ETV Bharat / sports

ಆರಂಭಿಕನಾಗಿ ಕಣಕ್ಕಿಳಿಸುವಂತೆ ಕೊಹ್ಲಿಗೆ ಶಿಫಾರಸು ಮಾಡಿ:  ಅನುಷ್ಕಾಬಳಿ ಕೇಳಿಕೊಂಡ ಚಹಾಲ್​! - Yujuvendra chahal wants opening slat

ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ ಪತ್ನಿ ಹಾಗೂ ಬಾಲಿವುಡ್​ ಬೆಡಗಿ ಅನುಷ್ಕಾ ಶರ್ಮಾ ನಿನ್ನೆ ಕೊಹ್ಲಿ ಅವರನ್ನ ಅಭಿಮಾನಿಯಂತೆ 'ಏಯ್ ಕೊಹ್ಲಿ, ಚೌಕಾ ಮಾರ್​ ನಾ.. ಚಾಕಾ.. ಏಯ್​ ಕೊಹ್ಲಿ' ಎಂದು ಕೊಹ್ಲಿ ಮುಂದೆ ಜೋರಾಗಿ ಕೂಗುತ್ತಿರುವ ವಿಡಿಯೋ ಶೇರ್​ ಮಾಡಿಕೊಂಡಿದ್ದರು.

ಯಜುವೇಂದ್ರ ಚಹಲ್​
ಯಜುವೇಂದ್ರ ಚಹಲ್​
author img

By

Published : Apr 18, 2020, 4:29 PM IST

ನವದೆಹಲಿ: ಭಾರತ ತಂಡದ ಸ್ಪಿನ್​ ಬೌಲರ್​ ಚಹಾಲ್​ ತಮ್ಮನ್ನು ಆರಂಭಿಕನಾಗಿ ಕಣಕ್ಕಿಳಿಸುವಂತೆ ಕೊಹ್ಲಿಗೆ ಶಿಫಾರಸು ಮಾಡಿ ಎಂದು ಅನುಷ್ಕಾ ಶರ್ಮಾರಿಗೆ ಮನವಿ ಮಾಡಿಕೊಂಡಿದ್ದಾರೆ.

ಕೊರೊನಾ ಸಾಂಕ್ರಾಮಿಕ ರೋಗದಿಂದ ಇಡೀ ದೇಶವೇ ಲಾಕ್​ಡೌನ್​ನಲ್ಲಿ ಸಿಲುಕಿದ್ದು, ಕಳೆದ ಒಂದು ತಿಂಗಳಿಂದ ಯಾವುದೇ ಕ್ರಿಕೆಟ್ ಪಂದ್ಯಗಳು ನಡೆದಿಲ್ಲ, ಮುಂದಿನ ಕೆಲವು ತಿಂಗಳವರೆಗೆ ನಡೆಯುವುದೂ ಅನುಮಾನವಾಗಿದೆ.

ಯಜುವೇಂಧ್ರ ಚಹಲ್​
ಅನುಷ್ಕಾ ಶರ್ಮಾ

ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ ಪತ್ನಿ ಹಾಗೂ ಬಾಲಿವುಡ್​ ಬೆಡಗಿ ಅನುಷ್ಕಾ ಶರ್ಮಾ ನಿನ್ನೆ ಕೊಹ್ಲಿಯನ್ನು ಅಭಿಮಾನಿಯಂತೆ ಏಯ್ ಕೊಹ್ಲಿ, ಚೌಕಾ ಮಾರ್​ ನಾ.. ಚಾಕಾ.. ಏಯ್​ ಕೊಹ್ಲಿ ಎಂದು ಕೊಹ್ಲಿ ಮುಂದೆ ಜೋರಾಗಿ ಕೂಗುತ್ತಿರುವ ವಿಡಿಯೋ ಶೇರ್​ ಮಾಡಿಕೊಂಡಿದ್ದರು.

ವಿಡಿಯೋದ ಜೊತೆಗೆ, "ಕೊಹ್ಲಿ ತುಂಬಾ ಕ್ರಿಕೆಟ್​ ಮೈದಾನವನ್ನು ಮಿಸ್​ ಮಾಡಿಕೊಳ್ಳುತ್ತಿದ್ದಾರೆ ಎಂದೆನಿಸಿತು. ಏಕೆಂದರೆ ಮೈದಾನದಲ್ಲಿ ಲಕ್ಷಾಂತರ ಅಭಿಮಾನಿಗಳ ಪ್ರೀತಿ ಅವರಿಂದ ಸಿಗುತ್ತದೆ. ಅದರಲ್ಲೂ ಈ ರೀತಿಯ ವಿಶೇಷ ಅಭಿಮಾನಿಗಳನ್ನು ಕೂಡ ಮಿಸ್​ ಮಾಡಿಕೊಳ್ಳುತ್ತಾರೆ. ಅವರಂತೆ ನಟಿಸಿ ಅವರ ಅನುಭವವನ್ನು ಕೊಡುವ ಪ್ರಯತ್ನ ಮಾಡಿದ್ದೇನೆ" ಎಂದು ವಿಡಿಯೋಗೆ ಟ್ಯಾಗ್​ಲೈನ್ ಸಹ​ ಬರೆದುಕೊಂಡಿದ್ದರು.

ಈ ವಿಡಿಯೋಗೆ ಕಾಮೆಂಟ್ ಮಾಡಿರುವ ಯುಜವೇಂದ್ರ ಚಹಾಲ್​ ಮುಂದಿನ ಸಲ ನನಗೆ ಆರಂಭಿಕನಾಗಿ ಆಡಲು ಅವಕಾಶ ಕೊಡಲು ಕೊಹ್ಲಿಗೆ ಹೇಳಿ ಅತ್ತಿಗೆ ಎಂದು ಅನುಷ್ಕಾ ಶರ್ಮಾರನ್ನು ಕೇಳಿಕೊಂಡಿದ್ದಾರೆ.

ಈ ವಿಡಿಯೋಗೆ ಕರುಣ್​ ಜೊಹಾರ್, ರಣವೀರ್ ಸಿಂಗ್​, ಅರ್ಜುನ್ ಕಪೂರ್​, ಪೂಜಾ ಹೆಗ್ಡೆ, ಹೃತಿಕ್​ ರೋಷನ್​, ಕಾಜಲ್​ ಅಗರ್​ವಾಲ್​, ಸಾನಿಯಾ ಮಿರ್ಜಾ ಸೇರಿದಂತೆ ಹಲವಾರು ಸೆಲೆಬ್ರೆಟಿಗಳು ಕಾಮೆಂಟ್​ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.