ETV Bharat / sports

ಶಾರ್ದೂಲ್​ ಠಾಕೂರ್​ ಎಸೆದ ನೋ ಬಾಲ್​ನಿಂದ ವಿಜಯ್ ಶಂಕರ್​ ವಿಶ್ವಕಪ್​ಗೆ ಸೆಲೆಕ್ಟ್​ - undefined

ಕೇವಲ ಒಂದು ನೋ ಬಾಲ್​ ನನ್ನ ಕ್ರಿಕೆಟ್ ವೃತ್ತಿ ಜೀವನವನ್ನೇ ಬದಲಿಸಿತು. ಆ ನೋಬಾಲ್​ ನಿಂದಲೇ ನಾನು ಇಂದು ಟೀಂ ಇಂಡಿಯಾ ಪರ ಆಡಲು ಅವಕಾಶ ಪಡೆದೆ ಎಂದು ಟೀಂ ಇಂಡಿಯಾ ಆಲ್​ರೌಂಡ್​ ಆಟಗಾರ ವಿಜಯ್​ ಶಂಕರ್​ ಹೇಳಿದ್ದಾರೆ.

ವಿಜಯ್​ ಶಂಕರ್​
author img

By

Published : May 27, 2019, 11:24 AM IST

Updated : May 27, 2019, 2:44 PM IST

ನವದೆಹಲಿ​: ಭಾರತ ತಂಡದ ಆಲ್​ರೌಂಡರ್​ ವಿಜಯ್​ ಶಂಕರ್​ ವಿಶ್ವಕಪ್​ ತಂಡಕ್ಕೆ ಆಯ್ಕೆಯಾಗಿದ್ದು, ನಾಲ್ಕನೇ ಸ್ಥಾನದಲ್ಲಿ ಬ್ಯಾಟ್​ ಬೀಸಲು ಸಿದ್ದರಾಗಿದ್ದರೆ. ಇದೇ ಸಮಯದಲ್ಲಿ ತನ್ನ ಕ್ರಿಕೆಟ್​ ವೃತ್ತಿ ಜೀವನದ ಅತಿ ಮುಖ್ಯ ಟರ್ನಿಂಗ್​ ಪಾಯಿಂಟ್​ ಏನೆಂಬುದನ್ನ ತಿಳಿಸಿದ್ದಾರೆ.

ತಮಿಳುನಾಡಿನ ಆಲ್​ ರೌಂಡರ್​ ವಿಜಯ್​ ಶಂಕರ್​ ಬ್ಯಾಟಿಂಗ್​ ಮತ್ತು ಬೌಲಿಂಗ್​ನಲ್ಲಿ ತೋರಿದ ಉತ್ತಮ ಪ್ರದರ್ಶನದಿಂದ ವಿಶ್ವಕಪ್​ ಟೀಂಗೆ ಆಯ್ಕೆಯಾಗಿದ್ದಾರೆ. ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಭರವಸೆ ಹೊಂದಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ವಿಜಯ್​ ಶಂಕರ್,​ ಒಂದು ನೋ ಬಾಲ್​ನಿಂದ ತನ್ನ ಕ್ರಿಕೆಟ್​ ವೃತ್ತಿ ಜೀವನ ಬದಲಾಯಿತು ಎಂದು ಹೇಳಿಕೊಂಡಿದ್ದಾರೆ.

ರಣಜಿಯಲ್ಲಿ ತಮಿಳುನಾಡು ತಂಡವನ್ನ ಪ್ರತಿನಿಧಿಸುತ್ತಿದ್ದೆ. ಒಂದು ಪಂದ್ಯದಲ್ಲಿ ನಾನು ಮತ್ತು ನಮ್ಮ ತಂಡದ ನಾಯಕ ಉತ್ತಮವಾಗಿ ಬ್ಯಾಟಿಂಗ್​ ಮಾಡುತ್ತಿದ್ದೆವು. ಆದ್ರೆ ಇಬ್ಬರು ರನೌಟ್​ ಆದಕಾರಣ ನಾವು ಆ ಪಂದ್ಯದಲ್ಲಿ ಸೋಲು ಅನುಭವಿಸಿದೆವು. ಪಂದ್ಯದ ನಂತರ ನಾಯಕ ಮತ್ತು ಕೋಚ್​ ಏನೂ ಹೇಳಲಿಲ್ಲ. ಆದರೆ ಬೇರೆಯವರೆಲ್ಲ ಇದೇ ಈತನ ಕೊನೆಯ ಪಂದ್ಯ ಮತ್ತೆ ತಮಿಳುನಾಡು ತಂಡದಲ್ಲಿ ಈತನಿಗೆ ಸ್ಥಾನ ಸಿಗಲ್ಲ ಎಂದು ಮಾತನಾಡಲು ಶುರು ಮಾಡಿದ್ರು.

ನಂತರ ಚೆನ್ನೈನಲ್ಲಿ ನಡೆದ ಮುಂಬೈ ವಿರುದ್ಧದ ಪಂದ್ಯದಲ್ಲಿ ನಾನು 5ನೇ ಸ್ಥಾನದಲ್ಲಿ ಬ್ಯಾಟ್​ ಬೀಸಲು ಕಣಕ್ಕಿಳಿದೆ. ಮುಂಬೈ ತಂಡದ ಪರ ಬೌಲಿಂಗ್​ ಮಾಡುತ್ತಿದ್ದ ಶಾರ್ದೂಲ್ ಠಾಕೂರ್​ ಎಸೆದ ಬಾಲ್​ಗೆ ಕ್ಲೀನ್​ ಬೌಲ್ಡ್​ ಆದೆ. ಆದ್ರೆ ಅದು ನೋಬಾಲ್​ ಆಗಿತ್ತು. ಹೀಗಾಗಿ ಒಂದು ಲೈಫ್​ ಪಡೆದ ನಾನು ಅಂದಿನ ಪಂದ್ಯದಲ್ಲಿ 95 ರನ್​ ಸಿಡಿಸಿದೆ.

ಒಂದು ವೇಳೆ ಶಾರ್ದೂಲ್ ಠಾಕೂರ್​ ನೋ ಬಾಲ್​ ಎಸೆಯಲಿಲ್ಲ ಎಂದಿದ್ದರೆ ಬಹುಶಃ ಇತರರು ಮಾತನಾಡಿದಂತೆ ನಾನು ಮತ್ತೆ ತಮಿಳುನಾಡು ತಂಡದ ಪರ ಆಡುತ್ತಿರಲಿಲ್ಲ. ಆ ನೋ ಬಾಲ್​ ನನ್ನ ಕ್ರಿಕೆಟ್​ ಜೀವನವನ್ನೇ ಬದಲಿಸಿತು. ಶಾರ್ದೂಲ್​ ಕೂಡ ಪಂದ್ಯ ಮುಗಿದ ನಂತರ ನಾನೇ ನಿನಗೆ ಜೀವನ ನೀಡಿದ್ದು ಎಂದು ಹೇಳಿದ್ದ, ಅಂತ ವಿಜಯ್​ ಹೇಳಿಕೊಂಡಿದ್ದಾರೆ.

Intro:Body:Conclusion:
Last Updated : May 27, 2019, 2:44 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.