ಲಂಡನ್: ಇಲ್ಲಿನ ಚಸ್ಟರ್ ಲೆ ಸ್ಟ್ರೀಟ್ನಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಇಂದು ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಸೆಣಸಾಟ ನಡೆಸಲಿವೆ.
-
A place in the semi-final is at stake!
— Cricket World Cup (@cricketworldcup) July 3, 2019 " class="align-text-top noRightClick twitterSection" data="
Are you Team #EoinMorgan or Team #KaneWilliamson today? #CWC19 | #WeAreEngland | #BACKTHEBLACKCAPS | #ENGvNZ pic.twitter.com/JmBK339Vhi
">A place in the semi-final is at stake!
— Cricket World Cup (@cricketworldcup) July 3, 2019
Are you Team #EoinMorgan or Team #KaneWilliamson today? #CWC19 | #WeAreEngland | #BACKTHEBLACKCAPS | #ENGvNZ pic.twitter.com/JmBK339VhiA place in the semi-final is at stake!
— Cricket World Cup (@cricketworldcup) July 3, 2019
Are you Team #EoinMorgan or Team #KaneWilliamson today? #CWC19 | #WeAreEngland | #BACKTHEBLACKCAPS | #ENGvNZ pic.twitter.com/JmBK339Vhi
ಉಭಯ ತಂಡಗಳಿಗೂ ಇದು ಲೀಗ್ ಹಂತದ ಅಂತಿಮ ಪಂದ್ಯವಾಗಿದ್ದು, ಪಾಯಿಂಟ್ ಪಟ್ಟಿಯಲ್ಲಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿರುವ ನ್ಯೂಜಿಲ್ಯಾಂಡ್ ಮತ್ತು ಇಂಗ್ಲೆಂಡ್ ಸೆಮಿಫೈನಲ್ ಹಂತ ತಲುಪಲು ಇಂದಿನ ಪಂದ್ಯವನ್ನ ಗೆಲ್ಲಲೇ ಬೇಕಾದ ಒತ್ತಡದಲ್ಲಿವೆ.
ಈಗಾಗಲೆ ಭಾರತ ತಂಡದ ವಿರುದ್ಧ 31 ರನ್ಗಳ ಜಯ ದಾಖಲಿಸಿರುವ ಇಂಗ್ಲೆಂಡ್, ಇಂದಿನ ಪಂದ್ಯದಲ್ಲಿ ವಿಲಿಯಮ್ಸನ್ ಪಡೆಯನ್ನ ಕಟ್ಟಿಹಾಕುವ ಹುಮ್ಮಸ್ಸಿನಲ್ಲಿದೆ. ಭಾರತದ ವಿರುದ್ಧದ ಪಂದ್ಯದಲ್ಲಿ ಮಿಂಚಿದ್ದ ಜಾನಿ ಬೈರ್ಸ್ಟೋವ್, ಜಾಸನ್ ರಾಯ್, ಜೋ ರೂಟ್ ಇಂಗ್ಲೆಂಡ್ ತಂಡದ ಬ್ಯಾಟಿಂಗ್ ಶಕ್ತಿಯಾಗಿದ್ದಾರೆ. ಇತ್ತ ಆಲ್ರೌಂಡರ್ ಬೆನ್ ಸ್ಟೋಕ್ಸ್ ಕೂಡ ಸ್ಪೋಟಕ ಬ್ಯಾಟಿಂಗ್ ನಡೆಸುತ್ತಿರೋದು ಆಂಗ್ಲರಿಗೆ ಪ್ಲಸ್ ಪಾಯಿಂಟ್ ಆಗಿದೆ.
ಮತ್ತೊಂದೆಡೆ ಸತತ ಆರು ಪಂದ್ಯಗಳಲ್ಲಿ ಗೆಲುವು ದಾಖಲಿಸಿ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಕಿವೀಸ್, 2 ಪಂದ್ಯಗಳಲ್ಲಿ ಸೋಲು ಕಂಡು ಸೆಮೀಸ್ ಹಂತ ತಲುಪುವಲ್ಲಿ ವಿಫಲವಾಗಿದೆ.
ಆರಂಭದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದ ಕಿವೀಸ್ ಆಟಗಾರರು ಕಳೆದ 2 ಪಂದ್ಯಗಳಲ್ಲಿ ನೀರಸ ಪ್ರದರ್ಶನ ತೋರುತ್ತಿದ್ದಾರೆ. ಕಿವೀಸ್ ಟಾಪ್ ಆರ್ಡರ್ ಫ್ಲಾಪ್ ಆಗುತ್ತಿದ್ದು, ಇಂದಿನ ಪಂದ್ಯದಲ್ಲಿ ಕಂಬ್ಯಾಕ್ ಮಾಡದಿದ್ದರೆ ಸೆಮೀಸ್ ಹಾದಿ ದುರ್ಗಮವಾಗಲಿದೆ.
ವಿಶ್ವಕಪ್ನಲ್ಲಿ ಕಿವೀಸ್ ತಂಡದ್ದೇ ಮೇಲುಗೈ:
ಇಲ್ಲಿಯವರೆಗೆ ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ತಂಡ ವಿಶ್ವಕಪ್ ಟೂರ್ನಿಯಲ್ಲಿ 8 ಬಾರಿ ಮುಖಾಮಖಿಯಾಗಿವೆ. 5 ಪಂದ್ಯಗಲ್ಲಿ ನ್ಯೂಜಿಲ್ಯಾಂಡ್ ಜಯಗಳಿದ್ರೆ, 3 ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡ ಜಯ ಸಾಧಿಸಿದೆ.
ಸಂಭಾವ್ಯ ತಂಡಗಳು:
ಇಂಗ್ಲೆಂಡ್ : ಇಯಾನ್ ಮಾರ್ಗನ್(ನಾಯಕ), ಜಾಸನ್ ರಾಯ್, ಬೈರ್‌ಸ್ಟೋವ್, ಜೋ ರೂಟ್, ಬೆನ್ ಸ್ಟೋಕ್ಸ್, ಜಾಸ್ ಬಟ್ಲರ್, ಕ್ರಿಸ್ ವೋಕ್ಸ್, ಅದಿಲ್ ರಶೀದ್, ಲಿಯಮ್ ಪ್ಲುಂಕೆಟ್, ಜೋಫ್ರಾ ಅರ್ಚರ್, ಮಾರ್ಕ್ ವುಡ್.
ನ್ಯೂಜಿಲೆಂಡ್: ಕೇನ್ ವಿಲಿಯಮ್ಸನ್ (ನಾಯಕ), ಟ್ರೆಂಟ್ ಬೌಲ್ಟ್, ಕಾಲಿನ್ ಡಿ ಗ್ರ್ಯಾಂಡ್ಹೋಮ್, ಲೂಕಿ ಫರ್ಗ್ಯುಸನ್, ಮಾರ್ಟಿನ್ ಗಪ್ಟಿಲ್, ಮ್ಯಾಟ್ ಹೆನ್ರಿ, ಟಾಮ್ ಲ್ಯಾಥಮ್, ಕಾಲಿನ್ ಮನ್ರೊ, ಜಿಮ್ಮಿ ನಿಶಾಮ್, ಮಿಚೆಲ್ ಸ್ಯಾಂಟ್ನರ್, ರಾಸ್ ಟೇಲರ್.