ನವದೆಹಲಿ: ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ನಿಂದ ರಜೆ ಪಡೆದು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುವ ಮೂಲಕ ದೇಶಪ್ರೇಮ ಮೆರೆದಿದ್ದರು.
ಸ್ವಾತಂತ್ರ್ಯ ದಿನದ ಪ್ರಯುಕ್ತ ಲಡಾಕ್ನ ಸೈನಿಕರ ಆಸ್ಪತ್ರೆಗೆ ತೆರಳಿ ಸೈನಿಕರೊಂದಿಗೆ ಅರ್ಥಪೂರ್ಣ ಸಮಯ ಕಳೆಯುತ್ತಿದ್ದಾರೆ. ಇತ್ತ ಧೋನಿಯ ಮಗಳು ತನ್ನ ಶಾಲೆಯ 73 ನೇ ಸ್ವಾಂತಂತ್ರ್ಯ ದಿನಾಚಾರಣೆ ವೇಳೆ ಝಾನ್ಸಿರಾಣಿ ಲಕ್ಷ್ಮಿಬಾಯಿ ಅವರ ವೇಷಭೂಷಣ ತೊಟ್ಟು ನೃತ್ಯ ಮಾಡುವ ಮೂಲಕ ಅಪ್ಪನಂತೆ ತಾನೂ ಕೂಡ ದೇಶಪ್ರೇಮಿ ಎಂಬುದನ್ನು ಸಾಬೀತು ಮಾಡಿದ್ದಾಳೆ. ಈ ವಿಡೀಯೋ ಸಾಮಾಜಿಕ ಜಾಲಾತಾಣದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.
- " class="align-text-top noRightClick twitterSection" data="
">
ಧೋನಿಯಂತೆ ಇನ್ಸ್ಟಾಗ್ರಾಂನ್ಲಲಿ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿಕೊಂಡಿರುವ ಜೀವಾ ಸ್ವಾತಂತ್ರ್ಯ ಹೋರಾಟಗಾರರ ವೇಷ-ಭೂಷಣದಲ್ಲಿ ಇತರ ಮಕ್ಕಳೊಂದಿಗೆ ಸ್ವಾಂತಂತ್ರ್ಯ ದಿನದದಂದು ನೃತ್ಯ ಮಾಡಿದ್ದಾರೆ. ಈ ವಿಡೀಯೋ ಸದ್ಯ ಸಾಮಾಜಿಕ ಜಾಲಾತಣಾದಲ್ಲಿ ವೈರಲ್ ಆಗುತ್ತಿದೆ.
- " class="align-text-top noRightClick twitterSection" data="
">