ETV Bharat / sports

ಧೋನಿ ಬ್ಯಾಟಿಂಗ್​ ಬಗ್ಗೆ ಟೀಕೆ... ಬ್ಯಾಟಿಂಗ್​​ ಕೋಚ್​ ಬಂಗಾರ್​ ಏನಂದ್ರು? - undefined

ಧೋನಿ ಯಾವಾಗಲೂ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತ ಬಂದಿದ್ದಾರೆ. 7 ರಲ್ಲಿ 5 ಇನ್ನಿಂಗ್ಸ್​ಗಳಲ್ಲಿ ಧೋನಿ ಆಟ ತಂಡಕ್ಕೆ ವರದಾನವಾಗಿದೆ. ಆದರೆ ಅವರ ಬ್ಯಾಟಿಂಗ್ ಸಾಮರ್ಥ್ಯದ​ ಬಗ್ಗೆ ಯಾವಾಗಲೂ ಪ್ರಶ್ನೆ ಮೂಡುವುದು ನನಗೆ ಆಶ್ಚರ್ಯ ಮೂಡಿಸುತ್ತದೆ ಎಂದು ಟೀಂ ಇಂಡಿಯಾ ಬ್ಯಾಟಿಂಗ್​ ಕೋಚ್​ ಸಂಜಯ್​ ಬಂಗಾರ್ ಹೇಳಿದ್ದಾರೆ.

ಧೋನಿ
author img

By

Published : Jul 1, 2019, 8:00 PM IST

ಲಂಡನ್​: ಭಾರತ ತಂಡವು ಆಂಗ್ಲರ ವಿರುದ್ಧ ಗೆಲುವಿಗೆ ಹೆಚ್ಚಿನ ಪ್ರಯತ್ನ ನಡೆಸಲಿಲ್ಲ ಎಂಬ ಆರೋಪ ಸರಿಯಲ್ಲ. ಆದರೆ, ಇಂಗ್ಲೆಂಡ್​ ಬೌಲರ್​ಗಳು ಪಂದ್ಯದ ಸಂದರ್ಭವನ್ನು ಅರಿತು ಬೌಲಿಂಗ್​ ಮಾಡಿದರು. ಹೀಗಾಗಿ ರನ್​ ಚೇಸ್​​ ಮಾಡುವುದು ಸುಲಭವಾಗಿರಲಿಲ್ಲ ಎಂದು ಟೀಂ ಇಂಡಿಯಾ ಬ್ಯಾಟಿಂಗ್ ಕೋಚ್ ಸಂಜಯ್​ ಬಂಗಾರ್​ ಸೋಲಿನ ಬಗ್ಗೆ​ ಸಮರ್ಥನೆ ನೀಡಿದ್ದಾರೆ.

ದೊಡ್ಡ ಬೌಂಡರಿ ಹೊಂದಿರುವ ಮೈದಾನದಲ್ಲಿ, ಇಂಗ್ಲೆಂಡ್​ನಂತಹ ಬೌಲಿಂಗ್ ಎದುರಿಸುವುದು ಸುಲಭವಲ್ಲ. ಆಂಗ್ಲರು ಮಾಡಿದ ನಿಧಾನಗತಿಯ ಬೌನ್ಸರ್​ಗಳು ವಿಕೆಟ್​ ಕಬಳಿಸುವ ಅಸ್ತ್ರಗಳಾಗಿವೆ. ಅಲ್ಲದೆ ಕೊನೆಯ ಓವರ್​ಗಳಲ್ಲಿ ಬೇಕಾದ ರನ್​ ರೇಟ್​ ಕೂಡ ಗಳಿಸುವ ಮಟ್ಟದಲ್ಲಿರಲಿಲ್ಲ. ದೊಡ್ಡ ಹೊಡೆತಗಳಿಗೆ ಕೈಹಾಕಿದ್ದರೂ ಕೂಡ ಕೇವಲ ಸೋಲಿನ ಅಂತರ ತಗ್ಗಿಸಬಹುದಿತ್ತು. ಅಲ್ಲದೆ ರನ್​ ಸರಾಸರಿಗೆ ಸಹಾಯವಾಗುತ್ತಿತ್ತು ಎಂದು ಹೇಳಿದ್ದಾರೆ.

ಇನ್ನು ಧೋನಿ ಬ್ಯಾಟಿಂಗ್​ ಬಗ್ಗೆ ಪ್ರತಿಕ್ರಿಯಿಸಿರುವ ಬಂಗಾರ್​, ಅದು ಕೇವಲ ಒಂದು ಕೆಟ್ಟ ಇನ್ನಿಂಗ್ಸ್​ ಅಷ್ಟೇ. ಧೋನಿ ಯಾವಾಗಲೂ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತ ಬಂದಿದ್ದಾರೆ. 7 ರಲ್ಲಿ 5 ಇನ್ನಿಂಗ್ಸ್​ಗಳಲ್ಲಿ ಧೋನಿ ಆಟ ತಂಡಕ್ಕೆ ವರದಾನವಾಗಿದೆ. ಆದರೆ ಅವರ ಬ್ಯಾಟಿಂಗ್ ಸಾಮರ್ಥ್ಯದ​ ಬಗ್ಗೆ ಯಾವಾಗಲೂ ಪ್ರಶ್ನೆ ಮೂಡುವುದು ನನಗೆ ಅಚ್ಚರಿ ಮೂಡಿಸುತ್ತದೆ. ಅವರ ಬ್ಯಾಟಿಂಗ್, ಅವರ ಉದ್ದೇಶದ​ ಬಗ್ಗೆ ನಮಗೆ ಸಂತಸವಿದೆ ಎಂದು ಎಂಎಸ್​ಡಿ ಪರ ಬ್ಯಾಟ್​ ಬೀಸಿದ್ದಾರೆ.

ತಂಡಕ್ಕೆ ಅಗತ್ಯವಿರುವ ಸಂದರ್ಭಗಳಲ್ಲೆಲ್ಲ ಹಾರ್ದಿಕ್​ ಪಾಂಡ್ಯರ ಬ್ಯಾಟಿಂಗ್​ ಕ್ರಮಾಂಕವನ್ನು ಬದಲಾವಣೆ ಮಾಡಲಾಗುತ್ತೆ. ಪಾಂಡ್ಯ 33-34ನೇ ಓವರ್​ ವೇಳೆ ಮೈದಾನಕ್ಕಿಳಿದರೆ ತಂಡದ ಸ್ಕೋರ್​ ದೃಷ್ಟಿಯಿಂದ ಅನುಕೂಲವಾಗುತ್ತದೆ. ಅಬ್ಬರದ ಬ್ಯಾಟಿಂಗ್​ನಿಂದ ಹಾರ್ದಿಕ್​ ಈ ವಿಶ್ವಕಪ್​ನಲ್ಲಿ ತಂಡದ ಬೃಹತ್​ ಮೊತ್ತಕ್ಕೆ ಕೊಡುಗೆ ನೀಡಿದ್ದು, ಅದನ್ನು ಮುಂದುರಿಸಲಿದ್ದಾರೆ ಎಂದು ಬಂಗಾರ್​ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Intro:Body:

bangar

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.