ಹೈದರಾಬಾದ್: 2019ರ ಏಕದಿನ ವಿಶ್ವಕಪ್ ನಂತರ ಕ್ರಿಕೆಟ್ನಿಂದ ದೂರ ಉಳಿದಿರುವ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ತಮ್ಮ ಪತ್ನಿ ಸಾಕ್ಷಿ ಅವರ ಕಾಲೆಳೆದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಾಹಿ ದಂಪತಿ ಸ್ನೇಹಿತರೊಂದಿಗೆ ಕಾಲ ಕಳೆಯುತ್ತಿರುವಾಗ ಸಾಕ್ಷಿ ಧೋನಿ ಅವರ ವಿಡಿಯೋ ಚಿತ್ರೀಕರಿಸಲು ಮುಂದಾಗಿದ್ದಾರೆ. ವಿಡಿಯೋ ಮಾಡುವುದನ್ನ ಕಂಡ ಧೋನಿ 'ಇನ್ಸ್ಟಾಗ್ರಾಮ್ ನಲ್ಲಿ ತನ್ನ ಫಾಲೋವರ್ಗಳನ್ನು ಹೆಚ್ಚಿಸಿಕೊಳ್ಳೋದಕ್ಕೆ ನನ್ನ ವೀಡಿಯೋಗಳನ್ನ ಪೋಸ್ಟ್ ಮಾಡುತ್ತಿದ್ದಾಳೆ ಎಂದು ಪತ್ನಿಯನ್ನ ಕಿಚಾಯಿಸಿದ್ದಾರೆ.
-
.@msdhoni : Dekho aapne Instagram ke followers badhne ke liye, ye sab kar rahe hai... @SaakshiSRawat : All your followers love me also no..
— MS Dhoni Fans Official (@msdfansofficial) January 30, 2020 " class="align-text-top noRightClick twitterSection" data="
Check out the hilarious convo here!🤣#Dhoni #Sakshi #MahiWay ❤️😇 pic.twitter.com/B0VNZ4mUOH
">.@msdhoni : Dekho aapne Instagram ke followers badhne ke liye, ye sab kar rahe hai... @SaakshiSRawat : All your followers love me also no..
— MS Dhoni Fans Official (@msdfansofficial) January 30, 2020
Check out the hilarious convo here!🤣#Dhoni #Sakshi #MahiWay ❤️😇 pic.twitter.com/B0VNZ4mUOH.@msdhoni : Dekho aapne Instagram ke followers badhne ke liye, ye sab kar rahe hai... @SaakshiSRawat : All your followers love me also no..
— MS Dhoni Fans Official (@msdfansofficial) January 30, 2020
Check out the hilarious convo here!🤣#Dhoni #Sakshi #MahiWay ❤️😇 pic.twitter.com/B0VNZ4mUOH
ಧೋನಿ ಮಾತಿಗೆ ಪ್ರತಿಕ್ರಿಯೆ ನೀಡಿರುವ ಸಾಕ್ಷಿ, ನಿಮ್ಮ ಎಲ್ಲಾ ಅಭಿಮಾನಿಗಳು ನನ್ನನ್ನ ಕೂಡ ಪ್ರೀತಿಸುತ್ತಾರೆ. ನಾನು ನಿನ್ನ ಅರ್ಧಾಂಗಿ ರಾಜ, ಬೇಬಿ, ಸ್ವೀಟಿ ಎಂದೆಲ್ಲ ಧೋನಿಯನ್ನು ಮೆಚ್ಚಿಸುವ ಮಾತುಗಳನ್ನಾಡಿ ಅವರ ಹಿಂದೆ ಹಿಂದೆ ಹೋಗಿ ವಿಡಿಯೋ ಮಾಡುವುದನ್ನು ಮುಂದುವರಿಸಿದ್ದಾರೆ. ಅಲ್ಲದೆ ಅಭಿಮಾನಿಗಳೆಲ್ಲ ನನ್ನ ಹೀರೋ ಧೋನಿ ಎಲ್ಲಿ, ಮಾಹಿ ಭಾಯಿ, ಧೋನಿ ತಲಾ ಎಂದು ನಿಮ್ಮನ್ನ ನೋಡಲು ಯಾವಾಗಲೂ ಕಾಯುತ್ತಿರುತ್ತಾರೆ ಎಂದು ಸಾಕ್ಷಿ ಹೇಳಿದ್ದಾರೆ.
ಸದ್ಯ ಧೋನಿ ತಮ್ಮ ಪತ್ನಿಯನ್ನ ಕಿಚಾಯಿಸಿರುವ ಮತ್ತು ಸಾಕ್ಷಿ, ಧೋನಿಯನ್ನ ಹೊಗಳಿರುವ ವಿಡಿಯೋ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ. ಈ ದಂಪತಿಯ ಪ್ರೀತಿಯ ಜಗಳಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಅಲ್ಲದೆ ಧೋನಿಯನ್ನು ಮತ್ತೆ ಕ್ರಿಕೆಟ್ಗೆ ಮರಳುವಂತೆ ಕೇಳಿಕೊಳ್ಳುತ್ತಿದ್ದಾರೆ. ಆದರೆ ಧೋನಿ ಐಪಿಎಲ್ನಲ್ಲಿ ನೀಡುವ ಪ್ರದರ್ಶನದ ಮೇಲೆ ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕು ನಿಂತಿದೆ ಎಂದು ಕೋಚ್ ರವಿಶಾಸ್ತ್ರಿ ಈಗಾಗಲೆ ತಿಳಿಸಿರುವುದರಿಂದ ಇನ್ನೆರಡು ತಿಂಗಳು ಧೋನಿಗಾಗಿ ಅಭಿಮಾನಿಗಳು ಕಾಯಲೇಬೇಕಿದೆ.