ಇಂಗ್ಲೆಂಡ್: ಇಲ್ಲಿನ ಬ್ರಿಸ್ಟಲ್ನಲ್ಲಿ ನಡೆಯಬೇಕಿದ್ದ ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವಿನ ವಿಶ್ವಕಪ್ ಪಂದ್ಯವನ್ನ ಮಳೆಯ ಕಾರಣದಿಂದ ರದ್ದು ಮಾಡಲಾಗಿದೆ.
-
Disappointing news from Bristol. #PAKvSL has been abandoned – both sides have been awarded a point. #WeHaveWeWill #LionsRoar #CWC19 pic.twitter.com/VyZlS6RVGx
— Cricket World Cup (@cricketworldcup) June 7, 2019 " class="align-text-top noRightClick twitterSection" data="
">Disappointing news from Bristol. #PAKvSL has been abandoned – both sides have been awarded a point. #WeHaveWeWill #LionsRoar #CWC19 pic.twitter.com/VyZlS6RVGx
— Cricket World Cup (@cricketworldcup) June 7, 2019Disappointing news from Bristol. #PAKvSL has been abandoned – both sides have been awarded a point. #WeHaveWeWill #LionsRoar #CWC19 pic.twitter.com/VyZlS6RVGx
— Cricket World Cup (@cricketworldcup) June 7, 2019
ಇಂದು ಮುಂಜಾನೆಯಿಂದ ಬ್ರಿಸ್ಟಲ್ನಲ್ಲಿ ಮಳೆ ಸುರಿಯುತ್ತಿತ್ತು. ಹೀಗಾಗಿ ಮಳೆ ನಿಂತ ಮೇಲೆ ಪಂದ್ಯ ಪ್ರಾರಂಭ ಮಾಡೋದಾಗಿ ಐಸಿಸಿ ಹೇಳಿತ್ತು. ಜೋರು ಮಳೆಯಲ್ಲದಿದ್ದರೂ ಸಂಜೆಯವರೆಗೆ ಎಡೆಬಿಡದೆ ಸುರಿದ ತುಂತುರು ಮಳೆಯಿಂದ ಪಿಚ್ ಸಾಕಷ್ಟು ಒದ್ದೆಯಾಗಿದೆ. ಹೀಗಾಗಿ ಪಂದ್ಯವನ್ನ ರದ್ದು ಮಾಡಲಾಗಿದೆ.
ಉಭಯ ತಂಡಗಳಿಗೂ ಒಂದೊಂದು ಅಂಕ ನೀಡಲಾಗಿದೆ. ಎರಡೂ ತಂಡಗಳು ಈ ಹಿಂದೆ ಒಂದು ಪಂದ್ಯವನ್ನು ಗೆದ್ದು, ಒಂದು ಪಂದ್ಯದಲ್ಲಿ ಸೋಲು ಕಂಡಿದ್ದವು. ಇಂದು ಒಂದು ಅಂಕ ಪಡೆದ ಶ್ರೀಲಂಕಾ ಮತ್ತು ಪಾಕಿಸ್ತಾನ ತಂಡ ಮೂರು ಅಂಕಗಳೊಂದಿಗೆ ಕ್ರಮವಾಗಿ ಪಾಯಿಂಟ್ ಪಟ್ಟಿಯಲ್ಲಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿವೆ.