ETV Bharat / sports

'ಬಿಸಿಸಿಐಗೆ ಭದ್ರ ಬುನಾದಿಯಿದೆ, ವಿವೋ ಬಿಟ್ಟು ಹೋಗಿದ್ದರಿಂದ ಆರ್ಥಿಕ ಬಿಕ್ಕಟ್ಟು ಉಂಟಾಗದು' - Indian Premier League

'ನಾನಿದನ್ನು ಆರ್ಥಿಕ ಬಿಕ್ಕಟ್ಟು ಎಂದು ಕರೆಯುವುದಿಲ್ಲ' ಎಂದಿರುವ ಗಂಗೂಲಿ, 'ಇದೊಂದು ಸಣ್ಣ ಹಿನ್ನಡೆಯಷ್ಟೇ. ಈ ಸಂದರ್ಭವನ್ನು ವೃತ್ತಿಪರವಾಗಿ ನಿಭಾಯಿಸುವಷ್ಟು ತಾಕತ್ತು ಬಿಸಿಸಿಐಗಿದೆ' ಎಂದಿದ್ದಾರೆ.

ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ
ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ
author img

By

Published : Aug 9, 2020, 5:47 PM IST

ಮುಂಬೈ: 13ನೇ ಆವೃತ್ತಿಯ ಟೈಟಲ್​ ಸ್ಪಾನ್ಸರ್​ಶಿಪ್​ನಿಂದ ವಿವೋ ಹೊರ ಹೋಗಿರುವುದು ಬಿಸಿಸಿಐಗೆ ಸಣ್ಣ ಹಿನ್ನಡೆಯೇ ಹೊರತು, ಅದರಿಂದ ದೊಡ್ಡ ಆರ್ಥಿಕ ಬಿಕ್ಕಟ್ಟು ಉಂಟಾಗುವುದಿಲ್ಲ ಎಂದು ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ಹೇಳಿದ್ದಾರೆ.

'ನಾನಿದನ್ನು ಆರ್ಥಿಕ ಬಿಕ್ಕಟ್ಟು ಎಂದು ಕರೆಯುವುದಿಲ್ಲ' ಎಂದಿರುವ ಗಂಗೂಲಿ, 'ಇದೊಂದು ಸಣ್ಣ ಹಿನ್ನಡೆಯಷ್ಟೇ. ಈ ಸಂದರ್ಭವನ್ನು ವೃತ್ತಿಪರವಾಗಿ ನಿಭಾಯಿಸುವಷ್ಟು ತಾಕತ್ತು ಬಿಸಿಸಿಐಗಿದೆ' ಎಂದಿದ್ದಾರೆ.

'ಯಾವುದೂ ಕೂಡಾ ರಾತ್ರಿ ಕಳೆದು ಬೆಳಗಾಗುವುದರೊಳಗೆ ಆಗುವುದಿಲ್ಲ. ದೀರ್ಘಕಾಲದ ಸಿದ್ಧತೆಯಿದ್ದಾಗ ಮಧ್ಯದಲ್ಲಿ ನೀವು ಕೆಲವನ್ನು ಕಳೆದುಕೊಳ್ಳಲು ಮತ್ತು ಅದೇ ರೀತಿ ಯಶಸ್ವಿಯಾಗಲು ಸಿದ್ದರಿರಬೇಕು' ಎಂದು ಹೇಳಿದ್ದಾರೆ.

ನಮ್ಮ ಬಳಿ ಪ್ರತೀ ಸಮಸ್ಯೆಗಳಿಗೂ ಪ್ಲಾನ್​ ಎ ಮತ್ತು ಪ್ಲಾನ್​ ಬಿ ರೀತಿಯ ಯೋಜನೆಗಳಿರುತ್ತವೆ. ಇದಕ್ಕೆ ಸಂವೇದನಾಶೀಲ ಜನ, ಸಂವೇದನಾಶೀಲ ಬ್ರ್ಯಾಂಡ್‌ಗಳು ಮತ್ತು ಸಂವೇದನಾಶೀಲ ಕಾರ್ಪೊರೇಟ್‌ಗಳು ನಮ್ಮ ಜೊತೆ ಕೈ ಜೋಡಿಸುತ್ತಾರೆ. ಬಿಸಿಸಿಐ ಒಂದು ಬಲಿಷ್ಠವಾದ ಸಂಸ್ಥೆ. ಆಟಗಾರರು, ಆಡಳಿತ ತಜ್ಞರು ಈ ಸಂಸ್ಥೆಯನ್ನು ಬಲಿಷ್ಠವನ್ನಾಗಿಸಿದ್ದಾರೆ. ಇಂತಹ ಹಲವು ಹಿನ್ನಡೆಗಳನ್ನು ಬಿಸಿಸಿಐ ತಡೆದುಕೊಳ್ಳಲಿದೆ ಎಂದು ಗಂಗೂಲಿ ಹೇಳುತ್ತಾರೆ.

ಲಡಾಕ್​ ಗಡಿಯಲ್ಲಿ ಚೀನಾ ಸೈನಿಕರ ಆಕ್ರಮಣದ ನಂತರ ಚೀನಾ ವಸ್ತುಗಳನ್ನು ದೇಶದಲ್ಲಿ ಬಹಿಷ್ಕರಿಸಲು ಕರೆ ನೀಡಲಾಗಿದೆ. ಆದರೆ ಬಿಸಿಸಿಐ ಚೀನಾ ಮೂಲದ ವಿವೋ ಕಂಪನಿಯ ಪ್ರಾಯೋಜಕತ್ವವನ್ನು ಮುಂದುವರಿಸುತ್ತಿರುವುದಾಗಿ ಘೋಷಿಸಿತ್ತು. ಆದರೆ ಈ ನಿರ್ಧಾರದಿಂದ ಐಪಿಎಲ್​ ವಿರುದ್ಧವೇ ಅಭಿಮಾನಿಗಳು ತಿರುಗಿ ಬಿದ್ದಿದ್ದರಿಂದ ಸ್ವತಃ ವಿವೋ 2021ರ ತನ್ನ ಪ್ರಾಯೋಜಕತ್ವನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.