ಮುಂಬೈ: ಕಳೆದ ಕೆಲ ದಿನಗಳಿಂದ ಬಾಲಿವುಡ್ ನಟ, ನಟಿಯರು ಸೇರಿದಂತೆ ಅನೇಕರು ಬಾಟಲ್ ಕ್ಯಾಪ್ ಓಪನ್ ಚಾಲೆಂಜ್ನಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದು, ಇದೀಗ ಟೀಂ ಇಂಡಿಯಾ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ವಿನೂತನ ಶೈಲಿಯಲ್ಲಿ ಈ ಚಾಲೆಂಜ್ ಸ್ವೀಕರಿಸಿ ಯಶಸ್ವಿಯಾಗಿದ್ದಾರೆ.
ಕಾಲಿನಿಂದ ಬಾಟಲಿಯ ಕ್ಯಾಪ್ ತೆಗೆಯುವ Bottle Cap Challenge ಅನ್ನು ಎಲ್ಲ ಸೆಲೆಬ್ರಿಟಿಗಳು ಮಾಡ್ತಿದ್ದರೆ, ಯುವರಾಜ್ ಸಿಂಗ್ ವಿಭಿನ್ನವಾಗಿ ಆ ಚಾಲೆಂಜ್ ಸ್ವೀಕರಿಸಿದ್ದಾರೆ. ಕ್ರಿಕೆಟ್ ಬ್ಯಾಟ್ನಿಂದ ಚೆಂಡಿಗೆ ಸ್ಟ್ರೇಟ್ ಡ್ರೈವ್ ಮಾಡಿದಾಗ ಚೆಂಡು ನೇರವಾಗಿ ಬಾಟಲಿಗೆ ತಗುಲಿ ಕ್ಯಾಪ್ ಸಮೇತ ಬಾಟಲಿ ಕೆಳಗೆ ಬಿದ್ದಿದೆ. ಈ ಮೂಲಕ ಬಾಟಲ್ ಕ್ಯಾಪ್ ಚಾಲೆಂಜ್ ಅನ್ನು ನೀವು ಮಾಡಿ ಅಂತಾ ಸಚಿನ್ ತೆಂಡೂಲ್ಕರ್, ಬ್ರಯಾನ್ ಲಾರಾ, ಶಿಖರ್ ಧವನ್ ಹಾಗೂ ಕ್ರಿಸ್ ಗೇಲ್ಗೆ ಯುವಿ ಸವಾಲು ಹಾಕಿದ್ದಾರೆ.
-
Laureus Ambassador @YUVSTRONG12 with his own twist on the #BottleCapChallenge... 🏏
— Laureus (@LaureusSport) July 8, 2019 " class="align-text-top noRightClick twitterSection" data="
What you got @MichaelVaughan? 😉pic.twitter.com/ac7dKYf79C
">Laureus Ambassador @YUVSTRONG12 with his own twist on the #BottleCapChallenge... 🏏
— Laureus (@LaureusSport) July 8, 2019
What you got @MichaelVaughan? 😉pic.twitter.com/ac7dKYf79CLaureus Ambassador @YUVSTRONG12 with his own twist on the #BottleCapChallenge... 🏏
— Laureus (@LaureusSport) July 8, 2019
What you got @MichaelVaughan? 😉pic.twitter.com/ac7dKYf79C
ಕಳೆದ ಕೆಲದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ Bottle Cap Challengeಗೆ ಅನೇಕರು ಮುಂದಾಗುತ್ತಿದ್ದು, ಈ ಸಾಲಿಗೆ ಇದೀಗ ಸ್ಯಾಂಡಲ್‌ವುಡ್ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್, ಗೋಲ್ಡನ್ ಸ್ಟಾರ್ ಗಣೇಶ್,ಅರ್ಜುನ್ ಸರ್ಜಾ, ಚಿರಂಜೀವಿ ಸರ್ಜಾ, ಡಿಂಪಲ್ ಕ್ವೀನ್ ರಚಿತಾ ರಾಮ್ ಹಾಗೂ ಬಾಲಿವುಡ್ ನಟಿ ಸುಶ್ಮಿತಾ ಸೇನ್, ಪರಿಣೀತಿ ಚೋಪ್ರಾ ಭಾಗಿಯಾಗಿದ್ದು ವಿಡಿಯೋ ಹರಿಬಿಟ್ಟಿದ್ದಾರೆ.