ETV Bharat / sports

ಭಾರತದ ಸಾರ್ವಕಾಲಿಕ ಕ್ರಿಕೆಟಿಗನ ಆಯ್ಕೆ ಮಾಡಿದ ಯಜುವೇಂದ್ರ ಚಹಾಲ್

ಮಹಿ ಭಾಯ್​ ಭಾರತ ಸೃಷ್ಠಿಸಿರುವ ಕ್ರಿಕೆಟಿಗರಲ್ಲಿ ಅತ್ಯುತ್ತಮ ಹಾಗೂ ಶ್ರೇಷ್ಠ ಕ್ರಿಕೆಟಿಗ. ಪಂದ್ಯ ನಡೆಯುವ ವೇಳೆ ಅವರು ನನಗೆ ಮತ್ತು ಕುಲ್ದೀಪ್​ಗೆ ಸಾಕಷ್ಟು ಸಹಾಯ ಮಾಡಿದ್ದಾರೆ ಎಂದು ಚಹಾಲ್​ ಹೇಳಿದ್ದಾರೆ.

ಯಜುವೇಂದ್ರ ಚಹಾಲ್
ಯಜುವೇಂದ್ರ ಚಹಾಲ್
author img

By

Published : Jul 16, 2020, 7:47 PM IST

ನವದೆಹಲಿ: ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ಭಾರತ ತಂಡದ ಶ್ರೇಷ್ಠ ಕ್ರಿಕೆಟಿಗ ಎಂದು ಟೀಮ್​ ಇಂಡಿಯಾ ಲೆಗ್ ಸ್ಪಿನ್ನರ್​ ಯಜುವೇಂದ್ರ ಚಹಾಲ್​ ತಿಳಿಸಿದ್ದಾರೆ. ಧೋನಿ ತಮಗೆ ಮೈದಾನದ ಹೊರಗೆ ಮತ್ತು ಒಳಗೆ ಸಾಕಷ್ಟು ಬಾರಿ ಸಹಾಯ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.

ಯಜುವೇಂದ್ರ ಚಹಾಲ್
ಯಜುವೇಂದ್ರ ಚಹಾಲ್ ಮತ್ತು ಧೋನಿ

ಮಹಿ ಭಾಯ್​ ಭಾರತ ಸೃಷ್ಠಿಸಿರುವ ಕ್ರಿಕೆಟಿಗರಲ್ಲಿ ಅತ್ಯುತ್ತಮ ಹಾಗೂ ಶ್ರೇಷ್ಠ ಕ್ರಿಕೆಟಿಗ. ಪಂದ್ಯ ನಡೆಯುವ ವೇಳೆ ಅವರು ನನಗೆ ಮತ್ತು ಕುಲ್ದೀಪ್​ಗೆ ಸಾಕಷ್ಟು ಸಹಾಯ ಮಾಡಿದ್ದಾರೆ. ಕೆಲವೊಮ್ಮ ಬ್ಯಾಟ್ಸ್​ಮನ್​ಗಳ ಬೌಂಡರಿ, ಸಿಕ್ಸರ್​ ಬಾರಿಸಿದಾಗ ಮಹಿ ಬಾಯ್​ ನನ್ನ ಬಳಿ ಹೆಗಲ ಮೆಲೆ ಕೈಯಿಟ್ಟು ‘ ಇವನಿಗೆ ಗೂಗ್ಲಿ ಮಾಡು, ಆಡುವುದಕ್ಕೆ ಆಗುವುದಿಲ್ಲ‘ (isko googly daal, ye nahi khel payega) ಎಂದು ಸಲಹೆ ನೀಡುತ್ತಿದ್ದರು. ಅವರು ನೀಡಿದ ಸಲಹೆ ತಂಡಕ್ಕೆ ಸದಾ ನೆರವಾಗುತ್ತಿತ್ತು ಎಂದು ಚಹಾಲ್​ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಯಜುವೇಂದ್ರ ಚಹಾಲ್
ಯಜುವೇಂದ್ರ ಚಹಾಲ್ ಸಂಭ್ರಮ

ದಕ್ಷಿಣ ಆಫ್ರಿಕಾದಲ್ಲಿ ನಾನು ಮೊದಲ ಬಾರಿಗೆ 5 ವಿಕೆಟ್ ತೆಗೆದುಕೊಂಡಿದ್ದೆ. ಆ ಸಂದರ್ಭದಲ್ಲಿ ಜೆ.ಪಿ.ಡುಮಿನಿ ಬ್ಯಾಟಿಂಗ್​ ನಡೆಸುತ್ತಿದ್ದರು. ಮಹಿ ಭಾಯ್​ ನನ್ನ ಬಳಿ ಬಂದು ‘ ಇವನಿಗೆ ಸ್ಟಂಪ್​ ಟು ಸ್ಟಂಪ್ ಬೌಲಿಂಗ್​ ಮಾಡು‘ ಎಂದು ಹೇಳಿದ್ದರು. ನಾನು ಹಾಗೆಯೇ ಮಾಡಿದೆ, ಡುಮಿನಿ ಸ್ವೀಪ್​ ಮಾಡಲು ಹೋಗಿ ಎಲ್​ಬಿಡಬ್ಲ್ಯೂ ಆದರು.

ಇದೇ ರೀತಿ ನ್ಯೂಜಿಲ್ಯಾಂಡ್​ನಲ್ಲಿ ಲಾಥಮ್​ ನನಗೆ ಬೌಂಡರಿ ಸಿಡಿಸುವ ಮೂಲಕ ನನಗೆ ಬೇಸರ ತಂದಿದ್ದರು. ಆ ವೇಳೆ ಧೋನಿ ನಿನ್ನ ಲೈನ್​ ಚೇಂಜ್​ ಮಾಡಬೇಡ, ಸ್ಟಂಪ್​ ನೇರಕ್ಕೆ ಅವನ ಬಳಿ ಬಾಲ್​ ಪಿಚ್​ ಮಾಡು ಎಂದರು. ನಂತರದ ಎಸೆತದಲ್ಲಿ ಲಾಥಮ್​ ಔಟ್​ ಆದರು. ಇಂತಹ ಸಾಕಷ್ಟು ಉದಾಹರಣೆ ಸಿಗುತ್ತವೆ ಎಂದು ಚಹಾಲ್​ ನೆನಪಿಸಿಕೊಂಡರು.

ಧೋನಿ 2019ರ ವಿಶ್ವಕಪ್​ ಸೆಮಿಫೈನಲ್​ ನಂತರ ಕ್ರಿಕೆಟ್​ನಿಂದ ದೂರ ಉಳಿದಿದ್ದಾರೆ. ಕೊರೊನಾ ವೈರಸ್​ ಭೀತಿಯಿಂದ ಮುಂದೂಡಲ್ಪಟ್ಟಿರುವ ಐಪಿಎಲ್​ ಸೆಪ್ಟೆಂಬರ್​-ಅಕ್ಟೋಬರ್​ನಲ್ಲಿ ಆಯೋಜಿಸುವ ಸಾಧ್ಯತೆಯಿದ್ದು, ಧೋನಿ ಬ್ಯಾಟಿಂಗ್​ ನೋಡಲು ಸಾಕಷ್ಟು ಅಭಿಮಾನಿಗಳು ತುದಿಗಾಲಲ್ಲಿ ಕಾಯುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.