ನೋಯ್ಡಾ : ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಮತ್ತೆ ಆಡುವುದಾಗಿ ತಿಳಿಸಿರುವ ಮಹೇಂದ್ರ ಸಿಂಗ್ ಧೋನಿ ಕ್ರಮಕ್ಕೆ ಟೀಂ ಇಂಡಿಯಾದ ಮಾಜಿ ಆಲ್ರೌಂಡರ್ ಆಟಗಾರ ಕಪಿಲ್ ದೇವ್ ಅಷ್ಟೊಂದು ಉತ್ಸುಕತೆ ತೋರಿಸಿಲ್ಲ. ಐಪಿಎಲ್ ಅನ್ನೋದು ಕ್ರಿಕೆಟ್ ಲೋಕದ ಭವಿಷ್ಯದ ತಾರೆಗಳನ್ನು ಹುಡುಕುವ ಪಂದ್ಯ. ಧೋನಿ ಟಿ-20 ವಿಶ್ವಕಪ್ಗಾಗಿ ಪರಿಗಣಿಸಬೇಕಾದ ಕೆಲವು ಪಂದ್ಯಗಳನ್ನು ಆಡಬೇಕು ಎಂದು ಸಲಹೆ ಜೊತೆಗೆ ಕಳವಳ ಕೂಡ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ನಿಮಗೆ ವಿಶ್ರಾಂತಿ ಅಗತ್ಯವಿದೆ ಎನಿಸಿದರೆ ಐಪಿಎಲ್ ಆಡಬೇಡಿ: ಕೊಹ್ಲಿ ಪಡೆಗೆ ಕಪಿಲ್ದೇವ್ ಸಲಹೆ
ನೋಯ್ಡಾದಲ್ಲಿ ನಡೆದ ಹೆಚ್ಸಿಎಲ್ ಐದನೇ ಆವೃತ್ತಿ ಗ್ರ್ಯಾಂಡ್ ಈವೆಂಟ್ನಲ್ಲಿ ಮಾತನಾಡಿದ ಕಪಿಲ್ ದೇವ್, ಧೋನಿಗೆ ಮಾತ್ರ ಇದು ಅನ್ವಯಿಸುವುದಿಲ್ಲ. ಐಪಿಎಲ್ ಅನ್ನೋದು ಮುಂದಿನ 10 ವರ್ಷಗಳಗಾಲ ನಾವು ಹೆಮ್ಮೆ ಪಡುವಂತಹ ಉತ್ತಮ ಯುವ ಆಟಗಾರನನ್ನು ಹುಡುಕುವಂತಹದ್ದಾಗಿದೆ. ಧೋನಿ ಈಗಾಗಲೇ ದೇಶಕ್ಕಾಗಿ ತುಂಬಾ ಸಾಧನೆ ಮಾಡಿ ತೋರಿಸಿದ್ದಾರೆ.
![Kapil Dev and MS Dhoni Playing T20 World Cup,ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ](https://etvbharatimages.akamaized.net/etvbharat/prod-images/6232082_1026_6232082_1582872423695.png)
ಧೋನಿ ಅವರ ಅಭಿಮಾನಿಯಾಗಿ ಟಿ-20 ವಿಶ್ವಕಪ್ ಆಡುವುದನ್ನು ನೋಡಲು ನಾನು ಬಯಸುತ್ತೇನೆ. ಆದರೆ, ಆಟಗಾರರ ಹಿಡಿತವೆಲ್ಲವೂ ನಿರ್ವಹಣಾಗಾರರ ಮೇಲೆ ಅವಲಂಬಿತವಾಗಿರುತ್ತದೆ. ಓರ್ವ ಕ್ರಿಕೆಟಿಗನಾಗಿ ನಾನು ಇದನ್ನು ಬಲ್ಲೆ. ಕಳೆದ ಒಂದು ವರ್ಷದಿಂದ ಕ್ರಿಕೆಟ್ ಅಂಗಳದಲ್ಲಿ ಅವರು ಬ್ಯಾಟ್ ಹಿಡಿದಿದ್ದು ನಾವು ನೋಡಿಯೇ ಇಲ್ಲ. ವಿಭಿನ್ನ ಆಟಗಾರರಿಗೆ ವಿಭಿನ್ನ ನಿಯಮಗಳು ಇರಬಾರದು ಎಂದು ಇತ್ತೀಚೆಗೆ ಧೋನಿಗೆ ಸಿಕ್ಕ ಅಲ್ಪ ಅವಕಾಶಗಳ ಕುರಿತು ಕಳವಳ ಕೂಡ ವ್ಯಕ್ತಪಡಿಸಿದರು.
![Kapil Dev and MS Dhoni Playing T20 World Cup,ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ](https://etvbharatimages.akamaized.net/etvbharat/prod-images/768-512-6229792-thumbnail-3x2-tyugh_2802newsroom_1582871938_938.jpg)
ಇದನ್ನೂ ಓದಿ : ವಾವ್ಹ್ ಧೋನಿ: ಪಿಚ್ ರೋಲರ್ ಡ್ರೈವ್ ಮಾಡಿದ್ರು ಮಾಹಿ- ವಿಡಿಯೋ ವೈರಲ್!
ಮಹೇಂದ್ರ ಸಿಂಗ್ ಧೋನಿ ಈಗ ಕ್ರಿಕೆಟ್ನ ಕೊನೆಯ ಕಾಲಘಟ್ಟದಲ್ಲಿದ್ದಾರೆ. ಅವರು ಆಡಬೇಕು. ಅವರ ಆಟದ ಶೈಲಿಯನ್ನು ನಾನು ನೋಡಬೇಕು. ಇದು ನನ್ನ ವೈಯಕ್ತಿಕ ಹೇಳಿಕೆ. ಆದರೆ, ಮುಂದಿನ ಪೀಳಿಗೆಯನ್ನು ಹುಡುಕುವುದು ಐಪಿಎಲ್ನ ಉದ್ದೇಶ ಎನ್ನುವುದನ್ನು ಇಲ್ಲಿ ಮರೆಯುಂತಿಲ್ಲ ಎಂದರು.