ETV Bharat / sports

ಟೆಸ್ಟ್​ ಕ್ರಿಕೆಟ್​ನಲ್ಲಿ ಜಸ್ಪ್ರೀತ್​ ಬುಮ್ರಾ ಎಷ್ಟು ವಿಕೆಟ್​ ಪಡೆಯಬೇಕು...ಯುವಿ ನೀಡಿದ ಟಾರ್ಗೆಟ್​ ಎಷ್ಟು? - ಜೇಮ್ಸ್​ ಆ್ಯಂಡರ್ಸನ್​ 600 ವಿಕೆಟ್​

ಇಂಗ್ಲೆಂಡ್​ ವೇಗಿ ಜೇಮ್ಸ್​ ಆ್ಯಂಡರ್ಸನ್​ ಪಾಕಿಸ್ತಾನದ ವಿರುದ್ಧ ಕೊನೆಯ ಟೆಸ್ಟ್​ ಕ್ರಿಕೆಟ್​ನಲ್ಲಿ 600 ವಿಕೆಟ್​ ಸಾಧನೆ ಮಾಡಿದ ಬೆನ್ನಲ್ಲೇ ವಿರಾಟ್​ ಕೊಹ್ಲಿ ಸೇರಿದಂತೆ ಹಲವಾರು ಕ್ರಿಕೆಟಿಗರು ಶುಭಕೋರಿದ್ದರು.

ಜಸ್ಪ್ರೀತ್​ ಬುಮ್ರಾ
ಜಸ್ಪ್ರೀತ್​ ಬುಮ್ರಾ
author img

By

Published : Aug 26, 2020, 5:36 PM IST

ನವದೆಹಲಿ: ಭಾರತ ತಂಡದ ಸ್ಟಾರ್​ ವೇಗದ ಬೌಲರ್​ ಜಸ್ಪ್ರೀತ್​ ಬುಮ್ರಾ ಅವರಿಗೆ ಟೆಸ್ಟ್​ ಕ್ರಿಕೆಟ್​ನಲ್ಲಿ 400 ವಿಕೆಟ್​ ಪಡೆಯಬೇಕು ಎಂದು ಭಾರತದ ಮಾಜಿ ಆಲ್​ರೌಂಡರ್​ ಯುವರಾಜ್​ ಸಿಂಗ್​ ಟಾರ್ಗೆಟ್​​ ನೀಡಿದ್ದಾರೆ.

ಇಂಗ್ಲೆಂಡ್​ ವೇಗಿ ಜೇಮ್ಸ್​ ಆ್ಯಂಡರ್ಸನ್​ ಪಾಕಿಸ್ತಾನದ ವಿರುದ್ಧ ಕೊನೆಯ ಟೆಸ್ಟ್​ ಕ್ರಿಕೆಟ್​ನಲ್ಲಿ 600 ವಿಕೆಟ್​ ಸಾಧನೆ ಮಾಡಿದ ಬೆನ್ನಲ್ಲೇ ವಿರಾಟ್​ ಕೊಹ್ಲಿ ಸೇರಿದಂತೆ ಹಲವಾರು ಕ್ರಿಕೆಟಿಗರು ಶುಭಕೋರಿದ್ದರು. ಅದೇ ರೀತಿ ಬುಮ್ರಾ ಕೂಡ ಇಂಗ್ಲೆಂಡ್​ ವೇಗಿಯ ಅದ್ಭುತ ಸಾಧನೆ ಮೆಚ್ಚಿ ಟ್ವೀಟ್​ ಮೂಲಕ ಅಭಿನಂದನೆ ಸಲ್ಲಿಸಿದ್ದರು.

ಬುಮ್ರಾ ಟ್ವೀಟ್​ ಯುವರಾಜ್​ ಸಿಂಗ್​ ಪ್ರತಿಕ್ರಿಯೆ

" ನಿಮ್ಮ ಗಮನಾರ್ಹ ಸಾಧನೆಗೆ ಅಭಿನಂದನೆಗಳು ಜೇಮ್ಸ್​ ಆ್ಯಂಡರ್ಸನ್​. ನಿಮ್ಮ ಉತ್ಸಾಹ, ದೃಢತೆ ಅಸಾಧಾರಣವಾದದ್ದು, ನಿಮ್ಮ ಭವಿಷ್ಯಕ್ಕೆ ಶುಭಾಶಯಗಳು " ಎಂದು ಬುಮ್ರಾ ಟ್ವೀಟ್ ಮಾಡಿದ್ದಾರೆ.

ಈ ಟ್ವೀಟ್​ಗೆ ಪ್ರತಿಕ್ರಿಯಿಸಿರುವ ಯುವರಾಜ್​ ಸಿಂಗ್​ , " ನಿನ್ನ ಟಾರ್ಗೆಟ್​ ಕಡಿಮೆ ಎಂದರೂ 400 ವಿಕೆಟ್​ಗಳು" ಎನ್ನುವ ಮೂಲಕ ಬುಮ್ರಾಗೆ ಟಾರ್ಗೆಟ್​ ನೀಡಿದ್ದಾರೆ. ಪ್ರಸ್ತುತ ಬುಮ್ರಾ 14 ಟೆಸ್ಟ್​ ಪಂದ್ಯಳನ್ನಾಡಿದ್ದು, 68 ವಿಕೆಟ್​ ಪಡೆದಿದ್ದಾರೆ. ಯುವರಾಜ್​ ನೀಡಿರುವ ಟಾರ್ಗೆಟ್​ ಮುಟ್ಟಬೇಕಾದರೆ ತುಂಬಾ ದೀರ್ಘ ಪ್ರಯಾಣ ಮಾಡಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.