ನವದೆಹಲಿ: ಕಳೆದ ಕೆಲ ವರ್ಷಗಳಿಂದ ಟೀಂ ಇಂಡಿಯಾ ಹಿರಿಯ ಆಟಗಾರ ಎಂಎಸ್ ಧೋನಿ ವಿರುದ್ಧ ಹರಿಹಾಯುತ್ತಿರುವ ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್ ಇದೀಗ ಟೀಂ ಇಂಡಿಯಾ ಸೆಮಿಫೈನಲ್ನಲ್ಲಿ ಸೋಲು ಕಾಣುವುದಕ್ಕೆ ಆತನೇ ಕಾರಣ ಎಂದು ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ.
ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಡೆತ್ ಓವರ್ಗಳಲ್ಲಿ ಆಡುವ ಕಲೆ ಅವರಿಗೆ ಗೊತ್ತಿಲ್ಲ. ಎದುರಾಳಿ ಆಟಗಾರ ರವೀಂದ್ರ ಜಡೇಜಾ ಮೇಲೆ ಹೆಚ್ಚಿನ ಒತ್ತಡ ಹಾಕಿ ವಿಕೆಟ್ ಒಪ್ಪಿಸುವಂತೆ ಮಾಡಿದರು. ನಾನ್ ಸ್ಟ್ರೈಕ್‌ನಲ್ಲಿದ್ದು ಅವರು ಬಾಲ್ ಮಿಸ್ ಮಾಡುವುದರಲ್ಲೇ ಕಾಲ ಕಳೆದರು. ಹೀಗಾಗಿ ಅವರೇ ವಿಶ್ವಕಪ್ ಸೆಮಿಫೈನಲ್ ಸೋಲು ಕಾಣಲು ನೇರ ಹೊಣೆ ಎಂದು ದೂರಿದ್ದಾರೆ.
ಮಿಸ್ಟರ್ ಮಹೇಂದ್ರ ಸಿಂಗ್ ಧೋನಿ, ನೀವು ಈಗಾಗಲೇ ಬಹಳಷ್ಟು ಕ್ರಿಕೆಟ್ ಆಡಿದ್ದೀರಿ. ಒತ್ತಡದ ವೇಳೆ ಏನು ಮಾಡ್ಬೇಕು, ಏನ್ ಮಾಡಬಾರದು ಎಂಬುದರ ಬಗ್ಗೆ ನಿಮಗೆ ಗೊತ್ತಿಲ್ಲ. ತಂಡದಿಂದ ನೀವೂ ಹೊರಹೋಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಕ್ರಿಕೆಟ್ನಿಂದ ಅಂಬಟಿ ರಾಯುಡು ನಿವೃತ್ತಿ ಪಡೆದುಕೊಳ್ಳುವುದಕ್ಕೂ ಎಂಎಸ್ ಧೋನಿ ನೇರ ಹೊಣೆ, ಅವರ ನಿವೃತ್ತಿ ಹಿಂದೆ ಎಂಎಸ್ ಕೈವಾಡವಿದೆ ಎಂದು ಯೋಗರಾಜ್ ಸಿಂಗ್ ಆಕ್ರೋಶ ವ್ಯಕ್ತಪಡಿಸಿದ್ದರು.