ETV Bharat / sports

ಪಂದ್ಯ ಸೋತಾಗ ಕೊಹ್ಲಿ ತೋರಿಸಿದ ನಡವಳಿಕೆ ಪುಟಿದೇಳುವ ವಿಶ್ವಾಸ ತೋರಿಸುತ್ತದೆ: ಸನಾ ಮೀರ್ - pakistan former skipper sana mir

ಪಾಕಿಸ್ತಾನ ಮಹಿಳಾ ಕ್ರಿಕೆಟ್‌ ತಂಡದ ಮಾಜಿ ನಾಯಕಿ ಸನಾ ಮೀರ್ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕುರಿತು ಐಸಿಸಿಯ ಅಧಿಕೃತ ವೆಬ್​ಸೈಟ್​​ನಲ್ಲಿ ಬರೆದಿರುವ ಅಂಕಣದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Kohli handled defeat with so much grace, shows he is secure person: Former Pak captain Sana Mir
ಸೋತಾಗ ವಿರಾಟ್ ಕೊಹ್ಲಿ ಅತ್ಯುತ್ತಮ ನಡವಳಿಕೆ ಪ್ರದರ್ಶಿಸಿದ್ದಾರೆ: ಪಾಕ್​​ ಮಹಿಳಾ ತಂಡದ ಮಾಜಿ ಕ್ಯಾಪ್ಟನ್
author img

By

Published : Oct 26, 2021, 12:49 PM IST

ದುಬೈ: ಐಸಿಸಿ ಟಿ20 ವಿಶ್ವಕಪ್ ಪಂದ್ಯದಲ್ಲಿ ಪಾಕ್ ತಂಡದ ವಿರುದ್ಧ ಸೋತ ನಂತರ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅತ್ಯುತ್ತಮ ನಡವಳಿಕೆಯನ್ನು ಪ್ರದರ್ಶಿಸಿದ್ದಾರೆ ಎಂದು ಪಾಕಿಸ್ತಾನ ಮಹಿಳಾ ಕ್ರಿಕೆಟ್‌ ತಂಡದ ಮಾಜಿ ನಾಯಕಿ ಸನಾ ಮೀರ್ ಗುಣಗಾನ ಮಾಡಿದ್ದಾರೆ.

ಐಸಿಸಿಯ ಅಧಿಕೃತ ವೆಬ್​ಸೈಟ್​ನಲ್ಲಿ ಅಂಕಣ ಬರೆದಿರುವ ಅವರು, ವಿರಾಟ್ ಕೊಹ್ಲಿ ಅವರ ಕ್ರೀಡಾಸ್ಫೂರ್ತಿಯನ್ನು ನಾನು ಮೆಚ್ಚುತ್ತೇನೆ. ಇಂತಹ ನಡವಳಿಕೆಯನ್ನು ಮೇಲ್ಪಟ್ಟದ ಕ್ರೀಡಾಪಟುಗಳಲ್ಲಿ ಕಾಣುವುದು ಅತ್ಯಂತ ಒಳ್ಳೆಯದು ಎಂದು ಸನಾ ಉಲ್ಲೇಖಿಸಿದ್ದಾರೆ.

ವಿರಾಟ್ ಕೊಹ್ಲಿ ನಡವಳಿಕೆ ಅವರಲ್ಲಿ ಇನ್ನೂ ಹೆಚ್ಚಿನ ವಿಶ್ವಾಸವಿದೆ ಎಂಬುದನ್ನು ಸೂಚಿಸುತ್ತದೆ. ಅವರಲ್ಲಿ ಪುಟಿದೇಳುವ ಸಾಮರ್ಥ್ಯವಿದೆ ಎಂದು ಈ ನಡವಳಿಕೆ ಸೂಚಿಸುತ್ತದೆ. ಟೀಂ ಇಂಡಿಯಾ ಆದಷ್ಟೂ ಬೇಗ ಪುಟಿದೆದ್ದು, ಎಲ್ಲಾ ಪಂದ್ಯಗಳಲ್ಲೂ ಗೆದ್ದರೂ ಅಚ್ಚರಿಯೇನಿಲ್ಲ ಎಂದಿದ್ದಾರೆ.

ಪಾಕಿಸ್ತಾನ ಮತ್ತು ಟೀಂ ಇಂಡಿಯಾ ಪದೇ ಪದೇ ಇಂತಹ ಪಂದ್ಯಗಳನ್ನು ಆಡುತ್ತಿರಬೇಕು ಎಂದು ಆಶಯ ವ್ಯಕ್ತಪಡಿಸಿದ ಅವರು, ಪಾಕಿಸ್ತಾನ ಆಟಗಾರರ ಆಟಕ್ಕೂ ಕೂಡಾ ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಜಮ್ಮುಕಾಶ್ಮೀರದ ಸಂಬಾಲ್​ನಲ್ಲಿ ಭದ್ರತಾ ಪಡೆ ಗುರಿಯಾಗಿಸಿ ಗ್ರೆನೇಡ್​ ದಾಳಿ, ಹಲವರಿಗೆ ಗಾಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.