ಕ್ರೀಸ್​ನಲ್ಲಿ ನೆಲೆ ನಿಂತು ತಂಡದ ಮೊತ್ತ ಹೆಚ್ಚಿಸುತ್ತಿದ್ದರು. ಇವರ ಜೊತೆ ಅಲೆಕ್ಸ್​ ಕ್ಯಾರಿ (85 ರನ್​, 69 ಎಸೆತ) ಸಿಡಿಸಿ ತಂಡಕ್ಕೆ ನೆರವಾದರು. ಆದ್ರೂ ಕೂಡ ಗೆಲ್ಲಲು ಸಾಧ್ಯವಾಗದೇ 315 ರನ್​ಗಳಿಗೆ ಆಲ್ಔಟ್​ ಆಗುವ ಮೂಲಕ 10 ರನ್​ಗಳಿಂದ ಸೋಲನುಭವಿಸಿತು.

Intro:Body:Conclusion:
Last Updated : Jul 7, 2019, 6:22 AM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.