ನವದೆಹಲಿ: ನಿನ್ನೆ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ವಿಶ್ವಕಪ್ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲಲು ಕೇಸರಿ ಜರ್ಸಿ ಕಾರಣ ಎಂದು ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಹೇಳಿದ್ದಾರೆ.
-
Call me superstitious but I’d say it’s the jersey that ended India’s winning streak in the #ICCWorldCup2019.
— Mehbooba Mufti (@MehboobaMufti) June 30, 2019 " class="align-text-top noRightClick twitterSection" data="
">Call me superstitious but I’d say it’s the jersey that ended India’s winning streak in the #ICCWorldCup2019.
— Mehbooba Mufti (@MehboobaMufti) June 30, 2019Call me superstitious but I’d say it’s the jersey that ended India’s winning streak in the #ICCWorldCup2019.
— Mehbooba Mufti (@MehboobaMufti) June 30, 2019
ವಿಶ್ವಕಪ್ ಪಂದ್ಯ ಮುಗಿದ ಬಳಿಕ ಟ್ವೀಟ್ ಮಾಡಿರುವ ಮೆಹಬೂಬ ಮುಫ್ತಿ ‘ನೀವು ಮೂಢನಂಬಿಕೆ ಎಂದರೂ ಪರವಾಗಿಲ್ಲ, ಹೊಸ ಜರ್ಸಿ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಗೆಲುವಿನ ಅಭಿಯಾನವನ್ನ ನಿಲ್ಲಿಸಿದೆ’ ಎಂದು ಟ್ವೀಟ್ ಮಾಡಿದ್ದಾರೆ.
ವಿಶ್ವಕಪ್ನಲ್ಲಿ ಇಲ್ಲಿಯವರೆಗೆ ಬ್ಲೂ ಜರ್ಸಿ ತೊಟ್ಟು ಕಣಕ್ಕಿಳಿದಿದ್ದ ಟೀಂ ಇಂಡಿಯಾ, ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಕೇಸರಿ ಬಣ್ಣದ ಜರ್ಸಿ ತೊಟ್ಟು ಮೈದಾನಕ್ಕಿಳಿದಿತ್ತು.
ಇಂಗ್ಲೆಂಡ್ ಮತ್ತು ಭಾರತ ತಂಡದ ಜರ್ಸಿಗಳು ಒಂದೇ ಬಣ್ಣದಲ್ಲಿದ್ದು, ಉಭಯ ತಂಡಗಳು ಮುಖಾಮುಖಿಯಾದಾಗ ನೋಡುಗರಿಗೆ ಗೊಂದಲ ಉಂಟಾಗಬಾರದು ಎಂಬ ಕಾರಣಕ್ಕೆ ಜರ್ಸಿ ಬದಲಾವಣೆ ಮಾಡಲಾಗಿತ್ತು. ಆದರೆ, ಕೇಸರಿ ಬಣ್ಣದ ಜರ್ಸಿ ಹಿಂದೆ ನರೇಂದ್ರ ಮೋದಿ ಕೈವಾಡವಿದೆ. ಎಲ್ಲವನ್ನ ಕೇಸರಿಮಯವಾಗಿ ಪರಿವರ್ತಿಸಲು ಮೋದಿ ಪ್ರಯತ್ನಿಸುತ್ತಿದ್ದಾರೆ ಎಂದು ವಿರೋಧ ಪಕ್ಷಗಳು ಆರೋಪಿಸಿದ್ದವು.