ETV Bharat / sports

ಖ್ಯಾತ ಕುಸ್ತಿಪಟು ಬಬಿತಾ ಪೊಗಾಟ್, ತಂದೆ ಮಹವೀರ್​ ಬಿಜೆಪಿ ಸೇರ್ಪಡೆ..?

author img

By

Published : Aug 12, 2019, 12:57 PM IST

ಭಾರತದ ಖ್ಯಾತ ಕುಸ್ತಿಪಟು ಬಬಿತಾ ಪೊಗಾಟ್​ ಹಾಗೂ ಅವರ ತಂದೆ ಮಹವೀರ್​ ಪೊಗಾಟ್​ ಇಂದು ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ

Babita Phogat

ಚಂಡೀಗಢ​: ಭಾರತದ ಖ್ಯಾತ ಕುಸ್ತಿಪಟು ಬಬಿತಾ ಪೊಗಾಟ್​ ಹಾಗೂ ಅವರ ತಂದೆ ಮಹವೀರ್​ ಪೊಗಾಟ್​ ಇಂದು ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.

2014, 2018 ರ ಕಾಮನ್​ ವೆಲ್ತ್​ ಚಾಂಪಿಯನ್​ ಬಬಿತಾ ಪೊಗಾಟ್​ ಹಾಗೂ ಅವರ ತಂದೆ ಮಹವೀರ ಪೊಗಾಟ್​ ಹರಿಯಾಣ ವಿಧಾನ ಸಭೆ ಚುನಾವಣೆಗೂ ಮುನ್ನ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎನ್ನಲಾಗುತ್ತಿದೆ.

ಹರಿಯಾಣ ಮುಖ್ಯಮಂತ್ರಿ ಮನೋಹರ್​ ಲಾಲ್​ ಖಟ್ಟರ್​ ಮೊನ್ನೆಯಷ್ಟೇ 370 ರದ್ದಾಗಿರುವುದರ ಬಗ್ಗೆ ಮಾತನಾಡುತ್ತಾ ನಮ್ಮ ಯುವಕರು ಬಿಹಾರದತ್ತ ಯುವತಿಯರಿಗಾಗಿ ಕಣ್ಣುಹಾಯಿಸುವುದನ್ನು ಬಿಟ್ಟು ಕಾಶ್ಮೀರಿ ಸುಂದರ ಯುವತಿಯರನ್ನು ಮದುವೆಯಾಗಬಹುದು ಎಂದು ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗಿದ್ದರು.

ಈ ಸಂದರ್ಭದಲ್ಲಿ ಖಟ್ಟರ್​ ಪರ ನಿಂತಿದ್ದ ಬಬಿತಾ " ಆ ಹೇಳಿಕೆ ಅಪರಾದವೇನಲ್ಲ" ಎಂದಿದ್ದರು. ಖಟ್ಟರ್​ ಹೇಳಿಕೆಯನ್ನು ತಪ್ಪಾಗಿ ತೋರಿಸುವುದು ಬೇಡ, ಅವರ ಹೇಳಿಕೆಯಿಂದ ನಮ್ಮ ಸಹೋದರಿಯರಿಗೆ ಮತ್ತು ಮಕ್ಕಳಿಗೆ ಯಾವುದೇ ರೀತಿಯ ಕೆಟ್ಟ ಪರಿಣಾಮ ಬೀರಿಲ್ಲ ಎಂದು ಪತ್ರಕರ್ತರೊಬ್ಬರಿಗೆ ಟ್ವೀಟ್​ ಮೂಲಕ ತಿಳಿಸಿದ್ದರು.

ಈ ವರ್ಷ ಹರಿಯಾಣದ 90 ಕ್ಷೇತ್ರಗಳಿಗೆ ವಿಧಾನಸಭೆ ಚುನಾವಣೆ ನಡೆಯಲಿದ್ದು, ಅದಕ್ಕೂ ಮೊದಲು ಹರಿಯಾಣದಲ್ಲಿ ಪ್ರಸಿದ್ದರಾಗಿರುವ ಪೊಗಾಟ್​ ಕುಟಂಬ ಬಿಜೆಪಿ ಸೇರುತ್ತಿರುವುದು ಬಿಜೆಪಿಗೆ ಬಲ ತಂದುಕೊಡಲಿದೆ ಎನ್ನಲಾಗುತ್ತಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.