ETV Bharat / sports

ಎಬಿಡಿ​ ಬರ್ತೀನಿ ಅಂದ್ರು ಬೇಡ ಎಂದ ಮ್ಯಾನೇಜ್​ಮೆಂಟ್​! ಹರಿಣಗಳ ಸ್ಥಿತಿ ಏನಾಯ್ತು? - undefined

ನಿವೃತ್ತಿ ಘೋಷಣೆ ಬಳಿಕ ಎಬಿಡಿ ವಿಲಿಯರ್ಸ್​, ವಿಶ್ವಕಪ್​ ಟೂರ್ನಿ ಆಡುವ ಇಂಗಿತ ವ್ಯಕ್ತಪಡಿಸಿದ್ರೂ ಟೀಂ​ ಮ್ಯಾನೇಜ್​ಮೆಂಟ್​ ನಿರಾಕರಿಸಿತ್ತು. ಆದರೀಗ..

ಎಬಿ ಡಿ ವಿಲಿಯರ್ಸ್
author img

By

Published : Jun 6, 2019, 5:44 PM IST

ಇಂಗ್ಲೆಂಡ್​: ಅಂತರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಣೆ ಮಾಡಿದ್ದ ದಕ್ಷಿಣ ಆಫ್ರಿಕಾದ ಸ್ಪೋಟಕ ಬ್ಯಾಟ್ಸ್​ಮನ್​ ಎಬಿಡಿ ವಿಲಿಯರ್ಸ್​, ವಿಶ್ವಕಪ್​ ಟೂರ್ನಿ ಆಡುವ ಇಂಗಿತ ವ್ಯಕ್ತಪಡಿಸಿದ್ರೂ ದಕ್ಷಿಣ ಆಫ್ರಿಕಾ ಟೀಂ​ ಮ್ಯಾನೇಜ್​ಮೆಂಟ್​ ನಿರಾಕರಿಸಿತ್ತು.

ಅಂತರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಬಳಿಕ ಎಬಿಡಿ ಐಪಿಎ​ಲ್‌ನಲ್ಲಿ ಪಾಲ್ಗೊಂಡು ಉತ್ತಮ ಪ್ರದರ್ಶನ ನೀಡುತ್ತಿದ್ದರು. ವಿಶ್ವಕಪ್​ ಟೂರ್ನಿ ಆಡುವ ಇಂಗಿತ ಹೊಂದಿದ್ದ ಅವರು,​ ದಕ್ಷಿಣ ಆಫ್ರಿಕಾ ತಂಡದ ನಾಯಕ ಫಾಫ್​ ಡು ಪ್ಲೆಸಿಸ್​, ಕೋಚ್​ ಒಟ್ಟೀಸ್ ಗಿಬ್ಸ​ನ್​ ಮತ್ತು ಟೀಂ ಮ್ಯಾನೇಜ್​ಮೆಂಟ್​ನ ಸಮನ್ವಯ ಅಧಿಕಾರಿ ಲಿಂಡಾ ಜೊಂಡಿಯನ್ನು ಭೇಟಿಯಾಗಿ ತಂಡಕ್ಕೆ ಆಯ್ಕೆ ಮಾಡಿಕೊಳ್ಳುವಂತೆ ಕೇಳಿಕೊಂಡಿದ್ದರು.

MATCH
ಎಬಿ ಡಿ ವಿಲಿಯರ್ಸ್

ವಿಶ್ವಕಪ್​ ಟೂರ್ನಿಗೆ ದಕ್ಷಿಣ ಆಫ್ರಿಕಾ ತಂಡವನ್ನು ಘೋಷಣೆ ಮಾಡುವುದಕ್ಕೂ ಒಂದು ದಿನ ಮೊದಲು ವಿಲಿಯರ್ಸ್ ತನ್ನನ್ನು​ ಟೂರ್ನಿಗೆ ಸೆಲೆಕ್ಟ್​ ಮಾಡುವಂತೆ ಮನವಿ ಮಾಡಿದ್ದರು.ಆದ್ರೆ, ಎಬಿಡಿ​ ಮನವಿಯನ್ನ ಟೀಂ ಮ್ಯಾನೇಜ್​ಮೆಂಟ್​ ನಿರಾಕರಿಸಿದೆ ಎಂದು ರಾಷ್ಟ್ರೀಯ ಸುದ್ದಿಪತ್ರಿಕೆಯೊಂದು ವರದಿ ಮಾಡಿದೆ.

ವಿಲಿಯರ್ಸ್​ ಮನವಿ ನಿರಾಕರಿಸಲು 2 ಕಾರಣಗಳಿದ್ದು, ಒಂದು ವಿಲಿಯರ್ಸ್​ ನಿವೃತ್ತಿ ನಂತರ ಯಾವುದೇ ದೇಶಿ ಟೂರ್ನಿಯಲ್ಲಿ ಭಾಗವಹಿಸಿರಲಿಲ್ಲ. ಮತ್ತೊಂದು, ಸ್ಟಾರ್​ ಆಟಗಾರ ಎಂಬ ಕಾರಣಕ್ಕೆ ಆಯ್ಕೆ ಮಾಡಿದರೆ ಮತ್ತೊಬ್ಬ ಆಟಗಾರನಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ವರದಿ ಮಾಡಿದೆ.

ಸದ್ಯ ಆಡಿರುವ ಮೂರಕ್ಕೆ ಮೂರೂ ಪಂದ್ಯಗಳಲ್ಲಿ ಸೋಲು ಕಂಡಿರುವ ದಕ್ಷಿಣ ಆಫ್ರಿಕಾ ತಂಡದಲ್ಲಿ ವಿಲಿಯರ್ಸ್​ ಇದ್ದಿದ್ದರೆ ಅದರ ಫಲಿತಾಂಶ ಬಹುಶ: ಬೇರೆಯದ್ದೇ ಅಗುತ್ತಿತ್ತು ಎಂಬುದು ಅಭಿಮಾನಿಗಳ ಮಾತಾಗಿದೆ.

Intro:Body:

1 IMG-20190606-WA0006.jpg   

close

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.