ETV Bharat / sports

ದುಡ್ಡು ಕೊಡುವ ತನಕ ಬಸ್​​​​ ಹತ್ತಲ್ಲ ಎಂದ ಯುವಿ ಟೀಂ! - ವೇತನ ಸಮಸ್ಯೆ

ಗ್ಲೋಬಲ್ ಟಿ-20 ಟೂರ್ನಿಯಲ್ಲಿ ವೇತನ ಸಮಸ್ಯೆಯಿಂದ ಆಟಗಾರರು ತಂಡದ ಬಸ್​ ಹತ್ತಲು ನಿರಾಕರಿಸಿದ ಘಟನೆ ನಡೆದಿದೆ.

ಗ್ಲೋಬಲ್ ಟಿ-20
author img

By

Published : Aug 8, 2019, 9:58 AM IST

ಬ್ರಾಂಪ್ಟನ್: ಕೆನಡಾದಲ್ಲಿ ನಡೆಯುತ್ತಿರುವ ಗ್ಲೋಬಲ್ ಟಿ-20 ಟೂರ್ನಮೆಂಟ್​ನಲ್ಲಿ ಹಣ ನೀಡದೆ ಬಸ್​ ಹತ್ತೋದಿಲ್ಲ ಎಂದು ಆಟಗಾರರು ಪಟ್ಟುಹಿಡಿದ ಘಟನೆ ನಡೆದಿದೆ.

ನಿನ್ನೆ ಟೊರೆಂಟೋ ನ್ಯಾಷನಲ್ಸ್ ಮತ್ತು ಮಾಂಟ್ರಿಯಲ್ ಟೈಗರ್ಸ್ ನಡುವಿನ ಪಂದ್ಯದ ವೇಳೆ ಮೈದಾನಕ್ಕೆ ಬರಬೇಕಿದ್ದ ಆಟಗಾರರು ತಮಗೆ ನೀಡಬೇಕಿದ್ದ ವೇತನ ಕೊಡಬೇಕು. ಅಲ್ಲಿಯವರೆಗೆ ಬಸ್​ ಹತ್ತುವುದಿಲ್ಲ ಎಂದು ಪಟ್ಟು ಹಿಡಿದಿದ್ದರು ಎಂದು ಕ್ರೀಡಾ ಪತ್ರಕರ್ತರೊಬ್ಬರು ಟ್ವೀಟ್ ಮಾಡಿದ್ದಾರೆ.

  • TV coverage on Hotstar in the USA of the @GT20Canada is currently showing a replay of a previous match between Brampton and Vancouver with a scroll along the bottom that reads "Global T20 2019 match between Montreal Tigers and Toronto Nationals will begin shortly. Stay tuned!"

    — Peter Della Penna (@PeterDellaPenna) August 7, 2019 " class="align-text-top noRightClick twitterSection" data=" ">

ಪಂದ್ಯ ಪ್ರಾರಂಭವಾಗಬೇಕಿದ್ದ ಸಮಯ ಮೀರಿ 75 ನಿಮಿಷ ಕಳೆದರೂ ಟೊರೆಂಟೋ ನ್ಯಾಷನಲ್ಸ್ ಮತ್ತು ಮಾಂಟ್ರಿಯಲ್ ಟೈಗರ್ಸ್ ತಂಡದ ಯಾವೊಬ್ಬ ಆಟಗಾರರು ಕೂಡ ಮೈದಾನದಲ್ಲಿ ಕಾಣಿಸಿಕೊಂಡಿರಲಿಲ್ಲ. ಹೀಗೆ ಪಟ್ಟು ಹಿಡಿದು ಕೂತ ಟೊರೆಂಟೋ ತಂಡದಲ್ಲಿ ಭಾರತ ತಂಡದ ಮಾಜಿ ಕ್ರಿಕೆಟಿಗ ಯುವರಾಜ್​ ಸಿಂಗ್ ಕೂಡ ಇದ್ದಾರೆ.

ಅಂತಿಮವಾಗಿ ನಿಗದಿತ ಸಮಯಕ್ಕೆ ಪಂದ್ಯ ಪ್ರಾರಂಭವಾಗದೆ ತಡವಾಗಿ ಆರಂಭವಾಯಿತು. ಆದರೆ ವೇತನದ ಆರೋಪವನ್ನ ತಳ್ಳಿಹಾಕಿದ್ದು, ತಾಂತ್ರಿಕ ಕಾರಣಗಳಿಂದ ಪಂದ್ಯ ತಡವಾಗಿ ಆರಂಭವಾಯಿತು ಎಂದು ಗ್ಲೋಬಲ್ ಟಿ-20 ತನ್ನ ಅಧಿಕೃತ ಟ್ವಿಟರ್​ನಲ್ಲಿ ಟ್ವೀಟ್ ಮಾಡಿದೆ.

Intro:Body:

sports

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.