ರಾಂಚಿ: ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಫೈನಲ್ ಟೆಸ್ಟ್ ಪಂದ್ಯದ ಮೂರನೇ ದಿನವಾದ ಇಂದು ಕೊಹ್ಲಿ ಪಡೆ ಹರಿಣಗಳ ಮೇಲೆ ಸಖತ್ ಸವಾರಿ ಮಾಡಿದ್ದು, ಕೊನೆ ಟೆಸ್ಟ್ ಪಂದ್ಯದಲ್ಲೂ ಗೆಲುವಿನ ನಗೆ ಬೀರುವುದು ಬಹುತೇಕ ಖಚಿತವಾಗಿದೆ.
ಇದರ ಮಧ್ಯೆ ಅದ್ಭುತವಾಗಿ ವಿಕೆಟ್ ಕೀಪಿಂಗ್ ಮಾಡುತ್ತಿದ್ದ ವೃದ್ಧಿಮಾನ್ ಸಾಹಾ ಗಾಯಗೊಂಡು ಮೈದಾನದಿಂದ ಹೊರನಡೆದಿದ್ದು, ಮತ್ತೋರ್ವ ವಿಕೆಟ್ ಕೀಪರ್ ರಿಷಭ್ ಪಂತ್ ಅವರ ಸ್ಥಾನ ಅಲಂಕರಿಸಿದ್ದಾರೆ. ಕೊನೆ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲೂ ಅದ್ಭುತವಾಗಿ ಎರಡು ಕ್ಯಾಚ್ ಹಿಡಿದಿರುವ ಸಾಹಾ ಎಲ್ಲರ ಮೆಚ್ಚುಗೆಗೆ ಕಾರಣವಾಗಿದ್ದರು. ಆದರೆ ಪಂದ್ಯದ ಮಧ್ಯದಲ್ಲೇ ಕೈಬೆರಳಿಗೆ ಗಾಯಗೊಂಡ ಕಾರಣ ಮೈದಾನದಿಂದ ಹೊರ ನಡೆಯಬೇಕಾಯಿತು.
ಮೂರು ಟೆಸ್ಟ್ ಪಂದ್ಯಗಳಲ್ಲಿ ಅದ್ಭುತವಾಗಿ ವಿಕೆಟ್ ಕೀಪಿಂಗ್ ಮಾಡಿರುವ ವೃದ್ಧಿಮಾನ್ ಸಾಹಾ ಈಗಾಗಲೇ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದು, ಓರ್ವ ಅದ್ಭುತ ವಿಕೆಟ್ ಕೀಪರ್ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಗಾಯಕ್ಕೊಳಗಾಗಿದ್ದ ವೃದ್ಧಿಮಾನ್ ಇದೀಗ ತಂಡಕ್ಕೆ ಕಮ್ಬ್ಯಾಕ್ ಮಾಡಿದ್ದು, ಇದೀಗ ಮತ್ತೆ ಗಾಯಗೊಂಡಿದ್ದಾರೆ.