ETV Bharat / sports

ವಿಶ್ವಕಪ್​ ಸೋಲಿನ ಹಿನ್ನೆಲೆ... ಏಕದಿನ ನಾಯಕತ್ವದಿಂದ ಕೊಹ್ಲಿ ತಲೆದಂಡ?

author img

By

Published : Jul 16, 2019, 4:03 AM IST

ಸೆಮಿಫೈನಲ್​​ನಲ್ಲಿ ಕಳಪೆ ಬ್ಯಾಟಿಂಗ್​​ ಹೊರತಾಗಿ  ಆರಂಭಿಕ ಆಟಗಾರ ಶಿಖರ್ ಧವನ್ ಗಾಯ, ಮಧ್ಯಮ ಕ್ರಮಾಂಕದ ವೈಫಲ್ಯ, ಯೋಜನೆಯನ್ನು ಕಾರ್ಯಗತಗೊಳಿಸುವಲ್ಲಿ ಸೋಲು ಹಾಗೂ ನಾಲ್ಕನೇ ಕ್ರಮಾಂಕದ ಸಮಸ್ಯೆಯೇ ಟೀಮ್ ಇಂಡಿಯಾವನ್ನು ವಿಶ್ವಕಪ್​ನಲ್ಲಿ ಬಹುವಾಗಿ ಕಾಡಿದೆ

ಕೊಹ್ಲಿ

ಹೈದರಾಬಾದ್: ವಿಶ್ವಕಪ್​ ಟೂರ್ನಿಯ ಬಲಿಷ್ಠ ತಂಡ ಟೀಮ್ ಇಂಡಿಯಾ ಸೆಮಿಫೈನಲ್​ನಲ್ಲಿ ಮುಗ್ಗರಿಸಿದ್ದು, ಕೋಟ್ಯಂತರ ಭಾರತೀಯ ಅಭಿಮಾನಿಗಳ ಕಣ್ಣೀರಿಗೆ ಕಾರಣವಾಗಿದ್ದರೆ, ಅತ್ತ ನಾಯಕತ್ವ ಬದಲಾವಣೆ ಮಾತುಗಳು ಕೇಳಿಬರುತ್ತಿವೆ.

ಸೆಮಿಫೈನಲ್​​ನಲ್ಲಿ ಕಳಪೆ ಬ್ಯಾಟಿಂಗ್​​ ಹೊರತಾಗಿ ಆರಂಭಿಕ ಆಟಗಾರ ಶಿಖರ್ ಧವನ್ ಗಾಯ, ಮಧ್ಯಮ ಕ್ರಮಾಂಕದ ವೈಫಲ್ಯ, ಯೋಜನೆಯನ್ನು ಕಾರ್ಯಗತಗೊಳಿಸುವಲ್ಲಿ ಸೋಲು ಹಾಗೂ ನಾಲ್ಕನೇ ಕ್ರಮಾಂಕದ ಸಮಸ್ಯೆಯೇ ಟೀಮ್ ಇಂಡಿಯಾವನ್ನು ವಿಶ್ವಕಪ್​ನಲ್ಲಿ ಬಹುವಾಗಿ ಕಾಡಿದೆ. ಇವೆಲ್ಲದರ ನಡುವೆ ಕಪ್ತಾನ ಕೊಹ್ಲಿಯ ಸ್ಥಾನಕ್ಕೆ ರೋಹಿತ್ ಶರ್ಮಾರನ್ನು ಕರೆತರುವ ಸಾಧ್ಯತೆ ಹೆಚ್ಚಾಗಿದೆ.

2019ರ ವಿಶ್ವಕಪ್ ಭಾರತದ ಲಭಿಸದಿರುವುದು ಮುಗಿದ ಅಧ್ಯಾಯ, ಸದ್ಯ ಟೀಮ್ ಇಂಡಿಯಾ ಮುಂದಿನ ವಿಶ್ವಕಪ್ ತಯಾರಿ ಆರಂಭಿಸಬೇಕಿದ್ದು, ಈ ನಿಟ್ಟಿನಲ್ಲಿ ನಿಗದಿತ ಓವರ್​ ಮಾದರಿಗೆ ರೋಹಿತ್​ ಶರ್ಮಾರನ್ನು ನಾಯಕನನ್ನಾಗಿ ಮಾಡುವುದು ಸೂಕ್ತ. ವಿರಾಟ್ ಕೊಹ್ಲಿ ಟೆಸ್ಟ್​ನಲ್ಲಿ ತಂಡವನ್ನು ಮುನ್ನಡೆಸಲಿ ಎಂದು ಬಿಸಿಸಿಐನ ಅಧಿಕಾರಿಯೋರ್ವರು ಹೇಳಿದ್ದಾರೆ.

ಐಸಿಸಿ ರ‍್ಯಾಂಕಿಂಗ್: ಕೊಹ್ಲಿ ಸ್ಥಾನಕ್ಕೆ ಎದುರಾಗಿದೆ ಕುತ್ತು.. 'ವಿಶ್ವ' ವಿಜೇತ ಇಂಗ್ಲೆಂಡ್​​ಗೆ ಅಗ್ರಸ್ಥಾನ

2018ರಲ್ಲಿ ವಿರಾಟ್ ಕೊಹ್ಲಿ ಬದಲಿಗೆ ಹಂಗಾಮಿ ನಾಯಕನಾಗಿದ್ದ ರೋಹಿತ್ ಶರ್ಮಾ ತಂಡವನ್ನು ಚಾಂಪಿಯನ್​ ಆಗಿ ಮಾಡಿದ್ದರು. ಅದೇ ವರ್ಷ ನಿಧಾಸ್ ಟ್ರೋಫಿಯಲ್ಲೂ ಹಿಟ್​ಮ್ಯಾನ್​​ ಖ್ಯಾತಿಯ ರೋಹಿತ್​ ತಂಡದ ಹೊಣೆಯನ್ನು ಹೊತ್ತಿದ್ದಲ್ಲದೆ ಮತ್ತೊಂದು ಬಾರಿ ಚಾಂಪಿಯನ್ ಆಗಿ ಮಾಡಿದ್ದರು. ಇದೇ ವೇಳೆ ರೋಹಿತ್​ ಶರ್ಮಾರನ್ನು ಏಕದಿನ ತಂಡಕ್ಕೆ ನಾಯಕನನ್ನಾಗಿ ಮಾಡಿದರೆ ಉತ್ತಮ ಎನ್ನುವ ಮಾತು ಕೇಳಿ ಬಂದಿತ್ತು. ಇದೀಗ ವಿಶ್ವಕಪ್​​ ಸೋಲಿನ ಬಳಿಕ ಈ ಮಾತಿಗೆ ಮತ್ತಷ್ಟು ಬಲ ಬಂದಿದೆ.

virat
ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ

ಕೊಹ್ಲಿ-ರೋಹಿತ್ ನಡುವೆ ಭಿನ್ನಾಭಿಪ್ರಾಯ...?

ನಾಯಕನ ಬದಲಾವಣೆಯ ಜೊತೆಯಲ್ಲೇ ಇದೇ ಇಬ್ಬರು ಆಟಗಾರರ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವ ಮಾತುಗಳು ಬಿಸಿಸಿಐ ಅಧಿಕಾರಿಗಳ ಕಿವಿಗೆ ಬಿದ್ದಿದೆ. ಇದೇ ವಿಚಾರ ಮುಂದಿನ ಬೋರ್ಡ್​ ಮೀಟಿಂಗ್​​ನಲ್ಲಿ ಚರ್ಚೆಗೆ ಬರಲಿದೆ ಎನ್ನಲಾಗಿದೆ. ಈ ಚರ್ಚೆಯಲ್ಲಿ ನಾಯಕತ್ವ ಬದಲಾವಣೆಯ ಬಗ್ಗೆ ಅಂತಿಮ ನಿರ್ಧಾರ ಹೊರ ಬೀಳುವ ಸಾಧ್ಯತೆ ಇದೆ.

Intro:Body:

ಜಗ

Conclusion:

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.