ಮುಂಬೈ: ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಅಂಬಾಟಿ ರಾಯುಡು ಜತೆ ಆಯ್ಕೆ ಸಮಿತಿ ನಡೆದುಕೊಂಡ ರೀತಿ ನನಗೆ ಬೇಸರ ತಂದಿದೆ ಎಂದು ಟೀಂ ಇಂಡಿಯಾ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಹೇಳಿದ್ದಾರೆ.
ರಾಯುಡು ವಿಶ್ವಕಪ್ ತಂಡದಲ್ಲಿ ಇರಬೇಕಾಗಿತ್ತು. ನ್ಯೂಜಿಲ್ಯಾಂಡ್ ತಂಡದ ವಿರುದ್ಧ ರಾಯುಡು ಉತ್ತಮವಾಗಿ ಆಡಿದ್ದರು. ಕೆಲವೊಂದು ಇನ್ನಿಂಗ್ಸ್ಗಳಲ್ಲಿ ರನ್ ಗಳಿಕೆ ಮಾಡಲಿಲ್ಲ ಎಂಬ ಕಾರಣಕ್ಕೆ ಅವರನ್ನ ತಂಡದಿಂದ ಕೈ ಬಿಟ್ಟಿರುವುದು ಸರಿಯಲ್ಲ. ಅದರಿಂದ ನನಗೆ ನಿರಾಶೆಯಾಗಿದೆ ಎಂದು ಯುವಿ ಹೇಳಿದ್ದಾರೆ.
ಯಾವುದೇ ತಂಡಕ್ಕೆ 4ನೇ ಕ್ರಮಾಂಕ ಮುಖ್ಯವಾಗಿರುತ್ತದೆ. ಈ ಕ್ರಮಾಂಕಕ್ಕೆ ರಾಯುಡು ಹೇಳಿ ಮಾಡಿಸಿರುವ ಆಟಗಾರ. ವಿಶ್ವಕಪ್ಗಾಗಿ ಆಯ್ಕೆಗೊಂಡಿದ್ದ ತಂಡದಲ್ಲಿ ಇಬ್ಬರು ಗಾಯಗೊಂಡು ಹೊರಬಿದ್ದರೂ ಮೀಸಲು ಆಟಗಾರನಾಗಿದ್ದ ಇವರಿಗೆ ಆಯ್ಕೆ ಸಮಿತಿ ಮಣೆ ಹಾಕಲಿಲ್ಲ. ಇದರಿಂದಲೇ ನಿರಾಸೆಗೊಂಡ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಘೋಷಣೆ ಮಾಡಬೇಕಾಯಿತು ಎಂದಿದ್ದಾರೆ.
ಜುಲೈ 3ರಂದು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ರಾಯುಡು ವಿದಾಯ ಘೋಷಣೆ ಮಾಡಿದ್ದು, ಆಡಿರುವ 55 ಏಕದಿನ ಪಂದ್ಯಗಳಿಂದ 1694 ರನ್ ಗಳಿಕೆ ಮಾಡಿದ್ದಾರೆ.