ಮಂಗಳೂರು: ನಗರದ ಉಳ್ಳಾಲದಲ್ಲಿ ನಡೆಯುವ 'ಉಳ್ಳಾಲ ಪ್ರೀಮಿಯರ್ ಲೀಗ್'ನ 7ನೇ ಆವೃತ್ತಿ ಹಾಗೂ ಉಳ್ಳಾಲ ಯು.ಟಿ. ಫರೀದ್ ಮೆಮೊರಿಯಲ್ ಟ್ರೋಫಿಯಲ್ಲಿ ಭಾರತದ ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆಗಮಿಸಿದ್ದಾರೆ.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಅವರನ್ನು ಉಳ್ಳಾಲ ಪ್ರೀಮಿಯರ್ ಲೀಗ್ ಹಾಗೂ ಉಳ್ಳಾಲ ಯು.ಟಿ. ಫರೀದ್ ಮೆಮೊರಿಯಲ್ ಟ್ರೋಫಿ ಪಂದ್ಯಾವಳಿಯ ಆಯೋಜಕರು ಸ್ವಾಗತಿಸಿದರು.
ಇದೀಗ ಅವರು ಮಂಗಳೂರಿನಲ್ಲಿ ಉಳಿಯುವ ಅವರು, ಸಂಜೆ ಏಳು ಗಂಟೆಗೆ ಉಳ್ಳಾಲದಲ್ಲಿ ನಡೆಯುವ ಉಳ್ಳಾಲ ಪ್ರೀಮಿಯರ್ ಲೀಗ್ ನ 7ನೇ ಆವೃತ್ತಿಯಲ್ಲಿ ಅತಿಥಿಯಾಗಿ ಭಾಗವಹಿಸಿ, ಟೂರ್ನಿಯನ್ನು ಉದ್ಘಾಟಿಸಲಿದ್ದಾರೆ.