ETV Bharat / sports

ಬುಮ್ರಾ, ಅಶ್ವಿನ್​ ದಾಖಲೆ ಬ್ರೇಕ್​ ಮಾಡಿದ ಯಜುವೇಂದ್ರ ಚಹಾಲ್!​

author img

By

Published : Nov 11, 2019, 3:36 PM IST

ಬಾಂಗ್ಲಾದೇಶದ ವಿರುದ್ಧ ನಡೆದ ಅಂತಿಮ ಪಂದ್ಯದಲ್ಲಿ ಎದುರಾಳಿ ನಾಯಕ ಮಹಮ್ಮದುಲ್ಲಾ ರಿಯಾದ್​ ವಿಕೆಟ್​ ಪಡೆಯುವ ಮೂಲಕ ವೇಗಿ ಜಸ್ಪ್ರೀತ್​ ಬುಮ್ರಾ ಹಾಗೂ ರವಿಚಂದ್ರನ್​ ಅಶ್ವಿನ್​ರನ್ನು ಹಿಂದಿಕ್ಕಿ ವೇಗವಾಗಿ 50 ವಿಕೆಟ್​ ಸಾಧನೆ ಮಾಡಿದರು.

Yuzvendra Chahal 50

ನಾಗ್ಪುರ: ಭಾರತ ತಂಡದ ಸೀಮಿತ ಓವರ್​ಗಳ ಕ್ರಿಕೆಟ್​ನ ಮುಂಚೂಣಿ ಸ್ಪಿನ್​ ಬೌಲರ್​ ಯಜುವೇಂದ್ರ ಚಹಲ್​ ವೇಗವಾಗಿ 50 ವಿಕೆಟ್​ ಪಡೆದ ಭಾರತೀಯ ಬೌಲರ್​ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ.

ಚಹಾಲ್​ಗೂ ಮುನ್ನ ಸ್ಪಿನ್ನರ್ ರವಿಚಂದ್ರನ್​ ಅಶ್ವಿನ್​(52), ವೇಗಿ ಜಸ್ಪ್ರೀತ್ ಬುಮ್ರಾ(51) ಟಿ20ಯಲ್ಲಿ 50 ವಿಕೆಟ್​ ​ಪಡೆದಿದ್ದರು. ಆದರೆ ಅಶ್ವಿನ್​ ಈ ಸಾಧನೆಗಾಗಿ 42 ಪಂದ್ಯಗಳನ್ನಾಡಿದ್ದಾರೆ. ಬುಮ್ರಾ 41 ಪಂದ್ಯಗಳನ್ನಾಡಿದ್ದರು. ಚಹಲ್​ 34 ಪಂದ್ಯಗಳಲ್ಲಿ 50 ವಿಕೆಟ್​ ಪಡೆಯುವ ಮೂಲಕ ವೇಗವಾಗಿ ಈ ಮೈಲಿಗಲ್ಲು ತಲುಪಿದ ಭಾರತೀಯ ಬೌಲರ್​ ಎಂಬ ಶ್ರೇಯಕ್ಕೆ ಪಾತ್ರರಾದರು.

ಇದಲ್ಲದೇ ಅಂತಾರಾಷ್ಟ್ರೀಯ ಟಿ20ಯಲ್ಲಿ ವೇಗವಾಗಿ 50 ವಿಕೆಟ್ ಪಡೆದ ವಿಶ್ವದ 5ನೇ ಬೌಲರ್​ ಎನಿಸಿಕೊಂಡಿದ್ದಾರೆ. ಈ ದಾಖಲೆ ಪಟ್ಟಿಯಲ್ಲಿ ಶ್ರೀಲಂಕಾದ ಅಜಂತಾ ಮೆಂಡಿಸ್ (26 ಪಂದ್ಯಗಳು), ದಕ್ಷಿಣ ಆಫ್ರಿಕಾದ ಇಮ್ರಾನ್ ತಾಹಿರ್ (31), ಅಫ್ಘಾನಿಸ್ತಾನದ ರಶೀದ್ ಖಾನ್ (31), ಬಾಂಗ್ಲಾದ ಮುಷ್ತಫಿಝುರ್ ರಹಮಾನ್ (33 ಪಂದ್ಯಗಳು) ಚಹಾಲ್​ಗಿಂತ ಮೇಲಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.