ETV Bharat / sports

ಸೆಮೀಸ್​ ರೇಸ್​ನಿಂದ ದಕ್ಷಿಣ ಆಫ್ರಿಕಾ ಔಟ್... ತಂಡದ ಹಿನ್ನಡೆಗೆ ಐಪಿಎಲ್​ ದೂರಿದ ಫ್ಲೆಸಿಸ್ - ಫಫ್​ ಡು ಪ್ಲೆಸಿಸ್

ಭಾನುವಾರ ಪಾಕಿಸ್ತಾನ ವಿರುದ್ಧ 49 ರನ್​ಗಳಿಂದ ಸೋಲುವ ಮೂಲಕ ದಕ್ಷಿಣ ಆಫ್ರಿಕಾ ಸೆಮಿಫೈನಲ್ ರೇಸ್​ನಿಂದ ಹೊರಬಿದ್ದಿದೆ. ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ತಂಡದ ನಾಯಕ ಫಫ್​ ಡು ಪ್ಲೆಸಿಸ್, ವಿಶ್ವಕಪ್​ನಲ್ಲಿ ಹಿನ್ನಡೆ ಅನುಭವಿಸಲು ಐಪಿಎಲ್​ ಕಾರಣ ಎಂದು ಆರೋಪ ಮಾಡಿದ್ದಾರೆ.

ಫ್ಲೆಸಿಸ್
author img

By

Published : Jun 24, 2019, 12:55 PM IST

Updated : Jun 24, 2019, 1:24 PM IST

ಲಂಡನ್: ವಿಶ್ವಕಪ್​​ ಟೂರ್ನಿಯ ಬಲಿಷ್ಠ ತಂಡಗಳಲ್ಲಿ ಒಂದಾದ ದಕ್ಷಿಣ ಆಫ್ರಿಕಾ ಲೀಗ್ ಹಂತದಲ್ಲೇ ಟೂರ್ನಿಯಿಂದ ಹೊರಬಿದ್ದು ಕೋಟ್ಯಂತರ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.

ಭಾನುವಾರ ಪಾಕಿಸ್ತಾನ ವಿರುದ್ಧ 49 ರನ್​ಗಳಿಂದ ಸೋಲುವ ಮೂಲಕ ದಕ್ಷಿಣ ಆಫ್ರಿಕಾ ಸೆಮಿಫೈನಲ್ ರೇಸ್​ನಿಂದ ಹಿಂದೆ ಸರಿದಿದೆ. ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ತಂಡದ ನಾಯಕ ಫಫ್​ ಡು ಪ್ಲೆಸಿಸ್, ವಿಶ್ವಕಪ್​ನಲ್ಲಿ ಹಿನ್ನಡೆ ಅನುಭವಿಸಲು ಐಪಿಎಲ್​ ಕಾರಣ ಎಂದು ಆರೋಪ ಮಾಡಿದ್ದಾರೆ.

ಪಾಕ್​ ವಿರುದ್ಧ 49 ರನ್​ಗಳ ಸೋಲು... ಸೆಮಿ ಫೈನಲ್​ ರೇಸ್​​ನಿಂದ ಹೊರಬಿದ್ದ ದಕ್ಷಿಣ ಆಫ್ರಿಕಾ

"ದಕ್ಷಿಣ ಆಫ್ರಿಕಾ ತಂಡದ ಪ್ರಮುಖ ವೇಗಿ ಕಗಿಸೋ ರಬಾಡ ವಿಶ್ವಕಪ್​​ನಲ್ಲಿ ನೀರಸ ಪ್ರದರ್ಶನಕ್ಕೆ ಐಪಿಎಲ್​ ನೇರ ಕಾರಣ. ಐಪಿಎಲ್​​ ನಲ್ಲಿ ರಬಾಡ ಆಡುವುದನ್ನ ತಡೆಯಲು ನಾನು ಹಾಗೂ ಟೀಮ್ ಮ್ಯಾನೇಜ್​ಮೆಂಟ್ ಸಾಕಷ್ಟು ಪ್ರಯತ್ನಿಸಿದ್ದೆವು. ಆದರೆ, ರಬಾಡ ಐಪಿಎಲ್​ನಲ್ಲಿ ಭಾಗವಹಿಸಿ ವಿಶ್ವಕಪ್​ ವೇಳೆ ದೈಹಿಕವಾಗಿ ದಣಿದಿದ್ದರು. ಐಪಿಎಲ್​ ಟೂರ್ನಿಯ ಅಂತ್ಯದಲ್ಲಿ ಗಾಯಗೊಂಡಿದ್ದರು, ಇದು ನಂತರದಲ್ಲಿ ವಿಶ್ವಕಪ್​​ ಮೇಲೆ ಪರಿಣಾಮ ಬೀರಿತು" ಎಂದು ಫ್ಲೆಸಿಸ್ ಪಾಕ್ ವಿರುದ್ಧ ಸೋಲಿನ ಬಳಿಕ ಮಾತನಾಡಿದ್ದಾರೆ.

"ಐಪಿಎಲ್​​ಗೂ ಮುನ್ನ ನಮ್ಮ ತಂಡದ ಆಟಗಾರರು ಮೂರು ಮಾದರಿಯ ಕ್ರಿಕೆಟ್​ನಲ್ಲಿ ಸತತವಾಗಿ ತೊಡಗಿಸಿಕೊಂಡಿದ್ದರು. ಸಹಜವಾಗಿಯೇ ಎಲ್ಲ ಪ್ರಮುಖ ಆಟಗಾರರು ದೈಹಿಕ ಹಾಗೂ ಮಾನಸಿಕವಾಗಿ ಸಾಕಷ್ಟು ದಣಿದಿದ್ದರು. ಐಪಿಎಲ್​ನಲ್ಲಿ ಭಾಗವಹಿಸಿದ್ದು ವಿಶ್ವಕಪ್​​ಗೆ ಮತ್ತಷ್ಟು ಹೊಡೆತ ನೀಡಿತು" ಎಂದು ದಕ್ಷಿಣ ಆಫ್ರಿಕ ನಾಯಕ ಹೇಳಿದ್ದಾರೆ.

ಐಪಿಎಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ರತಿನಿಧಿಸಿದ್ದ ರಬಾಡ 12 ಪಂದ್ಯಗಳಿಂದ 25 ವಿಕೆಟ್ ಪಡೆದು ತಂಡದ ನಿರ್ಣಾಯಕ ಆಟಗಾರನಾಗಿ ಕಾಣಿಸಿಕೊಂಡಿದ್ದರು.

Intro:Body:

ಸೆಮೀಸ್​ ರೇಸ್​ನಿಂದ ದಕ್ಷಿಣ ಆಫ್ರಿಕಾ ಔಟ್... ತಂಡದ ಹಿನ್ನಡೆಗೆ ಐಪಿಎಲ್​ ದೂರಿದ ಫ್ಲೆಸಿಸ್

ಲಂಡನ್: ವಿಶ್ವಕಪ್​​ ಟೂರ್ನಿಯ ಬಲಿಷ್ಠ ತಂಡಗಳಲ್ಲಿ ಒಂದಾ ದಕ್ಷಿಣ ಆಫ್ರಿಕಾ ಲೀಗ್ ಹಂತದಲ್ಲೇ ಟೂರ್ನಿಯಿಂದ ಹೊರಬಿದ್ದು ಕೋಟ್ಯಾಂತರ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.

ಭಾನುವಾರ ಪಾಕಿಸ್ತಾನ ವಿರುದ್ಧ 49 ರನ್​ಗಳಿಂದ ಸೋಲುವ ಮೂಲಕ ದಕ್ಷಿಣ ಆಫ್ರಿಕಾ ಸೆಮಿಫೈನಲ್ ರೇಸ್​ನಿಂದ ಹಿಂದೆ ಸರಿದಿದೆ. ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ತಂಡದ ನಾಯಕ ಫಫ್​ ಡು ಪ್ಲೆಸಿಸ್, ವಿಶ್ವಕಪ್​ನಲ್ಲಿ ಹಿನ್ನಡೆ ಅನುಭವಿಸಲು ಐಪಿಎಲ್​ ಕಾರಣ ಎಂದು ಆರೋಪ ಮಾಡಿದ್ದಾರೆ.

"ದಕ್ಷಿಣ ಆಫ್ರಿಕಾ ತಂಡದ ಪ್ರಮುಖ ವೇಗಿ ಕಗಿಸೋ ರಬಾಡರನ್ನು ಟೂರ್ನಿಯ ಮಧ್ಯದಲ್ಲಿ ಕಳೆದುಕೊಂಡಿದ್ದು ನಿಜಕ್ಕೂ ತಂಡಕ್ಕೆ ಹೊಡೆತ ನೀಡಿತು. ರಬಾಡರನ್ನು ಐಪಿಎಲ್​​ನಂತೆ ಆಡದಂತೆ ತಡೆಯಲು ನಾನು ಹಾಗೂ ಟೀಮ್ ಮ್ಯಾನೇಜ್​ಮೆಂಟ್ ಸಾಕಷ್ಟು ಪ್ರಯತ್ನಿಸಿದ್ದೆವು. ಆದರೆ ರಬಾಡ ಐಪಿಎಲ್​ನಲ್ಲಿ ಭಾಗವಹಿಸಿ ವಿಶ್ವಕಪ್​ ವೇಳೆ ದೈಹಿಕವಾಗಿ ದಣಿದಿದ್ದರು. ಕೆಲ ಪಂದ್ಯದ ಬಳಿಕ ಗಾಯಗೊಂಡು ವಿಶ್ವಕಪ್​ ಮಿಸ್ ಮಾಡಿಕೊಂಡರು" ಎಂದು ಫ್ಲೆಸಿಸ್ ಪಾಕ್ ವಿರುದ್ಧ ಸೋಲಿನ ಬಳಿಕ ಮಾತನಾಡಿದ್ದಾರೆ.

"ಐಪಿಎಲ್​​ಗೂ ಮುನ್ನ ನಮ್ಮ ತಂಡದ ಆಟಗಾರರು ಮೂರು ಮಾದರಿಯ ಕ್ರಿಕೆಟ್​ನಲ್ಲಿ ಸತತವಾಗಿ ತೊಡಗಿಸಿಕೊಂಡಿದ್ದರು. ಸಹಜವಾಗಿಯೇ ಎಲ್ಲ ಪ್ರಮುಖ ಆಟಗಾರರು ದೈಹಿಕ ಹಾಗೂ ಮಾನಸಿಕವಾಗಿ ಸಾಕಷ್ಟು ದಣಿದಿದ್ದರು. ಐಪಿಎಲ್​ನಲ್ಲಿ ಭಾಗವಹಿಸಿದ್ದು ವಿಶ್ವಕಪ್​​ಗೆ ಮತ್ತಷ್ಟು ಹೊಡೆತ ನೀಡಿತು" ಎಂದು ದಕ್ಷಿಣ ಆಫ್ರಿಕಾ ನಾಯಕ ಹೇಳಿದ್ದಾರೆ.

ಐಪಿಎಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ರತಿನಿಧಿಸಿದ್ದ ರಬಾಡ 12 ಪಂದ್ಯಗಳಿಂದ 25 ವಿಕೆಟ್ ಪಡೆದು ತಂಡದ ನಿರ್ಣಾಯಕ ಆಟಗಾರನಾಗಿ ಕಾಣಿಸಿಕೊಂಡಿದ್ದರು.

Conclusion:
Last Updated : Jun 24, 2019, 1:24 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.