ನವದೆಹಲಿ: ಹೆಬ್ಬೆರಳಿನ ಗಾಯಕ್ಕೆ ತುತ್ತಾಗಿ ಮೂರು ವಾರಗಳ ಕಾಲ ವಿಶ್ವಕಪ್ ಟೂರ್ನಿಯಿಂದ ಹೊರಗುಳಿದಿರುವ ಶಿಖರ್ ಧವನ್ ಜಾಗಕ್ಕೆ ಅಂಬಟಿ ರಾಯ್ಡು ಸೂಕ್ತ ಎಂದು ಮಾಜಿ ಕ್ರಿಕೆಟರ್ ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.
ಅಂಬಟಿ ರಾಯ್ಡು ಏಕದಿ ಕ್ರಿಕೆಟ್ನಲ್ಲಿ 45 ರನ್ಗಳ ಆವರೇಜ್ ಹೊಂದಿದ್ದಾರೆ. ಅಂಥಾ ಆಟಗಾರನಿಗೆ ವಿಶ್ವಕಪ್ ಟೂರ್ನಿಯಲ್ಲಿ ಅವಕಾಶ ಕೊಡಲೇಬೇಕು. ಶಿಖರ್ ಸ್ಥಾನಕ್ಕೆ ರಾಯ್ಡು ಸೂಕ್ತ ವ್ಯಕ್ತಿ ಎಂದಿದ್ದಾರೆ ಗಂಭೀರ್. ಇತ್ತ ಮಾಜಿ ಇಂಗ್ಲೆಂಡ್ ಆಟಗಾರ ಕೆವಿನ್ ಪೀಟರ್ಸನ್, ಕೆ ಎಲ್ ರಾಹುಲ್ ಆರಂಭಿಕನಾಗಿ ಕಣ್ಣಕ್ಕಿಳಿಯಲಿ, ನಾಲ್ಕನೇ ಸ್ಥಾನಕ್ಕೆ ರಿಷಭ್ ಪಂತ್ ಸೂಕ್ತ ವ್ಯಕ್ತಿ ಎಂದು ಟ್ವೀಟ್ ಮಾಡಿದ್ದಾರೆ.
-
Shikha OUT the World Cup.
— Kevin Pietersen🦏 (@KP24) June 11, 2019 " class="align-text-top noRightClick twitterSection" data="
Get Pant on the plane ASAP.
KL Rahul to open and Pant at number 4...
">Shikha OUT the World Cup.
— Kevin Pietersen🦏 (@KP24) June 11, 2019
Get Pant on the plane ASAP.
KL Rahul to open and Pant at number 4...Shikha OUT the World Cup.
— Kevin Pietersen🦏 (@KP24) June 11, 2019
Get Pant on the plane ASAP.
KL Rahul to open and Pant at number 4...
'ಶಿಖರ್ ಧವನ್ ಸ್ಥಾನಕ್ಕೆ ಕೆ ಎಲ್ ರಾಹುಲ್ ಅವರನ್ನ ಆಯ್ಕೆ ಮಾಡಬೇಕು. ರಾಹುಲ್ ಆರಂಭಿಕರಾಗಿ ಉತ್ತಮವಾಗಿ ಬ್ಯಾಟ್ ಬೀಸಬಲ್ಲರು. 4ನೇ ಸ್ಥಾನಕ್ಕೆ ದಿನೇಶ್ ಕಾರ್ತಿಕ್ ಉತ್ತಮ ಆಯ್ಕೆ ಅನ್ನೋದು ನನ್ನ ಅಭಿಪ್ರಾಯ. ಕಾರ್ತಿಕ್, ಬ್ಯಾಟಿಂಗ್, ಫೀಲ್ಡಿಂಗ್ ಮತ್ತು ಅಗತ್ಯ ಬಿದ್ದಾಗ ಕೀಪಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಹೀಗಾಗಿ 4ನೇ ಸ್ಥಾನಕ್ಕೆ ಕಾರ್ತಿಕ್ ಅವರನ್ನೇ ಆಯ್ಕೆ ಮಾಡಿದರೆ ಉತ್ತಮ' ಎಂದು ಮಾಜಿ ಕ್ರಿಕೆಟರ್ ಕಿರಣ್ ಮೋರೆ ಹೇಳಿದ್ದಾರೆ.
ಆಸೀಸ್ ವಿರುದ್ಧದ ಪಂದ್ಯದಲ್ಲಿ ಹೆಬ್ಬೆರಳಿನ ಗಾಯಕ್ಕೆ ತುತ್ತಾಗಿರುವ ಆರಂಭಿಕ ಆಟಗಾರ ಶಿಖರ್ ಧವನ್ಗೆ ವೈದ್ಯರು ಮೂರು ವಾರಗಳ ಕಾಲ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ. ಹೀಗಾಗಿ ನಾಳೆ ನ್ಯೂಜಿಲೆಂಡ್ ವಿರುದ್ಧ ನಡೆಯುವ ಪಂದ್ಯದಲ್ಲಿ ರಾಹುಲ್ ಆರಂಭಿಕನಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ.