ಕಾರ್ಡಿಫ್: ಮೊದಲ ಪಂದ್ಯದಲ್ಲಿ ಗೆದ್ದು ಎರಡನೇ ಪಂದ್ಯದಲ್ಲಿ ರೋಚಕ ಸೋಲು ಕಂಡಿರುವ ಬಾಂಗ್ಲಾದೇಶ ಹಾಗೂ ಇಂಗ್ಲೆಂಡ್ ತಂಡಗಳು ಇಂದು ಕಾರ್ಡಿಫ್ನಲ್ಲಿ ಪೈಪೋಟಿ ನಡೆಸುತ್ತಿದ್ದು, ಟಾಸ್ ಗೆದ್ದ ಬಾಂಗ್ಲಾದೇಶ ಬೌಲಿಂಗ್ ಆಯ್ದುಕೊಂಡಿದೆ.
-
England v Bangladesh
— Cricket World Cup (@cricketworldcup) June 8, 2019 " class="align-text-top noRightClick twitterSection" data="
10:30 BST
📍 Cardiff
#️⃣ #ENGvBAN#WeAreEngland #RiseOfTheTigers
Which side will get their second win of #CWC19 today? pic.twitter.com/aPbv48ij7M
">England v Bangladesh
— Cricket World Cup (@cricketworldcup) June 8, 2019
10:30 BST
📍 Cardiff
#️⃣ #ENGvBAN#WeAreEngland #RiseOfTheTigers
Which side will get their second win of #CWC19 today? pic.twitter.com/aPbv48ij7MEngland v Bangladesh
— Cricket World Cup (@cricketworldcup) June 8, 2019
10:30 BST
📍 Cardiff
#️⃣ #ENGvBAN#WeAreEngland #RiseOfTheTigers
Which side will get their second win of #CWC19 today? pic.twitter.com/aPbv48ij7M
ತವರಿನಲ್ಲಿ ವಿಶ್ವಕಪ್ ನಡೆಯುತ್ತಿರುವುದರಿಂದ ಇಂಗ್ಲೆಂಡ್ ತಂಡವೇ ಈ ಪಂದ್ಯದಲ್ಲಿ ಗೆಲ್ಲುವ ನೆಚ್ಚಿನ ತಂಡವಾಗಿದೆ. ಇಂಗ್ಲೆಂಡ್ ತನ್ನ ಮೊದಲ ಪಂದ್ಯದಲ್ಲಿ 104 ರನ್ಗಳಿಂದ ದ.ಆಫ್ರಿಕಾ ವಿರುದ್ಧ ಗೆಲುವು ಸಾಧಿಸಿ, 2ನೇ ಪಂದ್ಯದಲ್ಲಿ ಪಾಕ್ ವಿರುದ್ಧ 14 ರನ್ಗಳ ಸೋಲನುಭವಿಸಿತ್ತು. ಈ ಮೂರನೆ ಪಂದ್ಯದಲ್ಲಿ 2 ನೇ ಗೆಲುವಿಗಾಗಿ ಉತ್ತಮ ಪೈಪೋಟಿ ನಡೆಸಲಿದೆ.
ಬ್ಯಾರ್ಸ್ಟೋವ್, ಜಾಸನ್ ರಾಯ್ ಹಾಗೂ ಜೋ ರೂಟ್ ಆರಂಭದಲ್ಲಿ ಅಬ್ಬರಿಸಿದರೆ, ಮಾರ್ಗನ್, ಬೆನ್ಸ್ಟೋಕ್ಸ್ ಹಾಗೂ ಬಟ್ಲರ್ ಉತ್ತಮ ಬ್ಯಾಟಿಂಗ್ ಟಚ್ನಲ್ಲಿದ್ದಾರೆ. ಬೌಲಿಂಗ್ನಲ್ಲಿ ವೋಕ್ಸ್, ಮಾರ್ಕ್ವುಡ್, ಜೋಫ್ರಾ ಆರ್ಚರ್ರಂತ ಮಾರಕ ವೇಗಿಗಳ ಜೊತೆಗೆ ಮೊಯಿನ್ ಅಲಿ, ಆದಿಲ್ ರಶೀದ್ರಂತಹ ಸ್ಪಿನ್ ಬೌಲಿಂಗ್ ಬಲ ಇರುವುದರಿಂದ ಇಂಗ್ಲೆಂಡ್ ತಂಡ ಬಾಂಗ್ಲಾ ತಂಡಕ್ಕಿಂತ ಬಲಿಷ್ಠವಾಗಿದೆ.
ಇನ್ನು ಬಾಂಗ್ಲಾದೇಶ ತನ್ನ ಮೊದಲ ಪಂದ್ಯದಲ್ಲಿ ಬಲಿಷ್ಠ ದ.ಆಫ್ರಿಕಾ ತಂಡಕ್ಕೆ ಶಾಕ್ ನೀಡಿತ್ತು. ನಂತರ ಕಿವೀಸ್ ವಿರುದ್ಧ ಉತ್ತಮ ಪೈಪೋಟಿ ನೀಡಿ 2 ವಿಕೆಟ್ಗಳಿಂದ ಸೋಲನುಭವಿಸಿತ್ತು.
ಆರಂಭಿಕರಿಂದ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಆದರೆ, ಮಧ್ಯಮಕ್ರಮಾಂಕದ ಬ್ಯಾಟ್ಸ್ಮನ್ಗಳ ಪ್ರದರ್ಶನದಿಂದ ಬಾಂಗ್ಲಾ ತಂಡ ಗೆಲವು ಕಂಡಿತ್ತು. ತಮೀಮ್, ಸರ್ಕಾರ್ ಉತ್ತಮ ಆರಂಭ ಕಂಡರೂ, ದೊಡ್ಡ ಮೊತ್ತ ಪೇರಿಸುವಲ್ಲಿ ವಿಫಲರಾಗುತ್ತಿದ್ದಾರೆ. ಶಕಿಭ್ ಆಲ್ರೌಂಡರ್ ವಿಭಾಗದಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ, ರಹೀಮ್ ಕೂಡ ಬ್ಯಾಟಿಂಗ್ನಲ್ಲಿ ಉತ್ತಮ ಟಚ್ನಲ್ಲಿದ್ದಾರೆ. ಇನ್ನು ಬೌಲಿಂಗ್ನಲ್ಲಿ ಬಾಂಗ್ಲಾದೇಶ ತಂಡ ಉತ್ತಮ ಲಯದಲ್ಲಿದ್ದಾರೆ.
-
Bangladesh had defeated England by 15 runs in the 2015 World Cup! Will we see a repeat in #CWC19 today?#RiseOfTheTigers #WeAreEngland #ENGvBAN pic.twitter.com/mijTAFgMTR
— ICC (@ICC) June 8, 2019 " class="align-text-top noRightClick twitterSection" data="
">Bangladesh had defeated England by 15 runs in the 2015 World Cup! Will we see a repeat in #CWC19 today?#RiseOfTheTigers #WeAreEngland #ENGvBAN pic.twitter.com/mijTAFgMTR
— ICC (@ICC) June 8, 2019Bangladesh had defeated England by 15 runs in the 2015 World Cup! Will we see a repeat in #CWC19 today?#RiseOfTheTigers #WeAreEngland #ENGvBAN pic.twitter.com/mijTAFgMTR
— ICC (@ICC) June 8, 2019
ಮುಖಾಮುಖಿ:
ಎರಡು ತಂಡಗಳು ಮೂರು ಬಾರಿ ವಿಶ್ವಕಪ್ನಲ್ಲಿ ಮುಖಾಮುಖಿಯಾಗಿದ್ದು, ಇಂಗ್ಲೆಂಡ್ ಒಮ್ಮೆ, ಬಾಂಗ್ಲಾದೇಶ 2 ಬಾರಿ ಜಯಸಾಧಿಸಿದೆ.
ಏಕದಿನದಲ್ಲಿ ಮುಖಾಮುಖಿ
ಏಕದಿನ ಕ್ರಿಕೆಟ್ ಎರಡು ತಂಡಗಳು 20 ಬಾರಿ ಮುಖಾಮುಖಿಯಾಗಿದ್ದು, ಇಂಗ್ಲೆಂಡ್ 16 ಹಾಗೂ ಬಾಂಗ್ಲಾದೇಶ 4 ಪಂದ್ಯಗಳಲ್ಲಿ ಜಯ ಸಾಧಿಸಿದೆ.
ತಂಡಗಳು:
ಇಂಗ್ಲೆಂಡ್: ಇಯಾನ್ ಮಾರ್ಗನ್(ನಾಯಕ), ಜಾಸನ್ ರಾಯ್, ಜಾನಿ ಬೈರ್ಸ್ಟೋವ್, ಜೋ ರೂಟ್, ಬೆನ್ ಸ್ಟೋಕ್ಸ್, ಜಾಸ್ ಬಟ್ಲರ್, ಕ್ರಿಸ್ ವೋಕ್ಸ್, ಲೈಮ್ ಫ್ಲಂಕೇಟ್, ಜೋಫ್ರಾ ಆರ್ಚರ್, ಆದಿಲ್ ರಶೀದ್, ಮಾರ್ಕ್ ವುಡ್
ಬಾಂಗ್ಲಾದೇಶ : ಮುಶ್ರಫೆ ಮೊರ್ತಾಜಾ (ನಾಯಕ), ಮಹಮದ್ ಅಬ್ದುಲ್ಲಾ , ಮೆಹಿದಿ ಹಸನ್, ಮೊಹಮ್ಮದ್ ಮಿಥುನ್ , ಮೊಹಮ್ಮದ್ ಸೈಫುದ್ದಿನ್, ಮೊಸಾದಿಕ್ ಹುಸೇನ್, ಮುಷ್ಫಿಕರ್ ರಹೀಂ, ಮುಸ್ತಫಿಜುರ್ ರಹಮಾನ್, ಶಕಿಬ್ ಅಲ್ ಹಸನ್, ಸೌಮ್ಯ ಸರ್ಕಾರ್, ತಮೀಮ್ ಇಕ್ಬಾಲ್.