ETV Bharat / sports

Ind vs Eng 4ನೇ ಟೆಸ್ಟ್​: 4ನೇ ದಿನಾರಂಭದಲ್ಲೇ ಭಾರತಕ್ಕೆ ಆಘಾತ; ಮತ್ತೆ ನಿರಾಸೆ ಮೂಡಿಸಿದ ರಹಾನೆ - ಇಂಗ್ಲೆಂಡ್​​-ಭಾರತ ಟೆಸ್ಟ್​​ ಸರಣಿ

ಸದ್ಯ ಟೀಮ್​ ಇಂಡಿಯಾ 5 ವಿಕೆಟ್ ಕಳೆದುಕೊಂಡು 298 ರನ್​ಗಳಿಸಿ, 199 ರನ್​ಗಳ ಮುನ್ನಡೆ ಸಾಧಿಸಿದೆ. ನಾಯಕ ವಿರಾಟ್​ ಕೊಹ್ಲಿ 40* ಹಾಗೂ ಪಂತ್​ 2* ರನ್​​ಗಳಿಸಿ ಆಡುತ್ತಿದ್ದಾರೆ.​

IND VS ENG 4ನೇ ಟೆಸ್ಟ್​​
IND VS ENG 4ನೇ ಟೆಸ್ಟ್​​
author img

By

Published : Sep 5, 2021, 4:55 PM IST

ಓವಲ್​(ಲಂಡನ್​): ಆತಿಥೇಯ ಇಂಗ್ಲೆಂಡ್​​ ಮತ್ತು ಭಾರತ ತಂಡಗಳ ನಡುವೆ ನಡೆಯುತ್ತಿರುವ ನಾಲ್ಕನೇ ಟೆಸ್ಟ್​​ ಪಂದ್ಯದ ಎರಡನೇ ಇನ್ನಿಂಗ್ಸ್​​ನಲ್ಲಿ ಟೀಂ ಇಂಡಿಯಾ ಕಮ್​​ಬ್ಯಾಕ್​ ಮಾಡಿದೆ. ತಂಡದ ಆರಂಭಿಕ ಆಟಗಾರ ರೋಹಿತ್ ಶರ್ಮಾ ಅವರ ಆಕರ್ಷಕ ಶತಕದ ನೆರವಿನಿಂದ ಮೂರನೇ ದಿನದಾಟದ (ನಿನ್ನೆ) ಅಂತ್ಯಕ್ಕೆ 270 ರನ್​ ಕಲೆಹಾಕಿತ್ತು.

ಮತ್ತೆ ನಿರಾಸೆ ಮೂಡಿಸಿದ ರಹಾನೆ

ಆದರೆ ಇಂದು ನಾಲ್ಕನೇ ದಿನದಾಟ​ ಆರಂಭಿಸಿರುವ ಟೀಮ್​​ ಇಂಡಿಯಾ ಆರಂಭದಲ್ಲೇ ರವೀಂದ್ರ ಜಡೇಜಾ (17) ಮತ್ತು ರಹಾನೆ (0) ವಿಕೆಟ್‌ಗಳನ್ನು​ ಕಳೆದುಕೊಳ್ಳುವ ಮೂಲಕ ಆರಂಭಿಕ ಆಘಾತ ಅನುಭವಿಸಿದೆ. ಮೂರನೇ ದಿನದಾಟದ ಅಂತ್ಯದ ವೇಳೆ ಜಡೇಜಾ ಅಜೇಯ (9) ರನ್​ಗಳಿಕೆ ಮಾಡಿ ಕ್ರೀಸ್​ ಕಾಯ್ದುಕೊಂಡಿದ್ದರು. ಇಂದು ಕೇವಲ 8 ರನ್​ಗಳಿಸಿ ಕ್ರೀಸ್‌ ವೋಕ್ಸ್​​ಗೆ ವಿಕೆಟ್​​ ಒಪ್ಪಿಸಿದರು. ನಂತರ ಜೊತೆಯಾದ ಅಜಿಂಕ್ಯ ರಹಾನೆ ಯಾವುದೇ ರನ್​ಗಳಿಲ್ಲದೆ ವೋಕ್ಸ್​​ಗೆ ವಿಕೆಟ್​ ಒಪ್ಪಿಸಿ ಮತ್ತೊಮ್ಮ ನಿರಾಸೆ ಮೂಡಿಸಿದರು.

ಪ್ರಸ್ತುತ ಟೀಮ್​ ಇಂಡಿಯಾ 5 ವಿಕೆಟ್ ಕಳೆದುಕೊಂಡು 298 ರನ್​ಗಳಿಸಿದ್ದು, 199 ರನ್​ಗಳ ಮುನ್ನಡೆ ಪಡೆದಿದೆ. ನಾಯಕ ಕೊಹ್ಲಿ 40* ಹಾಗೂ ಪಂತ್​ 2* ರನ್​​ಗಳಿಸಿ ಆಡುತ್ತಿದ್ದಾರೆ.​

ಇದನ್ನೂ ಓದಿ: England Vs India 4th: 270ರನ್​ಗಳಿಗೆ 3 ವಿಕೆಟ್​; 171ರನ್​ ಮುನ್ನಡೆ ಪಡೆದ ಭಾರತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.