ಬರ್ಮಿಂಗ್ಹ್ಯಾಮ್: ವಿಶ್ವಕಪ್ನಲ್ಲಿ ಇಂದು ಬಲಿಷ್ಠ ತಂಡಗಳು ಮುಖಾಮುಖಿಯಾಗುತ್ತಿದ್ದು, ಹೈವೋಲ್ಟೇಜ್ ಮ್ಯಾಚ್ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಸೆಮಿಫೈನಲ್ ತಲುಪಲು ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿರುವ ಇಂಗ್ಲೆಂಡ್ ಸೋಲೇ ಇಲ್ಲದ ಭಾರತ ತಂಡವನ್ನು ಎದುರುಗೊಳ್ಳುತ್ತಿದೆ.
-
Ready?#TeamIndia | #CWC19 pic.twitter.com/aDryU6KSgo
— Cricket World Cup (@cricketworldcup) June 30, 2019 " class="align-text-top noRightClick twitterSection" data="
">Ready?#TeamIndia | #CWC19 pic.twitter.com/aDryU6KSgo
— Cricket World Cup (@cricketworldcup) June 30, 2019Ready?#TeamIndia | #CWC19 pic.twitter.com/aDryU6KSgo
— Cricket World Cup (@cricketworldcup) June 30, 2019
ವಿಶ್ವಕಪ್ ಟೂರ್ನಿ ಸದ್ಯ ಬಹುಮುಖ್ಯ ಘಟ್ಟ ತಲುಪಿದ್ದು, ಸೆಮಿಫೈನಲ್ ಬಗ್ಗೆ ಲೆಕ್ಕಾಚಾರಗಳು ಶುರುವಾಗಿವೆ. ಈ ನಿಟ್ಟಿನಲ್ಲಿ ಆಸ್ಟ್ರೇಲಿಯಾ ಮತ್ತು ಭಾರತ ತಂಡಗಳು ಸೆಮೀಸ್ ರೇಸ್ನಲ್ಲಿ ಮುಂಚೂಣಿಯಲ್ಲಿದ್ದು, ಇಂಗ್ಲೆಂಡ್, ನ್ಯೂಜಿಲೆಂಡ್, ಪಾಕಿಸ್ತಾನ, ಬಾಂಗ್ಲಾದೇಶ, ಮತ್ತು ಶ್ರೀಲಂಕಾ ತಂಡಗಳು ನಾಲ್ಕರ ಘಟ್ಟ ತಲುಪಲು ಹವಣಿಸುತ್ತಿವೆ. ಇನ್ನು ಅಗ್ರ ಶ್ರೇಯಾಂಕದೊಂದಿಗೆ ಟೂರ್ನಿ ಆರಂಭಿಸಿ ಆರಂಭದಲ್ಲಿ ಅಬ್ಬರಿಸಿದ್ದ ಇಂಗ್ಲೆಂಡ್ ನಂತರ ಶ್ರೀಲಂಕಾ, ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ವಿರುದ್ಧ ಸೋತು ಸೆಮೀಸ್ ರೇಸ್ನಲ್ಲಿ ಹಿಂದೆ ಬಿದ್ದಿದೆ.
-
👍 #WeAreEngland | #CWC19 pic.twitter.com/JV08gOITnp
— Cricket World Cup (@cricketworldcup) June 30, 2019 " class="align-text-top noRightClick twitterSection" data="
">👍 #WeAreEngland | #CWC19 pic.twitter.com/JV08gOITnp
— Cricket World Cup (@cricketworldcup) June 30, 2019👍 #WeAreEngland | #CWC19 pic.twitter.com/JV08gOITnp
— Cricket World Cup (@cricketworldcup) June 30, 2019
ಸದ್ಯ ಇಂಗ್ಲೆಂಡ್ ಸೆಮಿಫೈನಲ್ ತಲುಪಲು ಇಂದು ಭಾರತ ವಿರುದ್ಧ ನಡೆಯುವ ಪಂದ್ಯ ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಮತ್ತೊಂದು ಕಡೆ ಗೆಲುವಿನ ಓಟ ಮುಂದುವರೆಸಲು ನಿರ್ಧರಿಸಿರುವ ಭಾರತ ತಂಡ ಸೆಮಿಫೈನಲ್ ತಲುಪುವ ತವಕದಲ್ಲಿದೆ.
ವಿಶ್ವಕಪ್ನಲ್ಲಿ ಇಬ್ಬರದ್ದೂ ಸಮಬಲ:
ವಿಶ್ವಕಪ್ನಲ್ಲಿ ಭಾರತ ಇಂಗ್ಲೆಂಡ್ ಇದುವರೆಗೂ 7 ಬಾರಿ ಮುಖಾಮುಖಿಯಾಗಿದ್ದು, 3 ಬಾರಿ ಇಂಗ್ಲೆಂಡ್ ಮತ್ತು 3 ಬಾರಿ ಭಾರತ ಜಯಸಾಧಿಸಿವೆ. ಮತ್ತೊಂದು ಪಂದ್ಯ ಟೈ ಮಾಡಿಕೊಳ್ಳುವ ಮೂಲಕ ಸಮಬಲ ಸಾಧಿಸಿವೆ.
ಸದ್ಯ ಟೂರ್ನಿಯಲ್ಲಿ ಇಂಗ್ಲೆಂಡ್ ಬ್ಯಾಟಿಂಗ್ ಬಲ ಉತ್ತಮವಾಗಿದ್ದರೂ ಕೂಡ ಬೌಲಿಂಗ್ನಲ್ಲಿ ಇಂಗ್ಲೆಂಡ್ ಪದೇ ಪದೇ ಎಡವುತ್ತಿದೆ. ಆದರೆ ಭಾರತ ತಂಡದಲ್ಲಿ ಬೌಲರ್ಗಳೇ ವಿಜೃಂಭಿಸುತ್ತಿದ್ದು, ಪಂದ್ಯಗಳನ್ನ ಗೆಲ್ಲಿಸಿಕೊಡುತ್ತಿದ್ದಾರೆ. ಇದರಿಂದ ಇಂದಿನ ಪಂದ್ಯ ಬ್ಯಾಟ್ಸ್ಮನ್ ವರ್ಸಸ್ ಬೌಲರ್ಸ್ ಎನ್ನುವಂತಾಗಿದ್ದು, ಆಂಗ್ಲರು ವಿರಾಟ್ ಪಡೆಯನ್ನ ಕಟ್ಟಿಹಾಕಲು ರಣತಂತ್ರ ಮಾಡಬೇಕಿದೆ.
ಒಂದು ವೇಳೆ ಇಂಗ್ಲೆಂಡ್ ಈ ಪಂದ್ಯ ಸೋತರೆ ಪಾಕಿಸ್ತಾನಕ್ಕೆ ಸೆಮೀಸ್ ಸೇರುವ ಅವಕಾಶ ಇದ್ದು, ಬದ್ಧವೈರಿ ಪಾಕ್ ಸಹ ಭಾರತ ಗೆಲುವಿಗೆ ಪ್ರಾರ್ಥಿಸುತ್ತಿದೆ.
ಸಂಭಾವ್ಯ ತಂಡಗಳು:
ಭಾರತ: ವಿರಾಟ್ ಕೊಹ್ಲಿ(ನಾಯಕ), ರೋಹಿತ್ ಶರ್ಮಾ (ಉಪ ನಾಯಕ), ವಿಜಯ್ ಶಂಕರ್, ಕೆ.ಎಲ್. ರಾಹುಲ್, ಕೇದಾರ್ ಜಾಧವ್, ಎಂ.ಎಸ್.ಧೋನಿ, ಹಾರ್ದಿಕ್ ಪಾಂಡ್ಯ, ಯಜುವೇಂದ್ರ ಚಹಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ , ಜಸ್ಪ್ರೀತ್ ಬುಮ್ರಾ
ಇಂಗ್ಲೆಂಡ್ ತಂಡ: ಇಯಾನ್ ಮಾರ್ಗನ್(ನಾಯಕ), ಜಾಸ್ ಬಟ್ಲರ್, ಜೇಮ್ಸ್ ವಿನ್ಸ್, ಜಾನಿ ಬೇರ್ಸ್ಟೋ, ಜೋ ರೂಟ್, ಬೆನ್ ಸ್ಟೋಕ್ಸ್, ಮೊಯಿನ್ ಅಲಿ, ಕ್ರಿಸ್ ವೋಕ್ಸ್, ಅದಿಲ್ ರಶೀದ್, ಜೋಫ್ರಾ ಅರ್ಚರ್, ಮಾರ್ಕ್ ವುಡ್, ಲಿಯಾಮ್ ಪ್ಲಂಕೆಟ್, ಟಾಮ್ ಕರನ್, ಲಿಯಾಮ್ ಡಾಸನ್