ETV Bharat / sports

ಯೇ ದಿಲ್‌ ಮಾಂಗೇ ಯಂಗೀಸ್ತಾನ್‌.. ಬಲಿಷ್ಠ ಆಸೀಸ್​ ಮಣಿಸಿದ ಯಂಗ್ ಇಂಡಿಯಾ.. ಯುವಕರೇ ಭಾರತದ ಭವಿಷ್ಯ.. - ಬ್ರಿಸ್ಬೇನ್​ ಟೆಸ್ಟ್​

ರಹಾನೆ ಟೆಸ್ಟ್​ಗೆ ಹೇಳಿ ಮಾಡಿಸಿದ ನಾಯಕ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ತಂಡವನ್ನು ಯಾವ ರೀತಿ ಮುನ್ನೆಡಸಬೇಕು. ಯಾವಾಗ ಯಾವ ಆಟಗಾರನನ್ನು ಕಣಕ್ಕಿಳಿಸಬೇಕು, ಫೀಲ್ಡಿಂಗ್​ ಹೇಗೆ ಸೆಟ್​ ಮಾಡಬೇಕು ಎಲ್ಲದರಲ್ಲೂ ಪರಿಪೂರ್ಣತೆಯನ್ನು ತೋರಿರುವ ರಹಾನೆ ಭವಿಷ್ಯದ ನಾಯಕ ಎಂಬುದನ್ನು ಸಾಬೀತು ಮಾಡಿದ್ದಾರೆ..

ಬಾರ್ಡರ್ ಗವಾಸ್ಕರ್ ಟ್ರೋಫಿ
ಟೀಮ್ ಇಂಡಿಯಾ
author img

By

Published : Jan 19, 2021, 4:06 PM IST

Updated : Jan 19, 2021, 4:35 PM IST

ಹೈದರಾಬಾದ್​​ : ಭಾರತದ ಆಸ್ಟ್ರೇಲಿಯಾ ಪ್ರವಾಸ ಇಂದಿಗೆ ಕೊನೆಗೊಂಡಿದೆ. ಭಾರತ ಹಾಗೂ ವಿಶ್ವ ಕ್ರಿಕೆಟ್​ ಮರೆಯದಂತಹ ಒಂದು ಅದ್ಭುತ ಪ್ರವಾಸವಿದು. ಪ್ರವಾಸದ ಆರಂಭದಲ್ಲಿ ಏಕದಿನ ಸರಣಿ ಗೆದ್ದು ಆಸೀಸ್​ ಮುನ್ನಡೆ ಸಾಧಿಸಿದ್ರೆ, ಟಿ-20ಯಲ್ಲಿ ಭಾರತ ಬೌನ್ಸ್​ ಬ್ಯಾಕ್​ ಮಾಡುವ ಮೂಲಕ ತನ್ನ ಶಕ್ತಿ ತೋರಿಸಿತ್ತು. ಮತ್ತೆ ಮೊದಲ ಟೆಸ್ಟ್​ನಲ್ಲಿ 36 ರನ್​ಗಳಿಗೆ ಆಲೌಟ್ ಆಗಿ ಹೀನಾಯವಾಗಿ ಸೋತ ಭಾರತ ನಂತರದ ಟೆಸ್ಟ್​ಗಳಲ್ಲಿ ಗಾಯಗಳ ನೋವಿನಲ್ಲೂ ಪುಟಿದೇಳುವ ಮೂಲಕ ಟೆಸ್ಟ್ 2-1ರಲ್ಲಿ​ ಸರಣಿ ತನ್ನದಾಗಿಸಿಕೊಂಡಿದೆ. ಯಂಗ್​ ಇಂಡಿಯಾ ತನ್ನ ಸಾಮರ್ಥ್ಯ ಪ್ರದರ್ಶಿಸುವ ಮೂಲಕ ಭಾರತ ಟೆಸ್ಟ್​ ಕ್ರಿಕೆಟ್​ನ ಹೊಸ ಸೂಪರ್​ ಪವರ್ ರಾಷ್ಟ್ರ ಎಂಬ ಸಂದೇಶವನ್ನು ವಿಶ್ವಕ್ಕೆ ಸಾರಿದೆ.

ಆಸ್ಟ್ರೇಲಿಯಾ ಪ್ರವಾಸವೆಂದರೆ ಎಂತಹ ದೇಶಕ್ಕಾದ್ರೂ ಭಯ ಎನ್ನುವುದು ಇದ್ದೇ ಇರುತ್ತದೆ. ವಿಶ್ವದ ಅತ್ಯಂತ ಬಲಿಷ್ಠ ಕ್ರಿಕೆಟ್​ ತಂಡಗಳು ಆಸೀಸ್​ ಪ್ರವಾಸಕ್ಕಾಗಿ ವರ್ಷಪೂರ್ತಿ ಭರ್ಜರಿ ತಯಾರಿ ನಡೆಸುತ್ತವೆ. ದಿ ಬೆಸ್ಟ್​ ತಂಡವನ್ನು ಆಸೀಸ್​ ಪ್ರವಾಸಕ್ಕೆ ಕಳಿಸುತ್ತಾರೆ. ಯಾಕೆಂದರೆ, ಆಸೀಸ್​ ತಂಡ ತವರಿನಲ್ಲಿ ಅತ್ಯಂತ ಬಲಿಷ್ಠ. ಫಾಸ್ಟ್, ಬೌನ್ಸಿ ಪಿಚ್​ನಲ್ಲಿ ಅವರು ಆಡುವ ಆಟ ಅಮೋಘ. ವಿಶ್ವವನ್ನು ಗೆದ್ದುಕೊಂಡು ಬಂದಂತಹ ತಂಡಗಳು ಕಾಂಗರೂಗಳ ನಾಡಲ್ಲಿ ಗರ್ವಭಂಗ ಅನುಭವಿಸುತ್ತವೆ.

ಇದು ಕಳೆದ ಮೂರು ದಶಕದಿಂದ ಪ್ರವಾಸಿ ತಂಡಗಳು ಕಾಂಗರೂ ನಾಡಲ್ಲಿ ಸೋಲು ಅನುಭವಿಸುವುದು ಸಾಮಾನ್ಯವಾಗಿಬಿಟ್ಟಿದೆ. ಅದಕ್ಕಾಗಿಯೇ ಈ ಹಿಂದೆ ತಂಡಗಳು ಆಸೀಸ್​ ಪ್ರವಾಸವೆಂದ್ರೆ ಎರಡು ತಿಂಗಳು ಮುಂಚಿತವಾಗಿ ಹೋಗಿ ಅಲ್ಲಿಯ ವಾತಾವರಣಕ್ಕೆ ಹೊಂದಿಕೊಳ್ಳಲು ಬಯಸುತ್ತಿದ್ದವು. ಅನೇಕ ಅಭ್ಯಾಸ ಪಂದ್ಯಗಳನ್ನು ಆಡಿದ್ರೂ ಕಾಂಗರೂಗಳ ಆಟ ಅವರ ಮೈಂಡ್​ ಗೇಮ್​ನಿಂದ ಪ್ರವಾಸಿ ತಂಡಗಳು ಹೀನಾಯವಾಗಿ ಸೋಲುಂಡು ಬರುವುದು ಸಂಪ್ರದಾಯ.

ರಿಷಭ್ ಪಂತ್ - ಸಿರಾಜ್
ರಿಷಭ್ ಪಂತ್ - ಸಿರಾಜ್

ಯಾಕೆಂದರೆ, ಇಲ್ಲಿ ಪ್ರತಿ ಮೈದಾನದಲ್ಲಿ ಆಡಬೇಕಾದ್ರೂ ನಿಮ್ಮ ಆಟದ ಶೈಲಿಯನ್ನು ಬದಲಾಯಿಸಬೇಕು. ಮೈದಾನದ ವಾಸ್ತು ತಕ್ಕಂತೆ ಬೌಲಿಂಗ್​,ಫೀಲ್ಡಿಂಗ್​ ಸೆಟ್​ ಮಾಡಿಕೊಳ್ಳಬೇಕು. ಅಡಿಲೇಡ್​​ನಲ್ಲಿ ಲಾಂಗ್​ ಆನ್​, ಲಾಂಗ್​ ಆಫ್​ ಬೌಂಡರಿ ತುಂಬ ಉದ್ಧವಿರುವ ಕಾರಣ ಇಲ್ಲಿ ಸ್ಟ್ರೇಟ್​ ಬೌಂಡರಿ ಕಷ್ಟ. ಇನ್ನೂ ಮೆಲ್ಬೋರ್ನ್ ಮೈದಾನ ಆಫ್​ ಸೈಡ್​, ಆನ್​ ಸೈಡ್​ ಬೌಂಡರಿ ಅತ್ಯಂತ ಲಾಂಗ್​ ಆಗಿರುವುದರಿಂದ ಫುಲ್​, ಹುಕ್​ ಮಾಡುವಾಗ ಸ್ವಲ್ಪ ಎಚ್ಚರಿಕೆಯಿಂದಿರಬೇಕು.

ಸಿಡ್ನಿ ಸ್ವಲ್ಪ ಸ್ಪಿನ್​ ಸ್ನೇಹಿ, ಬ್ರಿಸ್ಬೇನ್​ ಮತ್ತದೇ ಬೌನ್ಸಿ ಟ್ರ್ಯಾಕ್​ ಬೌಲ್​ ಎಲ್​ ಬಂದ್​ ಹೇಗ್ ಹೋಯ್ತು ಎಂಬುದು ತಿಳಿಯುವಷ್ಟರಲ್ಲಿ ಅಂಪೈರ್​ ಒಂದು ಕೈ ಮೇಲೆತ್ತಿರುತ್ತಾರೆ. ಹಾಗಾಗಿ ಆಸೀಸ್​ ಪ್ರವಾಸ, ಪ್ರವಾಸಿ ತಂಡಗಳಿಗೆ ಕಬ್ಬಿಣದ ಕಡಲೇ. ಎಷ್ಟೇ ತಯಾರಿ ಮಾಡಿಕೊಂಡು ಬಂದ್ರು ಇವರ ಪಿಚ್​ಗಳ ಮರ್ಮ ತಿಳಿಯದೆ ಪ್ರವಾಸಿಗರು ಸೋಲು ಅನುಭವಿಸುತ್ತಾರೆ.

ಆದರೆ, ಭಾರತೀಯರು ಮಾತ್ರ ಈ ಸಲ ಆಸೀಸ್​ನ ಲೆಕ್ಕಚಾರವನ್ನು ತಲೆಕೆಳಗೆ ಮಾಡುವ ಮೂಲಕ, ಯಂಗ್ ಇಂಡಿಯಾ ಟೆಸ್ಟ್​ನಲ್ಲಿ ಹೊಸ ಶಕ್ತಿಯಾಗಿ ಹೊರಹೊಮ್ಮಿದೆ. ಏಕದಿನ, ಟಿ20 ಮತ್ತು ಟೆಸ್ಟ್ ಮೂರು ಸರಣಿಯನ್ನು ಲೆಕ್ಕ ಹಾಕಿದ್ರೆ ಭಾರತ ಆಸೀಸ್​ಗಿಂತ ಒಂದು ಕೈ ಮೇಲಿದೆ. ಆಸೀಸ್​ ಎರಡು ಏಕದಿನ ಒಂದು ಟಿ20 ಮತ್ತು ಒಂದು ಟೆಸ್ಟ್​ ಗೆಲ್ಲುವ ಮೂಲಕ 4 ಪಂದ್ಯ ಗೆದ್ದರೆ ಭಾರತ ಒಂದು ಏಕದಿನ ಎರಡು ಟಿ20 ಮತ್ತು ಎರಡು ಟೆಸ್ಟ್​ ಗೆಲ್ಲುವ ಮೂಲಕ 5 ಜಯ ಸಾಧಿಸುವ ಮೂಲಕ ಸರ್ವರೀತಿಯಲ್ಲೂ ಆಸ್ಟ್ರೇಲಿಯಾವನ್ನು ಹಿಂದಿಕ್ಕಿದೆ.

ಭಾರತ ಟೆಸ್ಟ್​ ತಂಡ
ಭಾರತ ಟೆಸ್ಟ್​ ತಂಡ

ಟಿ-20 ಮಾತ್ರವಲ್ಲ ಯುವಕರು ಟೆಸ್ಟ್​ನಲ್ಲೂ ದಿ ಬೆಸ್ಟ್ : ಸದ್ಯ ಭಾರತದಲ್ಲಿ ಕ್ರಿಕೆಟ್​ ಆಡುವ ಪ್ರತಿಯೊಬ್ಬ ಆಟಗಾರ ಬಯಸುವುದು ಹೇಗಾದರು ಮಾಡಿ ಐಪಿಎಲ್​ ಆಡಬೇಕು. ಅದಕ್ಕೆ ತಕ್ಕಂತೆ ತನ್ನ ಬ್ಯಾಟಿಂಗ್​ ಶೈಲಿ ಬದಲಿಸಿಕೊಳ್ಳಬೇಕು, ಟಿ-20 ಮಾದರಿಗೆ ಬೇಕಾದ ಎಲ್ಲ ಮೂಲಭೂತ ಕಲೆಗಳನ್ನು ಕರಗತ ಮಾಡಿಕೊಳ್ಳಬೇಕು, ಈ ಮೂಲಕ ಭಾರತವನ್ನು ಪ್ರತಿನಿಧಿಸಬೇಕೆಂಬುದು ಅವರಾಸೆ. ಇದರಿಂದ ಟೆಸ್ಟ್​ ಕ್ರಿಕೆಟ್​ ನಿರ್ನಾಮ ಹಂತದಲ್ಲಿದೆ ಎಂಬುದು ಕ್ರಿಕೆಟ್​ ತಜ್ಞರ ವಾದವಾಗಿತ್ತು. ಆದರೆ, ಈ ಸಲದ ಆಸೀಸ್​ ಪ್ರವಾಸ ಈ ಎಲ್ಲ ಅಪವಾದಗಳಿಗೆ ಬ್ರೇಕ್​ ಹಾಕಿದೆ.

ಟಿ-20ಯಲ್ಲಿ ಮಿಂಚಿದ ಆಟಗಾರರು ತಾವು ಸಮರ್ಥವಾಗಿ ಟೆಸ್ಟ್​ ಸಹ ಆಡಬಲ್ಲೆವು ಎಂಬುದನ್ನು ತೋರಿಸಿದ್ದಾರೆ. ನೋವಿನಿಂದ ಟೀಂ ಇಂಡಿಯಾದ ಅರ್ಧ ಅನುಭವಿ ಆಟಗಾರರು ಸರಣಿಯಿಂದ ಹೊರಗುಳಿದ ಸಮಯದಲ್ಲಿ ತಮಗೆ ನೀಡಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವ ಮೂಲಕ ಬಲಿಷ್ಠ ಆಸೀಸ್​ ತಂಡಕ್ಕೆ ಸೋಲಿನ ರುಚಿ ತೋರಿಸುವ ಮೂಲಕ ಯುವ ಆಟಗಾರರು ಟಿ20 ಹಾಗೂ ಟೆಸ್ಟ್ ಎರಡರಲ್ಲೂ ಮಿಂಚಿದ್ದಾರೆ.

ಗಾಯಗಳ ನೋವಿನಲ್ಲೂ ನಗು ಕಂಡ ಭಾರತ..: ಆಸೀಸ್​ ಸರಣಿ ಭಾರತಕ್ಕೆ ತಲೆನೋವಾಗಿ ಕಾಡಿದ್ದು ಗಾಯದ ಸಮಸ್ಯೆ. ಎಲ್ಲಾ ಹಿರಿಯ ಬೌಲರ್​ಗಳು ಗಾಯದ ಸಮಸ್ಯೆಯಿಂದ ಒಂದೊಂದೇ ಪಂದ್ಯದ ನಂತರ ಹೊರಗುಳಿಯುತ್ತ ಬಂದ್ರು. ಸರಣಿ ಆರಂಭವಾಗುವ ಮೊದಲು ಭುವನೇಶ್ವರ್ ಕುಮಾರ್​, ಇಶಾಂತ್​ ಶರ್ಮಾ ಗಾಯದಿಂದ ಸರಣಿ ಮಿಸ್​ ಮಾಡಿಕೊಂಡ್ರು. ಸರಣಿ ಆರಂಭವಾದ ನಂತರ ಮೊಹ್ಮದ್ ಶಮಿ, ಬುಮ್ರಾ, ರವೀಂದ್ರ ಜಡೇಜಾ ಮತ್ತು ಆಲ್​ರೌಂಡರ್​ ಹನುಮ ವಿಹಾರಿ ಗಾಯದಿಂದ ಸರಣಿಯಿಂದ ಹೊರನಡೆದ್ರೆ, ಅಶ್ವಿನ್ ಗಾಯದಿಂದಾಗಿ ಬೆಂಚ್​ ಕಾಯುವಂತಾಯ್ತು.

ಆದರೂ ಇವರಿಬ್ಬರ ಸಾಹಸದಿಂದ ಮೂರನೇ ಪಂದ್ಯದಲ್ಲಿ ಭಾರತ ಸೋಲಿನಿಂದ ಪಾರಾಗಿತ್ತು ಎನ್ನುವುದನ್ನು ಮರೆಯುವಂತಿಲ್ಲ. ಇನ್ನೂ ಬ್ಯಾಟಿಂಗ್ ವಿಭಾಗದಲ್ಲೂ ನೋವಿನ ಸಮಸ್ಯೆ ಭಾರತೀಯರಿಗೆ ಕಾಡಿತು. ಮೊದಲೆರಡು ಟೆಸ್ಟ್​ ರೋಹಿತ್​ ಶರ್ಮಾ ಗಾಯದಿಂದ ಆಡಲಿಲ್ಲ. ಮೊದಲ ಟೆಸ್ಟ್​ ಆಡಿದ ನಾಯಕ ಕೊಹ್ಲಿ ತಂದೆಯಾಗುವ ಸಿರಿಯಲ್ಲಿದ್ದ ಕಾರಣ ಮೂರು ಟೆಸ್ಟ್​ಗೆ ಗೈರಾದ್ರು. ಕೆ ಎಲ್​ ರಾಹುಲ್​ ಗಾಯದಿಂದ ಸರಣಿಯಿಂದ ಹೊರ ಬಿದ್ರು. ಈ ಸಂದರ್ಭದಲ್ಲಿ ಶುಭಮನ್​ ಗಿಲ್​ ಆರಂಭಿಕನಾಗಿ ಕಣಕ್ಕಿಳಿದು ಗಮನಸೆಳೆದ್ರು.

ರಿಷಭ್​ ಪಂತ್​, ವಾಷಿಂಗ್ಟನ್​ ಸುಂದರ್​, ಶಾರ್ದೂಲ್​ ಠಾಕೂರ್​, ಸಮಯೋಚಿತ ಆಟದಿಂದ ಭಾರತ ಆಸೀಸ್​ ಗರ್ವಭಂಗಕ್ಕೆ ಕಾರಣರಾದ್ರು. ಆಸೀಸ್​ ಸರಣಿಯಲ್ಲಿ ಚೊಚ್ಚಲ ಟೆಸ್ಟ್ ಆಡಿದ ಮೊಹ್ಮದ್​ ಸಿರಾಜ್​, ಹಿರಿಯ ಬೌಲರ್​ಗಳು ಅನುಪಸ್ಥಿತಿಯಲ್ಲಿ ಭಾರತ ತಂಡದ ಬೌಲಿಂಗ್​ ಸಾರಥ್ಯವಹಿಸಿದ್ರು. ತಂದೆ ಕಳೆದುಕೊಂಡ ನೋವು,ಜೊತೆಗೆ ಆಸೀಸ್ ಪ್ರೇಕ್ಷಕ ಕಿರಾತಕರಿಂದ ನಿಂದನೆಯ ನಡುವೆಯೂ ಭಾರತ ತಂಡಕ್ಕಾಗಿ ತಮ್ಮ ಸರ್ವಸ್ವವನ್ನು ಧಾರೆಯೆರೆಯುವ ಮೂಲಕ ಆಸೀಸ್​ ಪಾಲಿಗೆ ಕಂಠಕವಾದರು.

ಆಸ್ಟ್ರೇಲಿಯಾ ತಂಡ
ಆಸ್ಟ್ರೇಲಿಯಾ ತಂಡ

ಶಾರ್ದೂಲ್​, ನಟರಾಜನ್​​ ಮತ್ತು ಸುಂದರ್​ ಸಹ ರಹಾನೆ ಚೆಂಡು ನೀಡಿದಾಗಲೆಲ್ಲ ಕಾಂಗೂರಗಳ ಮೇಲೆ ಸವಾರಿ ಮಾಡಿದ್ರು. ಅರ್ಧ ತಂಡ ನೋವಿನಿಂದ ಹೊರಬಿದ್ದರೂ ಭಾರತೀಯರು ದಿಟ್ಟತನದ ಹೋರಾಟ, ಸಫಲೊಪ್ಪಿಕೊಳ್ಳದ ಮನೋಭಾವದಿಂದ ಆಸೀಸ್​ ನೆಲದಲ್ಲಿ ಅದ್ಭುತ ಪ್ರದರ್ಶನ ನೀಡಿ ಭಾರತ ಟೆಸ್ಟ್​ ಕ್ರಿಕೆಟ್​ನ ಭವಿಷ್ಯ ಉಜ್ವಲವಾಗಿದೆ ಎಂಬುದನ್ನು ಜಗತ್ತಿಗೆ ತೋರಿಸಿದರು.

ಆಘಾತಕಾರಿ ಸೋಲು, ನಂತರ ಭಾರತ ನಡೆದದ್ದೇ ದಾರಿ : ಅಡಿಲೇಡ್​ನಲ್ಲಿ ನಡೆದ ಭಾರತ-ಆಸ್ಟ್ರೇಲಿಯಾ ಮೊದಲ ಅಹರ್ನಿಶಿ ಟೆಸ್ಟ್​ ಭಾರತ ಕನಸಿನಲ್ಲು ನೆನಪಿಸಿಕೊಳ್ಳಲು ಇಷ್ಟಪಡುವುದಿಲ್ಲ. ಮೊದಲ ಟೆಸ್ಟ್​ನ ಎರಡನೇ ಇನ್ನಿಂಗ್ಸ್​ನಲ್ಲಿ ಭಾರತ ಕೇವಲ 36ರನ್​ಗೆ ಆಲೌಟ್​ ಆಗುವ ಮೂಲಕ ಅತ್ಯಂತ ಕಳಪೆ ಪ್ರದರ್ಶನದಿಂದ ಮುಖಭಂಗ ಅನುಭವಿಸಿತು. ಕಾಂಗೂರುಗಳ ಬೌಲಿಂಗ್​ ನೋಡಿ ಸರಣಿ ಆಸೀಸ್​ 4-0ಯುಲ್ಲಿ ವೈಟ್​ವಾಶ್​ ಮಾಡುವುದು ಶೆ.100 ಪ್ರತಿಶತ ಖಚಿತ ಎಂಬುವುದು ಕ್ರಿಕೆಟ್​ ಪಂಡಿತರ ಲೆಕ್ಕಾಚಾರವಾಗಿತ್ತು.

ಆದರೆ, ಮೆಲ್ಬೋರ್ನ್​ನಲ್ಲಿ ನಡೆದ ಬಾಕ್ಸಿಂಗ್​ ಡೇ​ ಟೆಸ್ಟ್ ಸುಲಭವಾಗಿ ಗೆಲ್ಲುವ ಮೂಲಕ ರಹಾನೆ ಪಡೆ ಕ್ರಿಕೆಟ್​ ಪಂಡಿತರ ಲೆಕ್ಕಾಚಾರ ತಲೆಕೆಳಗಾಗಿಸಿತು. ಮೂರನೇ ಟೆಸ್ಟ್​ ಸಹ ಭಾರತ ಸೋಲುವ ಹಾದಿಯಲ್ಲಿತ್ತು. ರಿಶಬ್ ಪಂತ್​ ಅಬ್ಬರದ ಆಟ, ಪೂಜಾರ ತಾಳ್ಮೆಯ ಆಟ ಭಾರತ ಪಾಲಿಗೆ ಸ್ವಲ್ಪ ಚೇತರಿಕೆ ನೀಡ್ತು. ಆದರೆ, ಕೊನೆಯ 43 ಓವರ್​ಗಳಲ್ಲಿ ಒಂದು ವಿಕೆಟ್​ ನೀಡದೆ ಆರನೇ ವಿಕೆಟ್‌ಗೆ ​​62 ರನ್​ಗಳ ಜೊತೆಯಾಟ ಆಡುವ ಮೂಲಕ ಅಶ್ವಿನ್​-ಹನುಮ ವಿಹಾರಿ ಜೋಡಿ ವಿಶ್ವಶ್ರೇಷ್ಠ ಬೌಲರ್​ಗಳನ್ನು ಸಮರ್ಥವಾಗಿ ಎದುರಿಸಿತು.

ಅಶ್ವಿನ್​ ಮತ್ತು ಹನುಮ ವಿಹಾರಿ ಗಾಯದ ಸಮಸ್ಯೆಯಿದ್ದರು ನೆಲಕಚ್ಚಿ ಆಡಿದ್ರು. ಇತ್ತ ಹೆಬ್ಬೆಟ್ಟು ಮುರಿದಿದ್ರು ಪ್ಯಾಡ್​ ಕಟ್ಟಿ ಕುಳಿತಿದ್ದ ರವೀಂದ್ರ ಜಡೇಜಾ ಜೀವ ಹೋದರು ಸರಿ ಸೋಲೊಪ್ಪಿಕೊಳ್ಳಲು​ ತಯಾರಿಲ್ಲ ಎಂಬ ಸಂದೇಶವನ್ನು ಡಗೌಟ್​ನಿಂದ ಆಸ್ಟ್ರೇಲಿಯನ್ನರಿಗೆ ರವಾನಿಸಿದ್ದರು. ಭಾರತೀಯರು ಈ ಟೆಸ್ಟ್ ಉಳಸಿಕೊಳ್ಳಲು ಯಾವ ರೀತಿ ಸಜ್ಜಾಗಿದ್ದರು ಎಂಬುದು ಅಶ್ವಿನ್​, ವಿಹಾರಿ ಆಟ ನೋಡಿದವರು ಮಾತ್ರ ಅದನ್ನು ವರ್ಣಿಸಬಲ್ಲರು. ಫಲಿತಾಂಶದ ಲೆಕ್ಕಾಚಾರದಲ್ಲಿ ಅದು ಟೆಸ್ಟ್​ ಡ್ರಾ ಎನ್ನಬಹುದು. ಭಾರತೀಯರು ಆಡಿದ ರೀತಿ ಅದು ಭಾರತದ ಪಾಲಿಗೆ ಜಯವಾಗಿತ್ತು.

ಹುಡುಗಾಟವಲ್ಲ ಹುಡುಗರಾಟ.. : ಕೊನೆಯ ಟೆಸ್ಟ್ ಸಹ ಭಾರತೀಯರ ಪಾಲಿಗೆ ಅಗ್ನಿಪರೀಕ್ಷೆಯಾಗಿತ್ತು. ಹಿರಿಯ ಬೌಲರ್​ಗಳ ಅನುಪಸ್ಥಿತಿ ಎದ್ದು ಕಾಣಿಸುತ್ತಿತ್ತು. ಭಾರತದ ಅನನುಭವಿಗಳ ಬೌಲರ್​ಗಳನ್ನು ಮುನ್ನೆಡೆಸುವ ಜವಾಬ್ದಾರಿಯನ್ನು ಕೇವಲ 2 ಪಂದ್ಯಗಳನ್ನಾಡಿದ್ದ​ ಸಿರಾಜ್​ ವಹಿಸಿದ್ರು. ನಾಲ್ಕನೇ ಟೆಸ್ಟ್ ಆರಂಭವಾಗುವ ಮೊದಲು ಭಾರತದ ನಾಲ್ವರು ಬೌಲರ್​ಗಳು ಸೇರಿ 13 ವಿಕೆಟ್​ ಪಡೆದಿದ್ದರೆ, ಆಸ್ಟ್ರೇಲಿಯಾದ ನಾಲ್ವರು ಬೌಲರ್​ಗಳು 1033 ವಿಕೆಟ್​ ಪಡೆದ ಅನುಭವಿಗಳನ್ನ ಹೊಂದಿತ್ತು.

ಈ ನಾಲ್ವರು ವಿಶ್ವಶ್ರೇಷ್ಠ ಬೌಲರ್​ಗಳು. ಆದರೆ, ವಿಶ್ವ ಕ್ರಿಕೆಟ್​ನಲ್ಲಿಯೇ ಅತ್ಯಂತ ಅನನುಭವಿ ಬೌಲರ್​ಗಳನ್ನು ಕಣಕ್ಕಿಳಿಸಿದ ಕುಖ್ಯಾತಿಗೆ ಭಾರತೀಯರು ಒಳಗಾದ್ರು. ಟೆಸ್ಟ್​ ಸರಣಿಯಲ್ಲಿ 20 ಆಟಗಾರರನ್ನು ಕಣಕ್ಕಿಳಿಸುವ ಮೂಲಕ ವಿದೇಶಿ ನೆಲದಲ್ಲಿ ನಡೆದ ಟೆಸ್ಟ್​ ಸರಣಿಯಲ್ಲಿ ಅತಿಹೆಚ್ಚು ಆಟಗಾರರನ್ನು ಕಣಕ್ಕಿಳಿಸಿದ ದಾಖಲೆ ಸಹ ಭಾರತದ ಪಾಲಾಗಿತ್ತು. ಇಷ್ಟೊಂದು ಇಕ್ಕಟ್ಟಿನ ಪರಿಸ್ಥಿತಿಯಲ್ಲಿದ್ರೂ ಯಂಗ್​ ಇಂಡಿಯಾ ಮಾತ್ರ ಇದ್ಯಾವುದನ್ನು ತಲೆ ಕೆಡಿಸಿಕೊಳ್ಳದೆ ಕಣಕ್ಕಿಳಿದಿತ್ತು.

ಕ್ರಿಕೆಟ್​ ಪೇಪರ್ ಮೇಲಿರುವ ಹೆಸರುಗಳಿಂದ ಆಡುವ ಆಟವಲ್ಲ. ಕಣಕ್ಕಿಳಿದು ಆಡುವ ಆಟ ಎಂಬುದನ್ನು ನಂಬಿದ ಭಾರತೀಯರು ವಿಶ್ವಶ್ರೇಷ್ಠ ಟೆಸ್ಟ್ ತಂಡದೊಂದಿಗೆ ಆಡುತ್ತಿದ್ದೇವೆ ಎಂಬುದನ್ನು ಮರೆತು ತಮ್ಮ ಪ್ರದರ್ಶನ ನೀಡಿದ್ರು. ಟಾಸ್ ಗೆಲ್ಲುವ ಮೂಲಕ ಆಸೀಸ್​ ಮಾನಸಿಕವಾಗಿ ಅರ್ಧ ಪಂದ್ಯ ಗೆದ್ದಾಗಿತ್ತು. ಯುವ ಆಟಗಾರರಾದ ಶಾರ್ದೂಲ್​, ನಟರಾಜನ್​ ಮತ್ತು ಸುಂದರ್​ ಮೊದಲ ಇನ್ನಿಂಗ್ಸ್​ನಲ್ಲಿ ತಲಾ ಮೂರು ವಿಕೆಟ್ ತೆಗೆದು ಮಿಂಚಿದ್ರು.

ಆಸೀಸ್​ 369 ರನ್​ಗಳಿಸುವಲ್ಲಿ ಸಫಲವಾಯ್ತು. ಮೊದಲ ಇನ್ನಿಂಗ್ಸ್​ನಲ್ಲಿ ಭಾರತ ಬ್ಯಾಟಿಂಗ್ ವೈಫಲ್ಯ ಅನುಭವಿಸಿತ್ತು. ಆರಂಭಿಕರು ನಿರೀಕ್ಷಿತ ಆಟವಾಡಲಿಲ್ಲ. ಏಳನೇ ವಿಕೆಟ್​ಗೆ ಒಂದಾದ ಸುಂದರ್​ ಮತ್ತು ಶಾರ್ದೂಲ್​ ಠಾಕೂರ್​ 123 ರನ್​ ಕಲೆ ಹಾಕಿದ್ರು. ಠಾಕೂರ್​ 67 ರನ್​ಗಳಿಸಿದ್ದರೆ, ಸುಂದರ್​ 62 ರನ್​ಗಳಿಸಿ ಸಮಯೋಚಿತ ಆಟದಿಂದ ಆಸೀಸ್​ರನ್ನು ಕಾಡಿದ್ರು. ಭಾರತ 336 ರನ್​ಗಳಿಸಲು ಕಾರಣರಾದರು. ಎರಡನೇ ಇನ್ನಿಂಗ್ಸ್​ನಲ್ಲಿ ಆಸೀಸ್​ ಉತ್ತಮ ಆರಂಭ ಪಡೆದ್ರು.

ಮೊಹ್ಮದ್​ ಸಿರಾಜ್​ ಅವರ ಮಾರಕ ಬೌಲಿಂಗ್​ನಿಂದಾಗಿ ಮಧ್ಯಮ ಕ್ರಮಾಂಕ ಕುಸಿಯಿತು. ಐದು ವಿಕೆಟ್​ ಪಡೆದ ಸಿರಾಜ್​ ಕಾಂಗರೂ ಪಡೆಯನ್ನು 294 ರನ್​ಗೆ ಕಟ್ಟಿ ಹಾಕಲು ನೆರವಾದರು. ಇನ್ನೂ ಬ್ಯಾಟಿಂಗ್​ನಲ್ಲಿ ಶುಭ್ಮನ್​ ಗಿಲ್ ಆಕರ್ಷಕ 91 ರನ್​ಗಳ ಮೂಲಕ ಮಿಂಚಿದ್ರು. ಪೂಜಾರ ಎಂದಿನಿಂತೆ ವಿಕೆಟ್​ ಕಾಯ್ದುಕೊಂಡು 56 ರನ್​ಗಳಿಸಿ, ಬಂದವಿರಿಗೆ ಸಿಡಿಯಲು ದಾರಿ ಮಾಡಿಕೊಟ್ಟರು. ಮತ್ತೊಂದೆಡೆ ಯುವ ಆಟಗಾರ ರಿಶಭ್​ ಪಂತ್​ ತಮ್ಮ ಸ್ವಾಭಾವಿಕ ಆಟದಿಂದ ಕಾಂಗೂರುಗಳನ್ನ ಬೇಟೆಯಾಡಿದರು. ನಾಲ್ಕನೇ ಟೆಸ್ಟ್​ನ ಕೊನೆಯ ಇನ್ನಿಂಗ್ಸ್​ನಲ್ಲಿ ಅದ್ಭುತ ಆಟವಾಡಿದ ರಿಷಭ್​ ಪಂತ್​​​ ಆಸೀಸ್​ ಸೋಲಿಗೆ ಕಾರಣವಾದರು.

ರಹಾನೆ - ಶಾಸ್ತ್ರಿ ಗೆಲುವಿನ ಮಂತ್ರ : ಯಂಗ್​ ಇಂಡಿಯಾ ಉತ್ತಮ ಪ್ರದರ್ಶನ ನೀಡಲು ಕಾರಣ ನಾಯಕ ರಹಾನೆ ಮತ್ತು ಕೋಚ್​ ರವಿಶಾಸ್ತ್ರಿ. ಹಿರಿಯ ಆಟಗಾರರ ಅನುಪಸ್ಥಿತಿ ಟೀಂ ಇಂಡಿಯಾದ ಮೇಲೆ ಯಾವುದೇ ರೀತಿ ಅಡ್ಡ ಪರಿಣಾಮ ಬೀರದಂತೆ ನೋಡಿಕೊಂಡವರು ಕೋಚ್​ ಮತ್ತು ಕ್ಯಾಪ್ಟನ್​. ರವಿಶಾಸ್ತ್ರಿ ಅವರ ಸ್ಫೂರ್ತಿದಾಯಕ ಮಾತುಗಳು ಯುವಕರನ್ನು ಹುರಿದುಂಬಿಸಿದ್ರೆ, ರಹಾನೆ ಅವರು ಸರಿಯಾಗಿ ಆಟವನ್ನು ರೀಡ್​ ಮಾಡಿದ್ರು. ಮತ್ತೊಂದೆಡೆ ರೋಹಿತ್​ ಶರ್ಮಾ ಅವರು ಸೂಕ್ತ ಸಲಹೆ ಅಜಿಂಕ್ಯಾ ರಹಾನೆ ಮತ್ತು ಯಂಗ್​ ಆಟಗಾರರಿಗೆ ಯಾವ ರೀತಿ ಆಡಬೇಕು ಆಸೀಸ್​ ನೆಲದಲ್ಲಿ ಎಂಬ ಅರಿವು ಮೂಡಿಸಿದ್ರು.

ಮತ್ತೊಂದೆಡೆ ರಹಾನೆ ಸಮಯಕ್ಕೆ ತಕ್ಕಂತೆ ಬೌಲರ್​ಗಳನ್ನು ಬದಲಿಸಿದ್ರು. ಪ್ರತಿ ಆಟಗಾರರ ವಿರುದ್ಧ ಸೂಕ್ತ ರಣನೀತಿಯೊಂದಿಗೆ ಬಲೆ ಹೆಣೆದ್ರು. ಈ ಸಲ ಭಾರತದ ಹೋಮ್​ವರ್ಕ್​ ಚೆನ್ನಾಗಿತ್ತು. ಆಸೀಸ್​ ಬ್ಯಾಟ್ಸಮನ್​ಗಳನ್ನು ಲೆಗ್​ ಸೈಡ್​ ಜಾಲದಲ್ಲಿ ಕಟ್ಟಿ ಹಾಕಿದ್ರು. ಲೆಗ್​ ಸೈಡ್​ ಬಲಿಷ್ಠ ಫೀಲ್ಡಿಂಗ್​ನಿಂದ ಆಸೀಸ್​ ಆಟಗಾರರನ್ನು ಒತ್ತಡಕ್ಕೆ ಸಿಲುಕಿಸಿ ಅವರ ವಿಕೆಟ್​ ಪಡೆದರು.

ಜೊತೆಗೆ ಅವರ ರನ್​ರೇಟ್​ ಹೆಚ್ಚದಂತೆ ನೋಡಿಕೊಳ್ಳಲು ಭಾರತೀಯರು ಯಶಸ್ವಿಯಾದ್ರು. ಭಾರತ ಪ್ರವಾಸ ಕೈಗೊಂಡಾಗ ಆಸೀಸ್​ರು ಇಲ್ಲಿ ಅನುಭವಿಸುವಂತಹ ಕಷ್ಟವನ್ನು ಕಾಂಗರೂಗಳು ತಮ್ಮ ನೆಲದಲ್ಲಿ ಅನುಭವಿಸಿದ್ರು. ಭಾರತ ರಚಿಸಿದ ಚಕ್ರವ್ಯೂಹ ಭೇದಿಸುವಲ್ಲಿ ವಿಫಲವಾದ ಆಸೀಸ್​ ಯಂಗ್​ ಇಂಡಿಯಾದ ಮುಂದೆ ಶರಣಾಗುವ ಮೂಲಕ ಟೆಸ್ಟ್​ ಸರಣಿಯನ್ನು ಕೈ ಚೆಲ್ಲಿತು.

ಆಸೀಸ್​ ಸರಣಿಯಲ್ಲಿ ಭಾರತ ತೋರಿಸಿದ ಪ್ರದರ್ಶನ ನಿಜಕ್ಕೂ ಪ್ರಶಂಸನೀಯ : ಸರಣಿಯಿಂದ ಭಾರತದ ಬೆಂಚ್​ ಶಕ್ತಿ ಹೆಚ್ಚಿದೆ. ಯುವ ಆಟಗಾರರು ಸಹ ಎಂತಹ ಪರಿಸ್ಥಿತಿಯಲ್ಲೂ ತಂಡಕ್ಕೆ ಆಸರೆಯಾಗಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಮತ್ತೊಂದೆಡೆ ರಹಾನೆ ಟೆಸ್ಟ್​ಗೆ ಹೇಳಿ ಮಾಡಿಸಿದ ನಾಯಕ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ತಂಡವನ್ನು ಯಾವ ರೀತಿ ಮುನ್ನೆಡಸಬೇಕು. ಯಾವಾಗ ಯಾವ ಆಟಗಾರನನ್ನು ಕಣಕ್ಕಿಳಿಸಬೇಕು, ಫೀಲ್ಡಿಂಗ್​ ಹೇಗೆ ಸೆಟ್​ ಮಾಡಬೇಕು ಎಲ್ಲದರಲ್ಲೂ ಪರಿಪೂರ್ಣತೆಯನ್ನು ತೋರಿರುವ ರಹಾನೆ ಭವಿಷ್ಯದ ನಾಯಕ ಎಂಬುದನ್ನು ಸಾಬೀತು ಮಾಡಿದ್ದಾರೆ. ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಮುಡಿಗೇರಿಸಿಕೊಳ್ಳಲು ಭಾರತ ಸರ್ವರೀತಿಯಿಂದ ಸಜ್ಜಾಗಿದೆ.

Last Updated : Jan 19, 2021, 4:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.