ಲಂಡನ್: ಇಲ್ಲಿನ ಲೀಡ್ಸ್ ಮೈದಾನದಲ್ಲಿ ಇಂದು ವೆಸ್ಟ್ ಇಂಡೀಸ್ ಮತ್ತು ಅಫ್ಘಾನಿಸ್ತಾನ ತಂಡಗಳು ಮುಖಾಮುಖಿಯಾಗುತ್ತಿದ್ದು, ಟಾಸ್ ಗೆದ್ದ ವೆಸ್ಟ್ ಇಂಡೀಸ್ ಬ್ಯಾಟಿಂಗ್ ಆಯ್ದುಕೊಂಡಿದೆ.
-
News from the toss at Headingley!
— Cricket World Cup (@cricketworldcup) July 4, 2019 " class="align-text-top noRightClick twitterSection" data="
West Indies captain Jason Holder wins the toss and his side will bat first.#AFGvWI | #CWC19 pic.twitter.com/vepgo1Nhxl
">News from the toss at Headingley!
— Cricket World Cup (@cricketworldcup) July 4, 2019
West Indies captain Jason Holder wins the toss and his side will bat first.#AFGvWI | #CWC19 pic.twitter.com/vepgo1NhxlNews from the toss at Headingley!
— Cricket World Cup (@cricketworldcup) July 4, 2019
West Indies captain Jason Holder wins the toss and his side will bat first.#AFGvWI | #CWC19 pic.twitter.com/vepgo1Nhxl
ಈಗಾಗಲೆ ವೆಸ್ಟ್ ಇಂಡೀಸ್ ಮತ್ತು ಅಫ್ಘನ್ ತಂಡಗಳು ಸೆಮಿಫೈನಲ್ ರೇಸ್ನಿಂದ ಹೊರ ಬಿದ್ದಿದ್ದು, ಉಭಯ ತಂಡಗಳಿಗೂ ಇದು ಅನೌಪಚಾರಿಕ ಪಂದ್ಯವಾಗಿದೆ. ಆದ್ರೆ ಟೂರ್ನಿಯಲ್ಲಿ ಇಲ್ಲಿಯವರೆಗೂ ಒಂದು ಪಂದ್ಯದಲ್ಲಿ ಜಯ ಸಾಧಿಸದ ಅಫ್ಘಾನಿಸ್ತಾನ ತಂಡ ಕೆರಿಬಿಯನ್ ಪಡೆಯನ್ನ ಮಣಿಸಿ ಗೆಲುವಿನೊಂದಿಗೆ ವಿಶ್ವಕಪ್ ಅಭಿಯಾನಕ್ಕೆ ಅಂತ್ಯ ಹಾಡುವ ತವಕದಲ್ಲಿದೆ.
ವಿಶ್ವಕಪ್ ಟೂರ್ನಿ ಆರಂಭಕ್ಕೂ ಮುನ್ನ ಚಾಂಪಿಯನ್ ಪಟ್ಟ ಅಲಂಕರಿಸುವ ಹುಮ್ಮಸ್ಸಿನಲ್ಲಿದ್ದ ವಿಂಡೀಸ್ ಪಡೆಗೆ ನಿಯಾಸೆಯಾಗಿದ್ದು, ಇಂದಿನ ಪಂದ್ಯದಲ್ಲಿ ಜಯ ಸಾಧಿಸುವ ವಿಶ್ವಾಸ ಹೊಂದಿದೆ.
ಇದುವರೆಗೂ ಏಕದಿನ ಕ್ರಿಕೆಟ್ನಲ್ಲಿ ಅಫ್ಘಾನಿಸ್ತಾನ ಮತ್ತು ವೆಸ್ಟ್ ಇಂಡೀಸ್ ತಂಡ 5 ಬಾರಿ ಮುಖಾಮುಖಿಯಾಗಿವೆ. ಐದರಲ್ಲಿ ಅಫ್ಘಾನಿಸ್ತಾನ ತಂಡ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿದೆ. ವಿಂಡೀಸ್ ಒಂದು ಪಂದ್ಯದಲ್ಲಿ ಗೆಲುವಿನ ನಗೆ ಬೀರಿದ್ದು, ಒಂದು ಪಂದ್ಯ ಯಾವುದೇ ಫಲಿತಾಂಶ ಕಂಡಿಲ್ಲ.