ETV Bharat / sports

ಅಬ್ಬರಿಸಲು ಇದು ಐಪಿಎಲ್​ ಅಲ್ಲ, ರಸೆಲ್​ ಕಟ್ಟಿ ಹಾಕುವುದು ನನಗೆ ಗೊತ್ತು: ಚಹಲ್​​ - ಟೀಂ ಇಂಡಿಯಾ

ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ ಸಿಕ್ಸರ್​ - ಬೌಂಡರಿಗಳ ಸುರಿಮಳೆ ಹರಿಸಿದ್ದ ವೆಸ್ಟ್​ ಇಂಡೀಸ್​ ದೈತ್ಯ ಆ್ಯಂಡ್ರೆ ರಸೆಲ್ ಅವರನ್ನ ಹೇಗೆ ಕಟ್ಟಿಹಾಕಬೇಕು ಎಂಬುದು ನನಗೆ ಗೊತ್ತಿದೆ ಎಂದು ಟೀಂ ಇಂಡಿಯಾ ಯುಜುವೇಂದ್ರ ಚಹಲ್​ ಹೇಳಿದ್ದಾರೆ.

ಚಹಲ್​,ರಸೆಲ್​
author img

By

Published : Jun 24, 2019, 4:24 PM IST

ಮ್ಯಾಂಚೆಸ್ಟರ್​​​: ಐಪಿಎಲ್​ನಲ್ಲಿ ಬೌಂಡರಿ, ಸಿಕ್ಸರ್​​​ಗಳ ಸುರಿಮಳೆ ಸುರಿಸಿದ್ದ ಆ್ಯಂಡ್ರೆ ರಸೆಲ್​ ತಮ್ಮ ಬಿರುಸಿನ ಆಟವನ್ನು ವಿಶ್ವಕಪ್​ನಲ್ಲೂ ಮುಂದುವರಿಸುತ್ತಾರೆಂಬ ಮುನ್ಸೂಚನೆ ನೀಡಿದ್ದರು. ಆದರೆ, ಆ ಗೇಮ್​ ಸದ್ಯ ಅವರಿಂದ ಮೂಡಿ ಬರುತ್ತಿಲ್ಲ. ಈ ಮಧ್ಯೆ ಟೀಂ ಇಂಡಿಯಾ ಸ್ಪಿನ್​ ಮಾಂತ್ರಿಕ ಯುಜುವೇಂದ್ರ ಚಹಲ್​ ಕೂಡ ಇದೇ ವಿಷಯವಾಗಿ ಮಾತನಾಡಿದ್ದಾರೆ.

ವಿಶ್ವಕಪ್​​ನಲ್ಲಿ ಬರುವ 27ರಂದು(ಗುರುವಾರ) ಭಾರತ-ವೆಸ್ಟ್​ ಇಂಡೀಸ್​ ತಂಡಗಳು ಮುಖಾಮುಖಿಯಾಗುತ್ತಿವೆ. ಈಗಾಗಲೇ ಸೋಲಿಲ್ಲದ ಸರದಾರನಾಗಿ ಮುನ್ನುಗುತ್ತಿರುವ ಕೊಹ್ಲಿ ಪಡೆ ಮತ್ತೊಂದು ಗೆಲುವಿನ ತವಕದಲ್ಲಿದೆ. ಪಂದ್ಯ ಆರಂಭಗೊಳ್ಳುವುದಕ್ಕೆ ಇನ್ನೂ ಮೂರು ದಿನಗಳ ಬಾಕಿ ಇರುವಾಗಲೇ ಯುಜುವೇಂದ್ರ ಚಹಲ್​​, ಎದುರಾಳಿ ತಂಡದ ಆಟಗಾರ ಆಂಡ್ರೆ ರಸೆಲ್​ಗೆ ಟಾಂಗ್​ ನೀಡಿದ್ದು, ಅಬ್ಬರಿಸಲು ಇದು ಐಪಿಎಲ್​ ಅಲ್ಲ. ಅವರ ಮೇಲೆ ಸದ್ಯ ತುಂಬಾ ಒತ್ತಡವಿದೆ. ಹೀಗಾಗಿ ಅವರ ವಿಕೆಟ್​ ಪಡೆದುಕೊಳ್ಳುವುದು ಹೇಗೆ ಎಂಬುದು ನನಗೆ ಗೊತ್ತಿದೆ ಎಂದಿದ್ದಾರೆ.

ಐಪಿಎಲ್​​ನಲ್ಲಿ ಆಡುವುದು ಹಾಗೂ ವಿಶ್ವಕಪ್​ನಲ್ಲಿ ಆಡುವುದು ತುಂಬಾ ವ್ಯತ್ಯಾಸವಿರುತ್ತದೆ. ಈಗಾಗಲೇ ಅನೇಕ ಪಂದ್ಯಗಳಲ್ಲಿ ಸೋಲು ಕಂಡಿರುವ ವೆಸ್ಟ್​ ಇಂಡೀಸ್​ ಗೆಲುವಿನ ಟ್ರ್ಯಾಕ್​ಗೆ ಮರಳುವುದು ಅಷ್ಟೊಂದು ಸುಲಭವಲ್ಲ. ಜತೆಗೆ ರಸೆಲ್​ ಬ್ಯಾಟಿಂಗ್​ ಫಾರ್ಮ್​​ನಲ್ಲಿ ಇಲ್ಲ ಎಂದು ತಿಳಿಸಿದ್ದಾರೆ.

ಪ್ರಸಕ್ತ ವರ್ಷದ ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ ಮಿಂಚಿದ್ದ ರಸೆಲ್​ ಕೇವಲ 14 ಪಂದ್ಯಗಳಿಂದ ಬರೋಬ್ಬರಿ 510ರನ್​ ಸಿಡಿಸಿದ್ದರು. ವಿಶೇಷವಾಗಿ 52 ಸಿಕ್ಸರ್​ ಹಾಗೂ 31 ಬೌಂಡರಿ ಬಾರಿಸಿದ್ದರು.

Intro:Body:

ಅಬ್ಬರಿಸಲು ಇದು ಐಪಿಎಲ್​ ಅಲ್ಲ, ರಸೆಲ್​ ಕಟ್ಟಿ ಹಾಕುವುದು ನನಗೆ ಗೊತ್ತು: ಚಹಲ್​​

ಮ್ಯಾಂಚೆಸ್ಟರ್​​​: ಐಪಿಎಲ್​ನಲ್ಲಿ ಬೌಂಡರಿ, ಸಿಕ್ಸರ್​ರಗಳ ಸುರಿಮಳೆ ಸುರಿಸಿದ್ದ ಆ್ಯಂಡ್ರೈ ರಸೆಲ್​ ತಮ್ಮ ಬಿರುಸಿನ ಆಟವನ್ನು ವಿಶ್ವಕಪ್​ನಲ್ಲೂ ಮುಂದುವರಿಸುತ್ತಾರೆಂಬ ಮುನ್ಸೂಚನೆ ನೀಡಿದ್ದರು. ಆದರೆ ಆ ಗೇಮ್​ ಸದ್ಯ ಅವರಿಂದ ಮೂಡಿ ಬರುತ್ತಿಲ್ಲ. ಇದರ ಮಧ್ಯೆ ಟೀಂ ಇಂಡಿಯಾ ಸ್ಪಿನ್​ ಮಾಂತ್ರಿಕ ಯಜುವೇಂದ್ರ ಚಹಲ್​ ಕೂಡ ಇದೇ ವಿಷಯವಾಗಿ ಮಾತನಾಡಿದ್ದಾರೆ. 

ವಿಶ್ವಕಪ್​​ನಲ್ಲಿ ಬರುವ 27ರಂದು(ಗುರುವಾರ) ಭಾರತ-ವೆಸ್ಟ್​ ಇಂಡೀಸ್​ ತಂಡಗಳು ಮುಖಾಮುಖಿಯಾಗುತ್ತಿವೆ. ಈಗಾಗಲೇ ಸೋಲಿಲ್ಲದ ಸರದಾರನಾಗಿ ಮುನ್ನುಗುತ್ತಿರುವ ಕೊಹ್ಲಿ ಪಡೆ ಮತ್ತೊಂದು ಗೆಲುವಿನ ತವಕದಲ್ಲಿದೆ. ಪಂದ್ಯ ಆರಂಭಗೊಳ್ಳುವುದಕ್ಕೂ ಇನ್ನು ಮೂರು ದಿನಗಳ ಬಾಕಿ ಇರುವಾಗಲೇ ಯಜುವೇಂದ್ರ ಚಹಲ್​​, ಎದುರಾಳಿ ತಂಡದ ಆಟಗಾರ ಆಂಡ್ರ್ಯೊ ರಸೆಲ್​ಗೆ ಟಾಂಗ್​ ನೀಡಿದ್ದು, ಅಬ್ಬರಿಸಲು ಇದು ಐಪಿಎಲ್​ ಅಲ್ಲ. ಅವರ ಮೇಲೆ ಸದ್ಯ ತುಂಬಾ ಒತ್ತಡವಿದೆ. ಹೀಗಾಗಿ ಅವರ ವಿಕೆಟ್​ ಪಡೆದುಕೊಳ್ಳುವುದು ಹೇಗೆ ಎಂಬುದು ನನಗೆ ಗೊತ್ತಿದೆ ಎಂದಿದ್ದಾರೆ. 

ಐಪಿಎಲ್​​ನಲ್ಲಿ ಆಡುವುದು ಹಾಗೂ ವಿಶ್ವಕಪ್​ನಲ್ಲಿ ಆಡುವುದು ತುಂಬಾ ವ್ಯತ್ಯಾಸವಿರುತ್ತದೆ. ಈಗಾಗಲೇ ಅನೇಕ ಪಂದ್ಯಗಳಲ್ಲಿ ಸೋಲು ಕಂಡಿರುವ ವೆಸ್ಟ್​ ಇಂಡೀಸ್​ ಗೆಲುವಿನ ಟ್ರ್ಯಾಕ್​ಗೆ ಮರಳುವುದು ಅಷ್ಟೊಂದು ಸುಲಭವಲ್ಲ. ಜತೆಗೆ ರಸೆಲ್​ ಬ್ಯಾಟಿಂಗ್​ ಫಾರ್ಮ್​​ನಲ್ಲಿ ಇಲ್ಲ ಎಂದು ತಿಳಿಸಿದ್ದಾರೆ. 

ಪ್ರಸಕ್ತ ವರ್ಷದ ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ ಮಿಂಚಿದ್ದ ರಸೆಲ್​ ಕೇವಲ 14 ಪಂದ್ಯಗಳಿಂದ ಬರೋಬ್ಬರಿ 510ರನ್​ ಸಿಡಿಸಿದ್ದರು. ವಿಶೇಷವಾಗಿ 52 ಸಿಕ್ಸರ್​ ಹಾಗೂ 31 ಬೌಂಡರಿ ಬಾರಿಸಿದ್ದರು. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.