ನಾಗ್ಪುರ್: ಬಾಂಗ್ಲಾ ವಿರುದ್ಧ ನಾಗ್ಪುರ್ನಲ್ಲಿ ನಡೆದ ಕೊನೆ ಟಿ-20 ಪಂದ್ಯದಲ್ಲಿ ಯಂಗ್ ಇಂಡಿಯಾ ಅದ್ಭುತ ಪ್ರದರ್ಶನ ಮೂಲಕ ಮತ್ತೊಂದು ಸರಣಿ ಕೈವಶ ಮಾಡಿಕೊಂಡಿದೆ. ಬ್ಯಾಟಿಂಗ್ನಲ್ಲಿ ಶ್ರೇಯಸ್ ಅಯ್ಯರ್,ರಾಹುಲ್ ಅಬ್ಬರಿಸಿದ್ರೆ, ಬೌಲಿಂಗ್ನಲ್ಲಿ ದೀಪಕ್ ಚಹಾರ್, ಶಿವಂ ದುಬೆ ಮೂಡಿ ಮಾಡಿದ್ದಾರೆ.
3.2 ಓವರ್ ಎಸೆದ ದೀಪಕ್ ಚಹಾರ್ ಕೇವಲ 7 ರನ್ ನೀಡಿ ಪ್ರಮುಖ 6 ವಿಕೆಟ್ ಪಡೆದುಕೊಂಡರೆ, ಬ್ಯಾಟಿಂಗ್ನಲ್ಲಿ ಶ್ರೇಯಸ್ ಅಯ್ಯರ್ ಕೇವಲ 33 ಎಸೆತಗಳಲ್ಲಿ 5 ಸಿಕ್ಸರ್, 3 ಬೌಂಡರಿ ಸೇರಿ 62ರನ್ಗಳಿಸಿದರು. ಇನ್ನು 15ನೇ ಓವರ್ನ ಮೊದಲ ಮೂರು ಎಸೆತ ಸಿಕ್ಸರ್ ಸಿಡಿಸಿ ಮುಂಚಿರುವ ಅಯ್ಯರ್ ಒಂದೇ ಓವರ್ನ ಎಲ್ಲ ಎಸೆತ ಸಿಕ್ಸರ್ ಗೆರೆ ದಾಟಿಸಲು ನಿರ್ಧರಿಸಿದ್ದ ಪ್ಲಾನ್ ಬಿಚ್ಚಿಟ್ಟಿದ್ದಾರೆ.
- Chahal TV with Hat-trick heroes Shreyas Iyer and Deepak Chahar https://www.bcci.tv/videos/137119/chahal-tv-with-hat-trick-heroes-shreyas-iyer-and-deepak-chahar via @bcci
ಪಂದ್ಯ ಮುಕ್ತಾಯಗೊಂಡ ಬಳಿಕ ಸ್ಪಿನ್ನರ್ ಯಜುವೇಂದ್ರ ಚಹಾಲ್ ಜತೆ ಚಹಾಲ್ ಟಿವಿಯಲ್ಲಿ ಮಾತನಾಡಿರುವ ಶ್ರೇಯಸ್ ಹಾಗೂ ದೀಪಕ್ ಚಹಾರ್ ತಮ್ಮ ಮನದಾಳದ ಮಾತು ಹೊರಹಾಕಿದರು. ಈ ವೇಳೆ ಮಾತನಾಡಿರುವ ಚಹರ್ ಪಂದ್ಯವೊಂದರಲ್ಲಿ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡುತ್ತೇನೆ ಎಂಬ ಅಂದುಕೊಡರಲಿಲ್ಲ. ಆದರೆ ಈ ಪಂದ್ಯದಲ್ಲಿ ಆ ಸಾಧನೆ ಮಾಡಿದ್ದು ನಿಜಕ್ಕೂ ಹೆಮ್ಮೆ ಎಂದು ಅನಿಸುತ್ತಿದೆ ಎಂದರು.
ಇದೇ ವೇಳೆ ಮಾತನಾಡಿರುವ ಶ್ರೇಯಸ್ 15ನೇ ಓವರ್ನ ಎಲ್ಲ ಎಸೆತ ಸಿಕ್ಸರ್ ಗೆರೆ ದಾಟಿಸಲು ನಾನು ನಿರ್ಧರಿಸಿದೆ. ಅದೇ ರೀತಿಯಲ್ಲಿ ಮೊದಲ ಮೂರು ಎಸೆತ ಸಿಕ್ಸರ್ ಅಟ್ಟಿದ್ದು, ನಾಲ್ಕನೇ ಎಸೆತ ಹಾಕಿದ ಬೌಲರ್ ಸ್ವಲ್ಪ ಯಾರ್ಕರ್ ಹಾಕಿದ ಕಾರಣ ಅದನ್ನು ಸಿಕ್ಸರ್ಗೆ ಅಟ್ಟಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದರು. ಹಿಂದಿನ ಪಂದ್ಯದಲ್ಲೂ ರೋಹಿತ್ ಶರ್ಮಾ ಇದೇ ರೀತಿಯ ಪ್ಲಾನ್ ಹಾಕಿಕೊಂಡಿದ್ದರ ಬಗ್ಗೆ ಹೇಳಿದರು.